newsfirstkannada.com

ಪವಿತ್ರಾ ಗೌಡಗೆ ಆ ಫೋಟೋ ಕಳಿಸಿದ್ದ ವ್ಯಕ್ತಿ.. ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಯಲು!

Share :

Published June 13, 2024 at 6:24am

  ಫೆಬ್ರವರಿ 27ರಿಂದಲೇ ಮೆಸೇಜ್ ಮಾಡಿದ್ದನಂತೆ ಮೃತ ರೇಣುಕಾಸ್ವಾಮಿ

  ಮೆಸೇಜ್ ವಿಚಾರ ಮನೆ ಕೆಲಸ ಮಾಡುತ್ತಿದ್ದವನಿ​ಗೆ ಹೇಳಿದ್ದ ಪವಿತ್ರಾಗೌಡ

  ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದರಂತೆ ಪವಿತ್ರಾ?

ರೇಣುಕಾಸ್ವಾಮಿ ಹತ್ಯೆಗೆ ಕಾರಣವಾಗಿದ್ದು ಮೆಸೇಜ್‌ ಮಾತ್ರವೇ ಅನ್ನೋದು ಇದುವರೆಗೂ ಗೊತ್ತಾಗಿರೋ ಮಾಹಿತಿ. ಮೆಸೇಜ್‌ ಮಾಡಿದ್ದಷ್ಟೇ ಅಲ್ಲದೇ ಪವಿತ್ರಾಗೆ ಇನ್‌ಸ್ಟಾಗ್ರಾಂ ಮೂಲಕ ಪದೇ ಪದೇ ಅಶ್ಲೀಲ ಸಂದೇಶಗಳನ್ನ ಕಳಿಸ್ತಾ ಇದ್ದಿದ್ದೇ ಕೊಲೆಗೆ ಪ್ರಮುಖ ಕಾರಣ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಆದ್ರೆ ರೇಣುಕಾಸ್ವಾಮಿಗೆ ವಾರ್ನಿಂಗ್ ಕೊಟ್ಟು ಕಳಿಸಿದ್ರೆ ದರ್ಶನ್‌ ದೊಡ್ಡವನಾಗ್ತಿದ್ದ. ಆದ್ರೆ ಸಣ್ಣತನದ ಕೆಲಸ ಮಾಡೋದಕ್ಕೆ ಹೋಗಿ ಸಂಕಷ್ಟ ತಂದುಕೊಂಡಂತಾಗಿದೆ.

ಇದನ್ನೂ ಓದಿ: VIDEO: ನಟ ದರ್ಶನ್​ ಫೋಟೋಗೆ ಚಪ್ಪಲಿಯಿಂದ ಒದ್ದು, ಬೆಂಕಿ ಹಚ್ಚಿ ಆಕ್ರೋಶ

ನಟ ದರ್ಶನ್ ಹಾಗೂ ಆಪ್ತೆ ಪವಿತ್ರಾ ಗೌಡ ಌಂಡ್ ಪಟಾಲಂ ಬಂಧನ ಚಂದನವನದಲ್ಲಿ ಸಂಚಲನ ಸೃಷ್ಟಿಸಿದೆ. ಜಸ್ಟ್​ ಒಂದು ಮೆಸೇಜ್​ಗೆ ದಾಸ ಒಂದು ಕೊಲೆ ಮಾಡಿದ್ರಾ ಅನ್ನೋ ಚರ್ಚೆ ಜೋರಾಗಿದೆ. ಪವಿತ್ರಾ ಗೌಡಗೆ ಮೆಸೇಜ್‌ ಕಳಿಸಿ ಕಿರಿಕಿರಿ ಮಾಡಿದ್ದೇ ಕೊಲೆಗೆ ಕಾರಣ ಅನ್ನೋದು ವಿಚಾರಣೆ ವೇಳೆ ಬಯಲಾಗಿದೆ. ಪವಿತ್ರಾ ಗೌಡಗೆ ಫೆಬ್ರವರಿ 27ರಿಂದಲೇ ರೇಣುಕಾಸ್ವಾಮಿ ಅವಹೇಳನಕಾರಿಯಾಗಿ ಮೆಸೇಜ್‌ ಮಾಡಲು ಶುರು ಮಾಡಿದ್ದ. ಅಕೌಂಟ್ ಬ್ಲಾಕ್ ಮಾಡಿದ್ರೂ ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮಸೇಜ್ ಕಳಿಸಿದ್ದ.

ಆದ್ರೆ ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳಿಸಿದ್ದರಂತೆ. ಇದೇ ಮೆಸೇಜ್ ಆತನಿಗೆ ಮುಳುವಾಯ್ತು ಅಂತ ಆರೋಪಿಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಮರ್ಮಾಂಗದ‌ ಫೋಟೋ ಕಳಿಸಿದವನ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿರೋದು ಪೋಸ್ಟ್‌ಮಾರ್ಟಂ ರಿಪೋರ್ಟ್‌ನಲ್ಲಿ ಬಯಲಾಗಿದೆ. ಅಲ್ಲದೆ ಮರ್ಮಾಂಗದಿಂದ ರಕ್ತ ಸೋರಿಕೆಯಾಗಿರೋದು ಬೆಳಕಿಗೆ ಬಂದಿದೆ.

ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ಲಂತೆ ಪವಿತ್ರ!?

ಇನ್ನು, ರೇಣುಕಾಸ್ವಾಮಿ ಮೆಸೇಜ್​ ಕಳಿಸಿ ವಿಕೃತಿ ಮೆರೆಯುತ್ತಿದ್ದರಿಂದ ಬೇಸತ್ತ ಪವಿತ್ರಾ ಗೌಡ ಇದನ್ನು ಪವನ್​ಗೆ ಹೇಳಿದ್ದಳು. ಆದ್ರೆ ಈ ವಿಚಾರವನ್ನು ಯಾವುದೇ ಕಾರಣಕ್ಕೂ ದರ್ಶನ್​ಗೆ ಹೇಳಬೇಡ. ಗೊತ್ತಾದ್ರೆ ಅವರು ಏನಾದ್ರು ಮಾಡಿಬಿಡ್ತಾರೆ ಅಂತ ಹೇಳಿದ್ದರು. ಆದ್ರೆ ಮನೆ ಕೆಲಸದಾತ ಪವನ್ ವಿಚಾರವನ್ನ ದರ್ಶನ್ ಗಮನಕ್ಕೆ ತಂದೇ ಬಿಟ್ಟಿದ್ದ. ಆಮೇಲೆ ನಡೆದಿದ್ದೇ ರೇಣುಕಾಸ್ವಾಮಿ ಕಿಡ್ನ್ಯಾಪ್ ಪ್ಲ್ಯಾನ್.

ರೇಣುಕಾಸ್ವಾಮಿಯನ್ನ ಆರ್​ಆರ್ ನಗರದ ವಿನಯ್ ಉಸ್ತುವಾರಿಯ ಗೋದಾಮಿಗೆ ಕರೆತಂದಿದ್ರು. ಆ ಬಳಿಕ‌ ದರ್ಶನ್ ಹಾಗೂ ಪವಿತ್ರಗೌಡ ಎಂಟ್ರಿ ಕೊಟ್ಟಿದ್ರು. ಈ ವೇಳೆ ಆಕ್ರೋಶಗೊಂಡಿದ್ದ ಪವಿತ್ರಾ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದರಂತೆ. ದರ್ಶನ್ ಕೂಡ ಮನಸೋ ಇಚ್ಚೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದರು. ಬಳಿಕ ಮೃತದೇಹವನ್ನು ವಿಲೇವಾರಿ ಮಾಡಿದ್ದರು ಅಂತ ಆರೋಪಿಗಳು ತಿಳಿಸಿದ್ದಾರೆ.

ರೇಣುಕಾಸ್ವಾಮಿಗೆ ಹಣ ಕೊಟ್ಟು ವಾರ್ನಿಂಗ್ ಮಾಡಿದ್ರಂತೆ ದರ್ಶನ್​

ಆದ್ರೆ, ಇದೇ ವೇಳೆ ಪ್ರಕರಣಕ್ಕೆ ಸಂಪೂರ್ಣ ಟ್ವಿಸ್ಟ್​ ಕೊಡುವ ವಿಚಾರವನ್ನ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅದೇನಂದ್ರೆ ಹಲ್ಲೆ ಮಾಡಿದ ಬಳಿಕ ದರ್ಶನ್​ ರೇಣುಕಾಸ್ವಾಮಿಗೆ ಹಣ ಕೊಟ್ಟು ಊಟ ಮಾಡ್ಕೊಂಡ್ ಊರಿಗೆ ಹೋಗ್ತಿರ್ಬೇಕು. ಇನ್ನೊಂದು ಸಲ ಈ ರೀತಿಯ ಮೆಸೇಜ್ ಬಂದ್ರೆ ಗತಿ ಕಾಣಿಸ್ತೀನಿ ಅಂತ ಅವಾಜ್ ಹಾಕಿ ಗೋದಾಮಿನಿಂದ ದರ್ಶನ್ ಹಾಗೂ ಪವಿತ್ರಾ ಹೊರ ಹೋಗಿದ್ದರಂತೆ. ಆ ಬಳಿಕ ದರ್ಶನ್ ಶಿಷ್ಯರಾದ ಪವನ್, ರಘು, ಕಾರ್ತಿಕ್ ಸೇರಿದಂತೆ ಹಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ರಾಡ್​ನಿಂದ ಹೊಡೆದಿದ್ದಲ್ಲದೆ ಗೋಡೆಗೆ ಮುಖ ಗುದ್ದಿಸಿ ವಿಕೃತಿ ಮೆರೆದಿದ್ದಾರೆ. ಇಷ್ಟೆಲ್ಲ ಆದ ಮೇಲೆ ರೇಣುಕಾಸ್ವಾಮಿ ಸಾವನ್ನಪಿದ್ದಾನೆಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಗಂಡನ ಸಾವಿಗೆ ಅಸಲಿ ಕಾರಣ ಬಿಚ್ಚಿಟ್ಟ ರೇಣುಕಾಸ್ವಾಮಿ ಪತ್ನಿ; ದರ್ಶನ್​​-ಪವಿತ್ರಾ ಮಾಡಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲಿಗೆ ದರ್ಶನ್ ಹೆಸರು ಪ್ರಸ್ತಾಪವಾಗಿತ್ತು. ಖುದ್ದು 2ನೇ ಆರೋಪಿಯ ಸ್ಥಾನದಲ್ಲಿದ್ದಾರೆ. ಆದರೀಗ ಪೊಲೀಸರ ಎದುರು ಆರೋಪಿಗಳು ಪ್ರಕರಣವನ್ನೇ ತಿರುವಿ ಹಾಕುವಂತ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳು ಹೇಳ್ತಿರೋದು ನಿಜನಾ? ಅಥವಾ ದರ್ಶನ್ ಮತ್ತು ಪವಿತ್ರಾ ಗೌಡರನ್ನ ಬಚಾವ್ ಮಾಡೋಕೆ ತೇಲಿ ಬಿಡ್ತಿದ್ದಾರಾ ಅನ್ನೋ ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲೂ ಪೊಲೀಸರ ತಂಡ ತನಿಖೆ ಮುಂದುವರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಗೌಡಗೆ ಆ ಫೋಟೋ ಕಳಿಸಿದ್ದ ವ್ಯಕ್ತಿ.. ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಯಲು!

https://newsfirstlive.com/wp-content/uploads/2024/06/dboss8.jpg

Load More