ತಮ್ಮ ಮಗು ವಾಪಸ್ ಕೊಡದಿದ್ದಕ್ಕೆ ಸಿಬ್ಬಂದಿ ವಿರುದ್ಧ ಆಕ್ರೋಶ
ಮಗುವನ್ನ ಆಗಲೇ ತೆಗೆದುಕೊಂಡು ಹೋಗಿದ್ದೀರಿ ಎಂದ ಸಿಸ್ಟರ್
ICUನಲ್ಲಿನ ಮಗು ಸಂಜೆಯಾದರೂ ಕೊಡದ ಆಸ್ಪತ್ರೆ ಸಿಬ್ಬಂದಿ
ಚಿತ್ರದುರ್ಗ: ICUನಲ್ಲಿಟ್ಟಿದ್ದ ಮಗುವನ್ನು ಸಿಬ್ಬಂದಿ ಬದಲಾವಣೆ ಮಾಡಿ ನಿರ್ಲಕ್ಷ್ಯ ವಹಿಸಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆಯ ಸಿಸ್ಟರ್ ಆಗಿರುವ ಮಧುಶ್ರೀ ಎನ್ನುವರು ಮಗುವನ್ನು ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಆಯಿತೋಳು ಗ್ರಾಮದ ಗೀತಾ, ಪರಮೇಶಪ್ಪ ಎನ್ನುವ ದಂಪತಿಗೆ ನಿನ್ನೆ 1:49 ಗಂಟೆಗೆ ಗಂಡು ಮಗು ಜನಿಸಿತ್ತು. ಈ ಮಗುವನ್ನು ಐಸಿಯುನಲ್ಲಿಡಿ ಎಂದು ಸಿಸ್ಟರ್ ಕೈಗೆ ಕೊಡಲಾಗಿತ್ತು. ಬಳಿಕ ಒಂದು ಗಂಟೆ ತಡೆದು ಕೊಡುತ್ತೇವೆ ಎಂದಿದ್ದರು.
ಆದರೆ ಸಂಜೆಯಾದರೂ ಮಗುವನ್ನು ಕೊಟ್ಟಿರಲಿಲ್ಲ. ಹೀಗಾಗಿ ದಂಪತಿ ನಮ್ಮ ಮಗುವನ್ನು ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಆಗಲೇ ನಿಮ್ಮ ಮಗುವನ್ನು ತೆಗೆದುಕೊಂಡು ಹೋಗಿದ್ದೀರಿ ಎಂದು ಹೇಳಿದ್ದಾರೆ. ಇದರಿಂದ ದಂಪತಿಗೆ ದೊಡ್ಡ ಸಿಡಿಲು ಬಡಿದಂತಾಗಿದೆ. ಈ ವೇಳೆ ಅಮೃತವರ್ಷಿಣಿ ಎನ್ನುವರಿಗೆ ಸಿಬ್ಬಂದಿ ಮಗುವನ್ನ ಕೊಟ್ಟು ನಿರ್ಲಕ್ಷ್ಯ ವಹಿಸಿದ್ದಾರೆ.
ಬಳಿಕ ದಂಪತಿ ಹಾಗೂ ಕುಟುಂಬಸ್ಥರು ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಕ್ಕಳ ಐಸಿಯು ರೂಮ್ ಮುಂದೆ ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೀರಾ ಅಥವಾ ಬೇರೆ ಏನಾದ್ರೂ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಜಿಲ್ಲಾ ಸರ್ಜನ್ ಡಾ. ರವೀಂದ್ರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಮಗು ಬದಲಾವಣೆ ಆಗಿದ್ದು ಅದನ್ನು ತರಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ