newsfirstkannada.com

ಭಯಾನಕ ಆಕ್ಸಿಡೆಂಟ್.. ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬಸವರಾಜ್ ಹೊರಟ್ಟಿ

Share :

02-11-2023

  ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಸಭಾಪತಿ ಬಸವರಾಜ್ ಹೊರಟ್ಟಿ

  ಪೇರೆಂಟ್ಸ್​ ಮೀಟಿಂಗ್​ಗಾಗಿ​ ತುಮಕೂರಿಗೆ ಹೋಗುತ್ತಿದ್ದ ಕುಟುಂಬಸ್ಥರು

  ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ

ಚಿತ್ರದುರ್ಗ: ರಸ್ತೆ ಆ್ಯಕ್ಸಿಡೆಂಟ್​ನಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನ ಆಸ್ಪತ್ರೆಗೆ ಸೆರಿಸುವ ಮೂಲಕ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾನವೀಯತೆ ಮರೆದಿದ್ದಾರೆ. ಚಿತ್ರದುರ್ಗ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿದೆ.

ಗಾಯತ್ರಿ, ದಿವ್ಯತ್ವ ಮತ್ತು ಪ್ರಿಯಾಂಕಾ ಆಕ್ಸಿಡೆಂಟ್​ನಲ್ಲಿ ಗಾಯಗೊಂಡವರು. ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲು ಚಿಕಿತ್ಸೆ ಕೊಡಿಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇವರು ಪ್ರಯಾಣಿಸ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ರಭಸದಿಂದ ಡಿಕ್ಕಿ ಹೊಡೆದಿದ್ದರಿಂದ ಪ್ರಯಾಣಿಕರು ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಬೆಂಗಳೂರಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸವರಾಜ್ ಹೊರಟ್ಟಿ ಅವರು ಮಾರ್ಗ ಮಧ್ಯೆ ತಮ್ಮ ಕಾರನ್ನು ನಿಲ್ಲಿಸಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಘಟನಾ ಸ್ಥಳದಲ್ಲಿ ಬಸವರಾಜ್ ಹೊರಟ್ಟಿ

ಗಾಯಾಳುಗಳು ಗದುಗಿನ ಬಸವೇಶ್ವರ ನಗರ ವಿಶ್ವನಾಥ್ ಕಾಟವ್ ಕುಟುಂಬಸ್ಥರು ಎಂದು ತಿಳಿದು ಬಂದಿದೆ. ವಿದ್ಯಾರ್ಥಿ ದಿವ್ಯತ್ವ ತುಮಕೂರಿನ ಪ್ರುಡೆನ್ಸಿ ಇಂಟರ್ ನ್ಯಾಷನಲ್ ಸ್ಕೂಲ್​ನಲ್ಲಿ ಓದುತ್ತಿದ್ದಾರೆ. ನಾಳೆ ಪೇರೆಂಟ್ಸ್ ಮೀಟಿಂಗ್ ಇರುವ ಹಿನ್ನೆಲೆಯಲ್ಲಿ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೆಯಿಂದ ಬಂದ ಮತ್ತೊಂದು ಕಾರು ವೇಗದಲ್ಲೇ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಕಾರು ಚಲಿಸುತ್ತಿದ್ದ ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದ್ದು ಒಳಗಿದ್ದ ಕಾಟವ್ ಕುಟುಂಬಸ್ಥರು ರಸ್ತೆ ಮೇಲೆ ಬಿದ್ದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಯಾನಕ ಆಕ್ಸಿಡೆಂಟ್.. ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬಸವರಾಜ್ ಹೊರಟ್ಟಿ

https://newsfirstlive.com/wp-content/uploads/2023/11/BASAVARAJA_HORATTI_1.jpg

Load More