newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್.. ನಟ ದರ್ಶನ್ ಗ್ಯಾಂಗ್‌ನ ಮತ್ತೊಬ್ಬ ಆರೋಪಿ ಪೊಲೀಸರಿಗೆ ಶರಣು

Share :

Published June 13, 2024 at 5:56pm

Update June 13, 2024 at 6:11pm

    DYSP ಕಚೇರಿಯಲ್ಲಿ 8ನೇ ಆರೋಪಿ ಪೊಲೀಸರ ಮುಂದೆ ಶರಣಾಗತಿ

    ರೇಣುಕಾಸ್ವಾಮಿಯನ್ನು ಕೊಲೆ ಕೇಸ್​ನಲ್ಲಿ ಪರಾರಿಯಾಗಿದ್ದ ಆರೋಪಿ ರವಿ

    ಕೊಲೆ ಕೇಸ್​​ನಲ್ಲಿ ಭಾಗಿಯಾಗಿದ್ದ 17 ಆರೋಪಿಗಳಲ್ಲಿ ನಾಲ್ವರು ಎಸ್ಕೇಪ್

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್​ನ 8ನೇ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಚಿತ್ರದುರ್ಗದ ಡಿವೈಎಸ್​ಪಿ  ಕಚೇರಿಗೆ ಬಂದು ಆರೋಪಿ ರವಿ ಶರಣಾಗಿದ್ದಾನೆ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪದ ಮೇಲೆ ನಟ ದರ್ಶನ್​ ಹಾಗೂ ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್​ ವಶದಲ್ಲಿದ್ದಾರೆ. ​ಒಟ್ಟು 17 ಜನರ ಪೈಕಿ 13 ಆರೋಪಿಗಳು ಪೊಲೀಸ್​ ಅಧಿಕಾರಿಗಳ ವಶದಲ್ಲಿದ್ದಾರೆ. ಈ ಕೊಲೆ ಕೇಸ್​​ನಲ್ಲಿ ಭಾಗಿಯಾಗಿದ್ದ 17 ಆರೋಪಿಗಳಲ್ಲಿ ನಾಲ್ವರು ಎಸ್ಕೇಪ್​ ಆಗಿದ್ದರು. ಕೊಲೆ ಕೇಸ್​ನಲ್ಲಿ ಪರಾರಿಯಾಗಿದ್ದ ನಾಲ್ವರ ಪೈಕಿ 8 ಆರೋಪಿಯಾಗಿದ್ದ ರವಿ ಏಕಾಏಕಿ ಚಿತ್ರದುರ್ಗ DYSP ಕಚೇರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ರಘು ತಂಡದಲ್ಲಿದ್ದ ರವಿ ಸದ್ಯ DYSP ದಿನಕರ್ ವಶದಲ್ಲಿದ್ದಾನೆ. ಪೊಲೀಸರ ಮುಂದೆ ಶರಣಾದ ಆರೋಪಿ ರವಿ ದಂಡಿನ ಕುರುಬರಹಟ್ಟಿ ಗ್ರಾಮದ ನಿವಾಸಿ.

ಇನ್ನು, ನಿನ್ನೆ ನಟ ದರ್ಶನ್​, ನಟಿ ಪವಿತ್ರ ಗೌಡ ಸೇರಿ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪಟ್ಟಣಗೆರೆ ಶೆಡ್​ಗೆ ಕರೆದುಕೊಂಡು ಹೋಗಿ ಸ್ಥಳ ಮಹಜರ್ ಮಾಡಿಸಿದ್ದರು. ಬಳಿಕ ಯುವಕನನ್ನು ಹೇಗೆ ಕರೆದುಕೊಂಡು ಬಂದ್ರು, ಯಾವ ರೀತಿ ಆತನನ್ನು ಕೊಲೆ ಮಾಡಿದ್ರು, ಆ ಶೆಡ್​​ನಲ್ಲಿ ಏನೆಲ್ಲಾ ಆಯ್ತು ಅಂತ ಆರೋಪಿಗಳು ಇಂಚಿಂಚೂ ಮಾಹಿತಿಯನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇದೇ ಕೇಸ್​ ಸಂಬಂಧ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್.. ನಟ ದರ್ಶನ್ ಗ್ಯಾಂಗ್‌ನ ಮತ್ತೊಬ್ಬ ಆರೋಪಿ ಪೊಲೀಸರಿಗೆ ಶರಣು

https://newsfirstlive.com/wp-content/uploads/2024/06/darshan21.jpg

Load More