newsfirstkannada.com

ಮರದ ದಿಂಬಿ, ಲೆದೆರ್‌ ಬೆಲ್ಟ್, ಹಗ್ಗ.. ಪೋಸ್ಟ್ ಮಾರ್ಟಂ ವರದಿಯಲ್ಲಿದೆ ‘ಡಿ’ ಗ್ಯಾಂಗ್ ಅಟ್ಟಹಾಸ; ಏನದು?

Share :

Published June 14, 2024 at 8:26pm

Update June 14, 2024 at 8:16pm

  ಪಟ್ಟಣಗೆರೆ ಶೆಡ್‌ನಲ್ಲಿದ್ದ ಟಾಟಾ ಏಸ್‌ ವಾಹನಕ್ಕೆ ತಲೆ ಜಜ್ಜಿದ್ದರು ಕ್ರೂರಿಗಳು

  ತೀವ್ರ ರಕ್ತಸ್ರಾವದಿಂದಲೇ ಸ್ಥಳದಲ್ಲೇ ಯುವಕ ರೇಣುಕಾಸ್ವಾಮಿ ದಾರುಣ ಸಾವು

  ಮರದ ದಿಂಬಿ, ಲೆದೆರ್‌ ಬೆಲ್ಟ್, ಹಗ್ಗದಿಂದ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ

ಕ್ರೌರ್ಯ, ಭೀಕರತೆ ಮತ್ತು ಅಮಾನವೀಯತೆ. ಇದಿಷ್ಟು ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಎದ್ದು ಕಾಣ್ತಿದೆ. ಓರ್ವ ವ್ಯಕ್ತಿಯ ಮೇಲೆ ಎಷ್ಟು ಕ್ರೌರ್ಯ ಮೆರೆಯಬೇಕೋ, ಓರ್ವ ವ್ಯಕ್ತಿಯ ಮೇಲೇ ಎಷ್ಟು ಭೀಕರತೆ ತೋರಿಸಬಹುದೋ ಅದಕ್ಕೂ ಮೀರಿದ ವರ್ತನೆಯನನ್ನ ಡಿ-ಗ್ಯಾಂಗ್‌ ತೋರಿಸಿದೆ ಅನ್ನೋದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

ಗುರುವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ ಎನ್ನಲಾಗ್ತಿದ್ದು ಆ ರಿಪೋರ್ಟ್‌ನಲ್ಲಿರೋ ಭಯಾನಕ ಸತ್ಯಗಳು ಬೆಳಕಿಗೆ ಬಂದಿವೆ. ಆರ್‌.ಆರ್‌.ನಗರದಲ್ಲಿರೋ ಗೋಡೌನ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದಿರೋ ಹಲ್ಲೆಯಿದೆಯಲ್ಲಾ ನಿಜಕ್ಕೂ ಮಾನಕುಲ ಯಾವತ್ತೂ ಕ್ಷಮೆಸದೇ ಇರೋ ಕೃತ್ಯವದು. ಆ ಗೋಡೌನ್‌ ಅತ್ಯಂತ ಭೀಕರ ಕೊಲೆಗೆ ಸಾಕ್ಷಿಯಾಗಿದೆ ಅನ್ನೋದು ಈಗ ಜಗಜ್ಜಾಹೀರಾಗಿದೆ. ಈ ಕೊಲೆ ಎಷ್ಟು ಭೀಕರತೆಿಯಿಂದ ಕೂಡಿದೆ ಅನ್ನೋದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ ಅಂತಾ ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

ಹೌದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆದಿದ್ದು, ಗುರುವಾರ ಮಧ್ಯಾಹ್ನ ಪೂರ್ಣ ವರದಿ ಪೊಲೀಸರ ಕೈ ಸೇರಿದೆ ಅನ್ನೋ ಮಾಹಿತಿ ನಮಗೆ ಮೂಲಗಳಿಂದ ಲಭಿಸಿದೆ. ಓರ್ವ ವ್ಯಕ್ತಿ ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾನೆ? ಆತನ ಆಗಿರೋ ಹಲ್ಲೆಯಿಂದ ದೇಹದ ಅಂಗಾಂಗಳಿಗೆ ಯಾವ ರೀತಿ ಪೆಟ್ಟು ಬಿದ್ದಿದೆ? ಅದರ ತೀವ್ರತೆ ಎಷ್ಟಿತೆ? ಅನ್ನೋದಿಂದರಿಂದ ಹಿಡಿದು ಎ ಟು ಜೆಡ್‌ ಮಾಹಿತಿಯನ್ನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರು ಬರೆದಿರುತ್ತಾರೆ.

ಒಂದು ಕೊಲೆ ಪ್ರಕರಣದಲ್ಲಿ ಪೋಸ್ಟ್‌ಮಾರ್ಟಂ ರಿಪೋರ್ಟ್‌ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಕೊಲೆ ಪ್ರಕರಣವನ್ನ ಕೋರ್ಟ್‌ನಲ್ಲಿ ಪ್ರೂವ್ ಮಾಡಲು ಈ ರಿಪೋರ್ಟ್‌ ಮೇಜರ್‌ ರೋಲ್ ಪ್ಲೇ ಮಾಡುತ್ತದೆ. ಜೊತೆಗೆ ಪೊಲೀಸರ ತನಿಖಾ ದೃಷ್ಟಿಯಿಂದಲೂ ಈ ರಿಪೋರ್ಟ್‌ ಇಂಪಾರ್ಟ್‌ಟೆಂಟ್. ಹಾಗಾದ್ರೆ, ರೇಣುಕಾಸ್ವಾಮಿ ಪೋಸ್ಟ್‌ಮಾರ್ಟಂ ರಿಪೋರ್ಟ್‌ನಲ್ಲಿ ಏನಿದೆ? ಕೊಲೆಯ ಭೀಕರತೆ ಹೇಗಿದೆ ಅನ್ನೋದು ವರದಿಯಲ್ಲಿದೆ ಎನ್ನಲಾಗ್ತಿದೆ. ಹೌದು, ವೈದ್ಯರು ನೀಡಿರೋ ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಮೃತ ರೇಣುಕಾಸ್ವಾಮಿ ಶಾಕ್‌ ಮತ್ತು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಅಂತಾ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಹದ 15 ಕಡೆ ಗಾಯಗಳಿದ್ದು, ತೀವ್ರವಾಗಿ ಹಲ್ಲೆ ಮಾಡಿರೋ ಹಿನ್ನೆಲೆಯಲ್ಲಿ ಹೊಟ್ಟೆಯ ಒಳಭಾಗದಲ್ಲಿ ಬ್ಲೀಡಿಂಗ್ ಆಗಿದೆ. ಅಂದ್ರೆ, ಇಂಟರ್ನಲ್ ಬ್ಲೀಡಿಂಗ್ ಆಗಿದೆ. ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರವಾಗಿ ಪೆಟ್ಟು ಬಿದ್ದಿರೋದಿರಿಂದ ದೇಹದ ಒಳಭಾಗದಲ್ಲಿ ಬ್ಲೀಡಿಂಗ್ ಆಗಿದೆ ಅಂತ ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗ್ತಿದೆ. ಮೃತ ರೇಣುಕಾಸ್ವಾಮಿಯ ತಲೆಯ ಭಾಗಕ್ಕೆ ಹೆಚ್ಚು ಹಾನಿಯಾಗಿರೋದಲ್ಲದೇ, ಕೈ ಪಾದ, ಎದೆ ಮತ್ತು ಬೆನ್ನಿನ ಭಾಗದಲ್ಲಿ ರಕ್ತದ ಕಲೆಗಳು ಇದ್ದವು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆರೋಪಿಗಳು ಮೃತ ರೇಣುಕಾಸ್ವಾಮಿಗೆ ಮನಬಂದಂತೆ ಹಲ್ಲೆ ಮಾಡಿರೋದು ವರದಿಯಲ್ಲಿ ಸಾಬೀತಾಗಿದೆ. ಮರದ ದಿಂಬಿ, ಲೆದೆರ್‌ ಬೆಲ್ಟ್, ಹಗ್ಗದಿಂದ ಹಲ್ಲೆ ಮಾಡಲಾಗಿದೆ.
ಆಘಾತಕಾರಿ ವಿಚಾರ ಏನಂದ್ರೆ, ಗೋಡೌನ್‌ನಲ್ಲಿ ನಿಂತಿದ್ದ ಟಾಟ್ ಏಸ್‌ ವಾಹನಕ್ಕೆ ರೇಣುಕಾಸ್ವಾಮಿ ತಲೆಯನ್ನ ಹಲವು ಬಾರಿ ಗುದ್ದಿಸಲಾಗಿದೆಯಂತೆ. ಪರಿಣಾಮ ರೇಣುಕಾಸ್ವಾಮಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಭೀಕರವಾಗಿ ಹಲ್ಲೆ ಮಾಡಿದ್ದರಿಂದ ಆತ ಶಾಕ್‌ಗೆ ಒಳಗಾಗಿದ್ದ ಮತ್ತು ತೀವ್ರ ರಕ್ತಸ್ರಾವದಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ

ಪೊಲೀಸರಿಗೆ ವರದಿ ಸಲ್ಲಿಸಿದ ನಂತರ ಗೋಡೌನ್‌ನಲ್ಲಿದ್ದ ಟಾಟಾ ಏಸ್‌ ವಾಹನವನ್ನ ಸೀಜ್ ಮಾಡಲಾಗಿದೆ. ಈ ವಾಹನದಲ್ಲಿ ರೇಣುಕಾಸ್ವಾಮಿ ರಕ್ತ ಕಲೆಗಳು ಸಹ ಇದ್ದವೂ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲೀ ಈ ವಾಹನವನ್ನ ಪೊಲೀಸರು ಸ್ಟೇಷನ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಅಂದ್ಹಾಗೇ, ಈ ವಾಹನ ಈ ಗೋಡೌನ್‌ಗೆ ಹೇಗೆ ಬಂತು ಅನ್ನೋದರ ಹಿಂದೆಯೂ ಒಂದು ಸ್ಟೋರಿ ಇದೆ. ಅದೇನಂದ್ರೆ, ಈ ಟಾಟಾ ಏಸ್ ವಾಹನದ ಮಾಲೀಕರು ಸಾಲ ಪಡೆದ ಬ್ಯಾಂಕ್‌ಗೆ ಇಎಂಐ ಪಾವತಿ ಮಾಡಿರೋದಿಲ್ಲ. ಹೀಗಾಗಿ ಈ ವಾಹನವನ್ನ ಸೀಜ್‌ ಮಾಡಿ, ಈ ಗೋಡೌನ್‌ನಲ್ಲಿ ಇರಿಸಲಾಗಿರುತ್ತದೆ.

ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕರೆದುಕೊಂಡು ಬಂದಾಗ, ಈ ವಾಹನದ ಪಕ್ಕದಲ್ಲಿಯೇ ಹಲ್ಲೆ ಮಾಡಲಾಗಿದೆ. ಆರೋಪಿಗಳು ರೇಣುಕಾಸ್ವಾಮಿಯ ಕತ್ತು ಮತ್ತು ತಲೆ ಹಿಡಿದು ಈ ವಾಹನಕ್ಕೆ ಜಜ್ಜಿದ್ದಾರೆ. ಹಲವು ಬಾರಿ ತಲೆಯನ್ನ ಇದೇ ವಾಹನಕ್ಕೆ ಜಜ್ಜಿರುವುದರಿಂದ ರೇಣುಕಾಸ್ವಾಮಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಮಹಜರಿಗೆ ಅಂತಾ ಈ ಗೋಡೌನ್‌ಗೆ ಕರೆದುಕೊಂಡು ಬಂದ ನಂತರ ಆರೋಪಿಗಳು ಇದೇ ವಾಹನಕ್ಕೆ ತಲೆ ಗುದ್ದಿಸಿದ್ದೇವೆ ಅಂತಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಟಾಟಾ ಏಸ್ ವಾಹನವನ್ನ ಸೀಜ್‌ ಮಾಡಿ, ಸ್ಟೇಷನ್‌ಗೆ ತೆಗೆದುಕೊಂಡು ಹೋಗಿದ್ದಾರೆ.

ಜೊತೆಗೆ ಹಲ್ಲೆ ಬಳಸಿದ್ದ ಮರದ ದಿಂಬಿ, ಲೆದೆರ್‌ ಬೆಲ್ಟ್, ಹಗ್ಗವನ್ನ ಇದೇ ಗೋಡೌನ್‌ನಿಂದ ಸೀಜ್ ಮಾಡಲಾಗಿದೆ. ಆಶ್ಚರ್ಯ ಅಂದ್ರೆ, ಈ ವಸ್ತುಗಳ ಮೇಲೆ ರಕ್ತದ ಕಲೆಗಳು ಇವೆಯಂತೆ. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಲ್‌ಗೆ ಈ ವಸ್ತುಗಳನ್ನ ರವಾನಿಸಲಾಗಿದೆ. ಎಫ್‌ಎಸ್‌ಎಲ್‌ ರಿಪೋರ್ಟ್‌ನಲ್ಲಿ ವಸ್ತುಗಳ ಮೇಲಿರುವ ರಕ್ತದ ಕಲೆ ಮತ್ತು ರೇಣುಕಾಸ್ವಾಮಿಯ ಬ್ಲಡ್‌ ಗ್ರೂಪ್‌ಗೆ ಮ್ಯಾಚ್ ಆಗುತ್ತಾ ಅನ್ನೋದನ್ನ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಿದ್ದಾರೆ. ಒಂದು ವೇಳೆ ಮ್ಯಾಚ್ ಆದರೇ ಆರೋಪಿಗಳಿಗೆ ಸಂಕಷ್ಟ ಎದುರಾಗೋದು ಖಂಡಿತ. ಇನ್ನೊಂದೆಡೆ, ವಿಚಾರಣೆಯಲ್ಲಿ ಆರೋಪಿಗಳು ಭಯಾನಕ ಸತ್ಯವನ್ನ ಬಾಯ್ಬಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರದ ದಿಂಬಿ, ಲೆದೆರ್‌ ಬೆಲ್ಟ್, ಹಗ್ಗ.. ಪೋಸ್ಟ್ ಮಾರ್ಟಂ ವರದಿಯಲ್ಲಿದೆ ‘ಡಿ’ ಗ್ಯಾಂಗ್ ಅಟ್ಟಹಾಸ; ಏನದು?

https://newsfirstlive.com/wp-content/uploads/2024/06/darshan8.jpg

Load More