newsfirstkannada.com

ನಟ ದರ್ಶನ್​ಗೆ ಬೇಲ್ ಸಿಗೋದು ಡೌಟ್? ಆರೋಪ ಸಾಬೀತಾದ್ರೆ ಎಷ್ಟು ವರ್ಷ ಜೈಲು ಶಿಕ್ಷೆ..?

Share :

Published June 13, 2024 at 10:01pm

  ಇಂತಹ ಘೋರ ಕೃತ್ಯ ಎಸಗಿದ್ರೆ ಮರಣದಂಡನೆಗೂ ಅವಕಾಶವಿರುತ್ತಾ?

  ಸ್ಥಳ ಮಹಜರು ವೇಳೆ ಪೊಲೀಸ್​ ಅಧಿಕಾರಿಗಳಿಂದ ಸಾಕ್ಷಿಗಳ ಸಂಗ್ರಹ

  ಕಿಡ್ನಾಪ್ ಕೇಸ್​, ಸಾಕ್ಷಿನಾಶ ಆರೋಪ ಸಾಬೀತಾದ್ರೆ ಎಷ್ಟು ವರ್ಷ ಜೈಲು?

ಐಪಿಸಿ ಸೆಕ್ಷನ್ 302- ಕೊಲೆ ಕೇಸ್, ಐಪಿಸಿ ಸೆಕ್ಷನ್ 201- ಸಾಕ್ಷಿನಾಶ ಕೇಸ್, ಐಪಿಸಿ ಸೆಕ್ಷನ್ 364 ಕಿಡ್ನಾಪ್ ಕೇಸ್. ಈ ಮೂರು ಕೇಸ್‌ಗಳಲ್ಲಿ ದರ್ಶನ್‌ ಅಪರಾಧಿ ಎಂಬುದು ಸಾಬೀತಾದ್ರೆ ಎಷ್ಟು ವರ್ಷ ಜೈಲು ಶಿಕ್ಷೆ? ಕೇಸ್‌ನ ವಿಚಾರಣೆ ನಡೆದು, ಕೋರ್ಟ್‌ನಲ್ಲಿ ವಾದಪ್ರತಿವಾದ ನಡೆದ ತೀರ್ಪು ಹೊರಬರೋ ಮುನ್ನ ತಾತ್ಕಾಲಿಕ ರಿಲೀಫ್ ರೀತಿ ದರ್ಶನ್‌ಗೆ ಬೇಲ್‌ ಕೂಡ ಸಿಗೋದಿಲ್ವಾ? ಎಲ್ಲಾ ಪ್ರಶ್ನೆಗಳ ಉತ್ತರ ಈ ರಿಪೋರ್ಟ್‌ನಲ್ಲಿದೆ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಗ್ಯಾಂಗ್‌ ಡೆಡ್ಲಿ ಮರ್ಡರ್ ಕೇಸ್‌ನಲ್ಲಿ ತಗ್ಲಾಕ್ಕೊಂಡಿದೆ. ದರ್ಶನ್ ವಿರುದ್ಧ ಕಿಡ್ನಾಪ್, ಕೊಲೆ ಮತ್ತು ಸಾಕ್ಷಿ ನಾಶ ಆರೋಪದಲ್ಲಿ ಕೇಸ್ ದಾಖಲಾಗಿದೆ. ಹಾಗಾದ್ರೆ, ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ಜೈಲು ಸೇರೋದು ಫಿಕ್ಸಾ? ಪೊಲೀಸರ ತನಿಖೆಯಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿ ಆರೋಪಗಳು ಸಾಬೀತಾಗಿದ್ರೆ ಆದ್ರೆ ದರ್ಶನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆಯಾಗುತ್ತೆ? ದರ್ಶನ್‌ಗೆ ಜೈಲುಸಂಕಷ್ಟ ತಂದೊಡ್ಡಲಿವೆ ಎನ್ನಲಾಗ್ತಿರೋ ಆ ಮೂರು ಸೆಕ್ಷನ್‌ಗಳು ಜೈಲುಶಿಕ್ಷೆ ಬಗ್ಗೆ ಹೇಳೋದೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮರ್ಡರ್‌ ಕೇಸ್‌ನಲ್ಲಿ ದರ್ಶನ್ ಲಾಕ್.. ಬೇಲ್ ಸಿಗೋದು ಡೌಟ್?

ಮೊಟ್ಟ ಮೊದಲಿಗೆ ದರ್ಶನ್‌ ಅಂಡ್ ಗ್ಯಾಂಗ್ ವಿರುದ್ಧ ಕೇಳಿಬಂದಿರೋದು ಕೊಲೆ ಆರೋಪ. ಕೊಲೆ ಆರೋಪದಲ್ಲಿ ಯಾವುದೇ ಆರೋಪಿಗೂ ಸುಲಭವಾಗಿ ಬೇಲ್ ಸಿಗೋದಿಲ್ಲ. ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋದರೂ, ಪ್ರಬಲ ವಾದ ಮಂಡಿಸಿದರೂ ಕನಿಷ್ಠ ಮೂರು ತಿಂಗಳು ಬೇಲ್ ಸಿಗೋದು ಡೌಟ್ ಎನ್ನಲಾಗ್ತಿದೆ. ಮೇಲಾಗಿ ಐಪಿಸಿ ಸೆಕ್ಷನ್ 302 ನಾನ್ ಬೇಲಬಲ್ ಅರ್ಥಾತ್ ಜಾಮೀನು ರಹಿತ ಅಪರಾಧವಾಗಿದೆ. ಈ ಕೇಸ್‌ನಲ್ಲಿ ನ್ಯಾಯಾಲಾದಯದ ಹೊರಗೆ ರಾಜಿ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಆಗೋದಿಲ್ಲ. ಹಾಗಾಗಿ ದರ್ಶನ್‌ ಆರೋಪ ಸಾಬೀತಾಗೋದಕ್ಕೂ ಮೊದಲೇ 3 ತಿಂಗಳು ಜೈಲೂಟ ಮಾಡಬೇಕಾಗಿ ಬರುತ್ತೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಇನ್ನು, ಕೊಲೆ ಕೇಸ್‌ಗಳಲ್ಲಿ ಆರೋಪಿಗಳಿಗೆ ಬೇಲ್ ನೀಡೋದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರ ಎನ್ನಲಾಗುತ್ತೆ. ಅನಿವಾರ್ಯ ಕಾರಣಗಳಿದ್ದಲ್ಲಿ ಆರೋಪಿಯು ತಲೆಮರೆಸಿಕೊಳ್ಳುವ ಅಥವಾ ಸಾಕ್ಷ್ಯವನ್ನು ಹಾಳುಮಾಡುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯದ ಎದುರು ವಾದ ಮಂಡಿಸಿದ್ದಲ್ಲಿ ನ್ಯಾಯಾಲಯ ಸ್ವ ವಿವೇಚನೆಯಿಂದ ಬೇಲ್ ನೀಡೋ ಬಗ್ಗೆ ನಿರ್ಧರಿಸಬಹುದು.

ಆದ್ರೆ, ಐಪಿಸಿಯ ಸೆಕ್ಷನ್ 302ರ ಅಡಿಯಲ್ಲಿರುವ ಪ್ರಕರಣದಲ್ಲಿ ಜಾಮೀನು ಪಡೆಯಲು, ಆರೋಪಿಯು ನ್ಯಾಯಾಲಯಕ್ಕೆ ಬಲವಾದ ಕಾರಣವನ್ನು ನೀಡಬೇಕು. ತಲೆಮರೆಸಿಕೊಳ್ಳೋದಿಲ್ಲ. ಅಥವಾ ಕೇಸ್‌ನಲ್ಲಿ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡೋದಿಲ್ಲ ಎಂಬುದನ್ನ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಜೊತೆಗೆ ಶ್ಯೂರಿಟಿ ಒದಗಿಸಬೇಕು. ದೇಶಬಿಟ್ಟು ಹೋಗಲಾಗದಂತೆ ಪಾಸ್‌ಪೋರ್ಟ್ ಸರೆಂಡರ್ ಮಾಡಬೇಕು. ಅಗತ್ಯವಿದ್ದಾಗ ಕೋರ್ಟ್ ಎದುರು ಹಾಜರಾಗುತ್ತೇನೆಂಬ ಷರತ್ತಿಗೆ ಒಪ್ಪಬೇಕು. ಅಂಥಾ ಸಂದರ್ಭದಲ್ಲಿ ಬೇಲ್ ಸಿಗೋ ಸಣ್ಣ ಸಾಧ್ಯತೆಯಿರುತ್ತೆ. ಆದರೆ ಆರೋಪಿ ವಿಚಾರಣೆಗೆ ಸಹಕರಿಸುತ್ತಿಲ್ಲ ಅಥವಾ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ನ್ಯಾಯಾಲಯಕ್ಕೆ ಅನುಮಾನ ಬಂದಲ್ಲಿ. ನ್ಯಾಯಾಲಯ ಬೇಲ್‌ ರದ್ದುಗೊಳಿಸಿ ಮತ್ತೆ ಬಂಧನಕ್ಕೆ ಸೂಚಿಸೋ ಸಾಧ್ಯತೆಗಳಿರುತ್ವೆ. ಒಟ್ಟಾರೆಯಾಗಿ ಕೊಲೆ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರೋ ದರ್ಶನ್‌ಗೆ ಸದ್ಯಕ್ಕೆ ಬೇಲ್ ಸಿಗೋದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯ ಕೇಳಿಬರ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕ್ರೂರ ಕೊಲೆ‌ ಕೇಸ್‌ಗೆ ಮೇಜರ್ ಟ್ವಿಸ್ಟ್.. ತನಿಖಾಧಿಕಾರಿ ದಿಢೀರ್ ಬದಲಾವಣೆ; ಯಾಕೆ?

ಕೊಲೆ ಆರೋಪ ಸಾಬೀತಾದ್ರೆ ದರ್ಶನ್‌ಗೆ ಜೀವಾವಧಿ ಶಿಕ್ಷೆ!

ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಉದ್ದೇಶಪೂರ್ವಕವಾಗಿ ಹತ್ಯೆಗೈದಿರೋದು ಸಾಬೀತಾದ್ರೆ ಜೀವಾವಾಧಿ ಶಿಕ್ಷೆ ವಿಧಿಸಲಾಗುತ್ತೆ. ಜೀವಾವಧಿ ಶಿಕ್ಷೆ ಅಂದ್ರೆ ಜೀವಿತಾವಧಿ ಇರೋವರೆಗೂ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕು ಎಂದರ್ಥ. ಹಾಗಾಗಿ ದರ್ಶನ್‌ ವಿರುದ್ಧದ ಕೊಲೆ ಆರೋಪ ಸಾಬೀತಾದ್ರೆ ಜೀವಾವಧಿ ಶಿಕ್ಷೆಗೆ ಒಳಪಡಬೇಕಾಗಿಬರುತ್ತೆ. ಆದ್ರೆ, ಸೆಕ್ಷನ್ 57 ಅಡಿಯಲ್ಲಿ ಜೀವಿತಾವಧಿ ಶಿಕ್ಷೆ ಎಂಬುದು ಕೇಸ್‌ಗಳಿಂದ ಕೇಸ್‌ಗಳಿಗೆ ಭಿನ್ನವಾಗಿರುತ್ತೆ. ಕೆಲವು ಜೀವಿತಾವಧಿ ಕೇಸ್‌ಗಳಲ್ಲಿ ಅಪರಾಧಿಗೆ 7 ರಿಂದ 14 ವರ್ಷ.

ಮತ್ತೆ ಕೆಲವು ಕೇಸ್‌ಗಳಲ್ಲಿ 20 ವರ್ಷಗಳಿಗೆ ಖೈದಿಯನ್ನು ಬಿಗುಡಗೆಗೊಳಿಸಲಿರೋ ಉದಾಹರಣೆಗಳಿವೆ. ಅಂದ್ರೆ, ಸರಕಾರವೇನಾದರೂ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗೆ ಕ್ಷಮೆ ಅಥವಾ ಶಿಕ್ಷೆಯನ್ನು ಮಾಫಿ ಮಾಡಿ ಬಿಡುಗಡೆ ಮಾಡಬೇಕೆಂದರೂ ಸದರಿ ಕೈದಿ ಬಿಡುಗಡೆಗೂ ಮುನ್ನಾ ಕಡ್ಡಾಯವಾಗಿ 14 ವರ್ಷಗಳ ಜೈಲು ವಾಸ ಪೂರೈಸಿರಬೇಕು. ಒಂದು ವೇಳೆ ಆತ 14 ವರ್ಷಕ್ಕಿಂತ ಕಡಿಮೆ ಅವಧಿಯ ಕಾರಾಗೃಹ ವಾಸ ಅನುಭವಿಸಿದ್ದರೆ ಸರಕಾರ ಆತನನ್ನು ಕ್ಷಮೆಯ ಆಧಾರದ ಮೇಲೆ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಯ್ತು ಅಂದ್ರೆ ಕನಿಷ್ಠ ವರ್ಷ 14 ವರ್ಷ ಜೈಲೂಟ ಫಿಕ್ಸ್!

ಇದನ್ನೂ ಓದಿ: VIDEO: ಪವಿತ್ರಾ ಇಂಥಾ ಚಿಲ್ಲರೆ ಕೆಲ್ಸ ಮಾಡಲ್ಲ.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಮಾಜಿ ಪತಿ ಸಂಜಯ್​ ಪ್ರತಿಕ್ರಿಯೆ ​

ಇನ್ನು, ಅಪರೂಪದಲ್ಲಿ ಅಪರೂಪದ ಕೇಸ್‌ಗಳಲ್ಲಿ ಕೊಲೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಕೂಡ ವಿಧಿಸಲಾಗುತ್ತೆ. ಘೋರವಾದ ಕೊಲೆ, ಅಸಾಧಾರಣ ಸಂದರ್ಭಗಳಲ್ಲಿ ಆರೋಪಿಗಳು ಮರಣದಂಡನೆಗೆ ಒಳಗಾಗ್ತಾರೆ. ಆರೋಪಿ ಎಸಗಿರೋ ಕೃತ್ಯ ಅತ್ಯಂತ ಘೋರವಾದದ್ದು, ಕ್ರೂರವಾದದ್ದು, ಕಠಿಣಾತಿಕಠಿಣ ಶಿಕ್ಷೆಗೆ ಅರ್ಹ ಎಂದು ನ್ಯಾಯಾಲಯಕ್ಕೆ ಒಪ್ಪಿತವಾದಲ್ಲಿ ಮಾತ್ರ ಮರಣದಂಡನೆಯಂತ ಶಿಕ್ಷೆ ವಿಧಿಸಲಾಗುತ್ತೆ. ಈಗ, ದರ್ಶನ್ ವಿರುದ್ಧ ಜನಾಕ್ರೋಶ ಶುರುವಾಗಿದ್ದು. ದರ್ಶನ್‌ಗೆ ಮರಣದಂಡನೆ ಶಿಕ್ಷೆ ನೀಡಬೇಕು ಅಂತ ಆಗ್ರಹಿಸ್ತಿದ್ದಾರೆ. ಆದ್ರೆ, ಎಲ್ಲವೂ ಕೋರ್ಟ್‌ನಲ್ಲಿ ನಿರ್ಧಾರ ಆಗಲಿದೆ. ಇನ್ನು ವಿಚಾರಣೆ, ವಾದ ಪ್ರತಿವಾದದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದರ್ಶನ್‌ಗೆ ಕೊಲೆಯ ಉದ್ದೇಶವಿರಲಿಲ್ಲ ಎಂಬುದು ಸಾಕ್ಷಿ, ಪುರಾವೆಗಳ ಆಧಾರದ ಮೇಲೆ ಅನಿಸಿದ್ರೆ. ಕೇವಲ 10 ವರ್ಷಗಳ ಶಿಕ್ಷೆಗೆ ಗುರಿಪಡಿಸೋ ಸಾಧ್ಯತೆಗಳಿರುತ್ತೆ ಎನ್ನಲಾಗಿದೆ.

ಕಿಡ್ನಾಪ್ ಆರೋಪ, ಸಾಕ್ಷಿನಾಶ ಆರೋಪ ಸಾಬೀತಾದ್ರೆ ಎಷ್ಟು ವರ್ಷ?

ದರ್ಶನ್ ವಿರುದ್ಧ ಕಿಡ್ನಾಪ್ ಆರೋಪ ಕೂಡ ಕೇಳಿಬಂದಿದೆ. ಆದ್ರೆ, ಇನ್ನೂ ಕೂಡ ದರ್ಶನ್ ವಿರುದ್ಧ ಐಪಿಸಿ ಸೆಕ್ಷನ್ 364 ದಾಖಲಾಗಿಲ್ಲ. ಒಂದೊಮ್ಮೆ ದರ್ಶನ್ ವಿರುದ್ಧ ಕಿಡ್ನಾಪ್ ದೂರು ದಾಖಲಾಗಿ, ಆರೋಪ ಸಾಬೀತಾಗಿದ್ದೇ ಆದ್ರೆ ಆಗಲೂ ಜೀವವಾಧಿ ಶಿಕ್ಷೆ ಖಾಯಂ. ಯಾಕಂದ್ರೆ ಕಿಡ್ನಾಪ್ ಆಗಿರೋ ವ್ಯಕ್ತಿ ಕೊಲೆಯಾಗಿದ್ದಾನೆ. ಹಾಗಾಗಿ, ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಸಿರೋ ಕೇಸ್‌ನಲ್ಲಿ ದರ್ಶನ್ ಅಪರಾಧಿ ಎಂಬುದಾದ್ರೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗುತ್ತೆ. ದರ್ಶನ್ ಸಾಕ್ಷ್ಯ ನಾಶ ಮಾಡಿದ್ದಾರೆಂಬ ಆರೋಪವಿದೆ. ಐಪಿಸಿ ಸೆಕ್ಷನ್ 201 ಅಡಿಯಲ್ಲಿ ಕೇಸ್ ದಾಖಲಾಗಿದೆ. ದರ್ಶನ್ ಸಾಕ್ಷಿನಾಶ ಮಾಡಿದ್ದಾರೆಂಬುದು ಸಾಬೀತಾಗಿದ್ದೇ ಆದ್ರೆ ಕನಿಷ್ಟ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗೋದು ನಿಶ್ಚಿತ. ಒಟ್ಟಾರೆಯಾಗಿ ದರ್ಶನ್ ವಿರುದ್ಧ ಮೂರು ಸೆಕ್ಷನ್‌ಗಳು ಬಿಗಿಯಾಗಿವೆ. ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಒಂದೊಂದೇ ಸಾಕ್ಷಿಗಳನ್ನು ಹೆಕ್ಕಿತೆಗೆದು ಕೋರ್ಟ್ ಎದುರು ಹಾಜರುಪಡಿಸಿದ್ರೆ. ಆ ಸಾಕ್ಷಿಗಳನ್ನು ಪರಿಗಣಿಸಿ ಕೋರ್ಟ್‌ನಲ್ಲಿ ಆರೋಪ ಸಾಬೀತಾಗಿದ್ದೇ ಆದ್ರೆ ದರ್ಶನ್‌ಗೆ ಜೈಲೂಟ ಫಿಕ್ಸ್ ಎನ್ನಲಾಗ್ತಿದೆ. ಹಾಗಾಗಿ, ತನಿಖೆಯತ್ತ ಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇನ್ನು, ಆರೋಪ ಸಾಬೀತಾದ್ರೆ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಗ್ಯಾಂಗ್ ಕೂಡ ಕಂಬಿ ಎಣಿಸೋದು ಕನ್ಫರ್ಮ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​ಗೆ ಬೇಲ್ ಸಿಗೋದು ಡೌಟ್? ಆರೋಪ ಸಾಬೀತಾದ್ರೆ ಎಷ್ಟು ವರ್ಷ ಜೈಲು ಶಿಕ್ಷೆ..?

https://newsfirstlive.com/wp-content/uploads/2024/06/dboss9.jpg

Load More