newsfirstkannada.com

ಲೈಂಗಿಕ ದೌರ್ಜನ್ಯ ಪ್ರಕರಣ.. ಮುರುಘಾ ಶ್ರೀಗಳಿಗೆ ಶಾಕ್​ ಕೊಟ್ಟ ಚಿತ್ರದುರ್ಗ ಜಿಲ್ಲಾ ಕೋರ್ಟ್​​!

Share :

10-11-2023

    ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೇಸ್​​

    ಒಂದು ಕೇಸಲ್ಲಿ ಜಾಮೀನು ಪಡೆದಿದ್ದ ಮುರುಘಾ ಶ್ರೀಗೆ ಶಾಕ್​​!

    ಚಿತ್ರದುರ್ಗ ಜಿಲ್ಲಾ ಕೋರ್ಟ್​​ನಿಂದ ಅರ್ಜಿ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಒಂದು ಕೇಸ್​ ಸಂಬಂಧ ಇತ್ತೀಚೆಗೆ ಮುರುಘಾ ಮಠದ ಡಾ. ಶಿವಮೂರ್ತಿ ಶ್ರೀಗಳಿಗೆ ಜಾಮೀನು ನೀಡಿ ಹೈಕೋರ್ಟ್​ ಆದೇಶಿಸಿತ್ತು. ಕೇವಲ ಒಂದು ಕೇಸಲ್ಲಿ ಮಾತ್ರ ಜಾಮೀನು ಸಿಕ್ಕ ಕಾರಣ ಮುರುಘಾ ಶ್ರೀಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಹೀಗಾಗಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಕೋರ್ಟ್​, ಯಾವುದೇ ಕಾರಣಕ್ಕೂ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಬಾರದು ಎಂದು ಹೇಳಿತ್ತು.

ಇನ್ನು, ಸದ್ಯ ಸಿಕ್ಕಿರೋ ಜಾಮೀನು ಮೇಲೆ ರಿಲೀಸ್​ ಮಾಡಿ ಎಂದು ಚಿತ್ರದುರ್ಗ ಜಿಲ್ಲಾ ಕೋರ್ಟ್​ನಲ್ಲಿ ಮನವಿ ಮಾಡಲಾಗಿತ್ತು. ಈ ಸಂಬಂಧ ಚಿತ್ರದುರ್ಗ ಜಿಲ್ಲಾ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಬಿಡುಗಡೆ ಅರ್ಜಿ ವಿಚಾರಣೆಯನ್ನು ನವೆಂಬರ್​ 15ಕ್ಕೆ ಮುಂದೂಡಿದ ಜಿಲ್ಲಾ ಕೋರ್ಟ್​​, ತೀರ್ಪು ಕಾಯ್ದಿರಿಸಿದೆ. ಜತೆಗೆ ಹೈಕೋರ್ಟ್​ ಕೊಟ್ಟ ತೀರ್ಪಿನ ಮೇರೆಗೆ ದಾಖಲೆ ಪರಿಶೀಲನೆಗೆ ಮುಂದಾದ ಜಿಲ್ಲಾ ನ್ಯಾಯಲಯ, ಜೈಲಿನಿಂದ ಬಿಡುಗಡೆಗೆ ನವೆಂಬರ್ 15ಕ್ಕೆ ತೀರ್ಪು ನೀಡಲಿದೆ.

ಮುರುಘಾ ಶ್ರೀಗಳಿಗೆ ಮೊದಲು ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದೆ. ಆದರೆ, ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣದಲ್ಲಿ ಮಾತ್ರ ಜೈಲಿನಲ್ಲೇ ಉಳಿಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೈಂಗಿಕ ದೌರ್ಜನ್ಯ ಪ್ರಕರಣ.. ಮುರುಘಾ ಶ್ರೀಗಳಿಗೆ ಶಾಕ್​ ಕೊಟ್ಟ ಚಿತ್ರದುರ್ಗ ಜಿಲ್ಲಾ ಕೋರ್ಟ್​​!

https://newsfirstlive.com/wp-content/uploads/2023/11/Murugha-Shree-Bail.jpg

Load More