newsfirstkannada.com

VIDEO: ‘ಸೆಕೆಂಡ್​ ಅಂದ ಮಾತ್ರಕ್ಕೆ ಪವಿತ್ರಾ ಗೌಡ ಕೆಟ್ಟವಳಾ‘; ನಟಿ ಚಿತ್ರಾಲ್ ಖಡಕ್ ವಾರ್ನಿಂಗ್

Share :

Published June 23, 2024 at 11:26pm

  ದರ್ಶನ್ ಸರ್ ಬಂದು ನಿಮಗೆ ಏನಾದ್ರೂ ಹೇಳಿದ್ರಾ ಎಂದ ಚಿತ್ರಾಲ್

  ಕೆಟ್ಟದಾಗಿ ಕಾಮೆಂಟ್​ ಮಾಡುವವರಿಗೆ ಕ್ಲಾಸ್​ ತೆಗೆದುಕೊಂಡ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿಯ ವಿಡಿಯೋ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್‌ ಸೇರಿ ಒಟ್ಟು 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಹಾಗೂ ಫೋಟೋವನ್ನು ಕಳುಹಿಸಿದ್ದ. ಹೀಗಾಗಿ ಇದೇ ಕೋಪದಲ್ಲಿ ನಟ ದರ್ಶನ್​ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬಹಳ ಕ್ರೂರವಾಗಿ ಕೊಲೆ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ‘ರೇಣುಕಾಸ್ವಾಮಿ ನನಗೂ ಆ ಫೋಟೋ ಕಳುಹಿಸಿದ್ದ’- ಸಾಕ್ಷಿ ಸಮೇತ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ಚಿತ್ರಾಲ್!

ಇದೇ ವಿಚಾರದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಒಂದು ಕಡೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಮೆಸೇಜ್​ ಬರುವುದು ಸರ್ವೆ ಸಾಮಾನ್ಯ ಅಂತ ಕೆಲವರ ವಾದ. ಕೊಲೆಯಾದ ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿ ಬರುತ್ತಿದೆ.

ಆದರೆ ಇದರ ಮಧ್ಯೆ ಬಿಗ್‌ಬಾಸ್ ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದಾರೆ. ಜೊತೆಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್​ ಮಾಡುವವರಿಗೆ ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ವಿಚಾರವಾಗಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿ ಶೇರ್ ಮಾಡಿ ಬೇಸರ ಹೊರ ಹಾಕಿದ್ದಾರೆ. ನಿಮ್ಮ ನಿಮ್ಮ ಅಕೌಂಟ್​ಗಳನ್ನು ಪ್ರೈವೇಟ್ ಇಟ್ಟುಕೊಂಡಿರುತ್ತೀರಾ. ಯಾವುದೇ ಪೋಸ್ಟ್​ ಮಾಡದೇ ಹಾಗೇ ಇಟ್ಟುಕೊಂಡಿರುತ್ತೀರಾ. ನಿಮ್ಮನ್ನೆಲ್ಲಾ ಒಂದು ಕಾಮೆಂಟ್​ನಲ್ಲೂ ಮೆನ್ಷನ್ ಮಾಡೋದಕ್ಕೆ ಆಗಲ್ಲ. ನೀವು ಬಂದು ಇನ್ನೊಬ್ಬರ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತೀರಾ. ಇದೆಲ್ಲಾ ಎಷ್ಟರ ಮಟ್ಟಿಗೆ ಸರಿ ನೀವೆ ಹೇಳಿ? ನಿಮಗೆ ಸ್ವಲ್ಪ ಬುದ್ದಿ ಇದ್ದರೆ ಹಾಗೇಲ್ಲಾ ಮಾತಾಡಬೇಡಿ. ಬೇರೆಯವರ ಪರ್ಸನಲ್​ ನಿಮಗೇಕೆ? ನೀವು ಯಾರು ಅವರ ಬಗ್ಗೆ ಮಾತನಾಡೋಕೆ? ಕಾಮೆಂಟ್​ನಲ್ಲಿ ಮಾತಾಡುವುದರಿಂದ ನಿಮಗೆ ಏನು ಸಿಗುತ್ತದೆ. ನೀವು ಹೆಂಗೆ ಡಿಸೈಡ್​ ಮಾಡುತ್ತೀರಾ? ಸೆಕೆಂಡ್ ಅಂದ ಮಾತ್ರಕ್ಕೆ ಅವರು ಕೆಟ್ಟವರಾ? ದರ್ಶನ್ ಸರ್ ಬಂದು ನಿಮಗೆ ಹೇಳಿದ್ರಾ? ಅವ್ಳು ಬಂದು ನನ್ನ ಲೈಫ್​ ಹಾಳು ಮಾಡಿದ್ದಳು ಅಂತಾ? ಬೇರೆಯವರ ಪರ್ಸನಲ್​ ಬಗ್ಗೆ ನೀವು ಏಕೆ ಕಾಮೆಂಟ್​ ಮಾಡ್ತೀರಾ? ನಿಮಗೆ ಏಕೆ ಅವರ ಪರ್ಸನಲ್​ ವಿಚಾರ. ನಿಮ್ಮ ಪರ್ಸನಲ್​ ವಿಚಾರದ ಬಗ್ಗೆ ಮಾತಾಡಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಸೆಕೆಂಡ್​ ಅಂದ ಮಾತ್ರಕ್ಕೆ ಪವಿತ್ರಾ ಗೌಡ ಕೆಟ್ಟವಳಾ‘; ನಟಿ ಚಿತ್ರಾಲ್ ಖಡಕ್ ವಾರ್ನಿಂಗ್

https://newsfirstlive.com/wp-content/uploads/2024/06/pavitra2.jpg

Load More