ಇಂದು ಸಂಜೆ ವೇಳೆಗೆ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಬೇಕು
ವಾರಂಟ್ ಜಾರಿಗೊಳಿಸಿ ನ್ಯಾಯಾಧೀಶೆ ಬಿ.ಕೆ ಕೋಮಲಾ ಆದೇಶ
ಬಾಡಿ ವಾರಂಟ್ ಆಧರಿಸಿ ಜಾಮೀನು ರಹಿತ ವಾರಂಟ್ ಜಾರಿ
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ 2ನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಈ ಆದೇಶವನ್ನು ನೀಡಿದ್ದಾರೆ. ಆರೋಪಿ ಮುರುಘಾ ಶ್ರೀಯನ್ನು ಕೂಡಲೇ ಬಂಧಿಸಿ ಇಂದು ಸಂಜೆ ಒಳಗೆ ಕೋರ್ಟ್ ಮುಂದೆ ಹಾಜರ್ ಪಡಿಸುವಂತೆ ಆದೇಶಿಸಲಾಗಿದೆ. ಕಳೆದ 2 ದಿನದ ಹಿಂದೆಯಷ್ಟೇ ಬಾಡಿ ವಾರಂಟ್ ಮೇಲೆ ವಿಚಾರಣೆ ಮಾಡಲಾಗಿತ್ತು.
ಜಾಮೀನು ರಹಿತ ವಾರೆಂಟ್ ಜಾರಿ ಆದ ಹಿನ್ನೆಲೆಯಲ್ಲಿ ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠದ ಕೋಣೆಯೊಂದರಲ್ಲಿ ಬಾಗಿಲು ಹಾಕಿಕೊಂಡಿದ್ದಾರೆ. ಒಳಗೆ ಯಾರು ಬರದಂತೆ ಶ್ರೀಗಳು ಸೂಚಿಸಿದ್ದಾರೆ. ಶೀಘ್ರವೇ ಬಂಧಿಸಿ ಕೋರ್ಟ್ಗೆ ಪೊಲೀಸರು ಹಾಜರು ಪಡಿಸಲಿದ್ದಾರೆ.
ಇನ್ನು ಚಿತ್ರದುರ್ಗ ಪೊಲೀಸರು ಗೊಂದಲದಲ್ಲಿದ್ದು ಮೊದಲ ಕೇಸ್ ಪ್ರಕಾರ ಹೈಕೋರ್ಟ್ ಹೇಳಿದಂತೆ ಮುರುಘಾ ಶ್ರೀಗಳು ಚಿತ್ರದುರ್ಗಕ್ಕೆ ಹೋಗಬಾರದು. ಆದರೆ ಈಗ 2ನೇ ಕೇಸ್ನಲ್ಲಿ ಆದೆಶ ನೀಡಿರುವ ಕೋರ್ಟ್ ಚಿತ್ರದುರ್ಗದಲ್ಲೇ ಇರುವುದರಿಂದ ಬಂಧಿಸಿ ಕರೆತರುವಂತೆ ಸೂಚಿಸಿದೆ. ಹೀಗಾಗಿ ಪೊಲೀಸರು ಗೊಂದಲದಲ್ಲಿದ್ದಾರೆ. ಹೀಗಾಗಿ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ