newsfirstkannada.com

ಸ್ಯಾಂಡಲ್​​ವುಡ್​ ಮತ್ತೋರ್ವ ನಟಿಗೂ ಅಶ್ಲೀಲ ಮೆಸೇಜ್​​ ಕಳಿಸಿದ್ದ ರೇಣುಕಾಸ್ವಾಮಿ.. ಏನಿದು ಹೊಸ ಟ್ವಿಸ್ಟ್​​?

Share :

Published July 1, 2024 at 6:14am

    ನಟಿ ಚಿತ್ರಾಲ್ ರಂಗಸ್ವಾಮಿಗೂ ಮೆಸೇಜ್​ ಮಾಡಿದ್ದ ಕೊಲೆಯಾದ ರೇಣುಕಾಸ್ವಾಮಿ

    ಫೇಕ್ ಅಕೌಂಟ್​ನಿಂದ ನನಗೂ ಅಶ್ಲೀಲ ಸಂದೇಶ ಬಂದಿತ್ತು ಎಂದಿದ್ದ ನಟಿ ಚಿತ್ರಾಲ್

    ಕೆಟ್ಟ ಕೆಟ್ಟ ಟ್ರೋಲ್​ ಪೇಜ್​ಗಳ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಿದ್ದೇವೆ, ಆದರೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್‌ ಸೇರಿ ಒಟ್ಟು 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಹಾಗೂ ಫೋಟೋವನ್ನು ಕಳುಹಿಸಿದ್ದ. ಹೀಗಾಗಿ ಇದೇ ಕೋಪದಲ್ಲಿ ನಟ ದರ್ಶನ್​ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬಹಳ ಕ್ರೂರವಾಗಿ ಕೊಲೆ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ‘ರೇಣುಕಾಸ್ವಾಮಿ ನನಗೂ ಆ ಫೋಟೋ ಕಳುಹಿಸಿದ್ದ’- ಸಾಕ್ಷಿ ಸಮೇತ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ಚಿತ್ರಾಲ್!

ಇನ್ನು, ಮೊನ್ನೆಯಷ್ಟೇ ಇದೇ ವಿಚಾರದ ಬಗ್ಗೆ ಬಿಗ್‌ಬಾಸ್ ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಶೇರ್‌ ಮಾಡಿ ರೇಣುಕಾಸ್ವಾಮಿ ಅವರದ್ದು ಎನ್ನಲಾದ ಅಕೌಂಟ್​ ಫೋಟೋವನ್ನು ಸ್ಟೋರಿಯಲ್ಲಿ ಶೇರ್‌ ಮಾಡಿಕೊಂಡು ಅದರ ಬಗ್ಗೆ ಸವಿವರವಾಗಿ ಮಾತಾಡಿದ್ದರು.

ಇದೀಗ ನಟಿ ಚಿತ್ರಾಲ್ ರಂಗಸ್ವಾಮಿ ಅವರು ಪೊಲೀಸರ ಮೇಲೆ ಆರೋಪವೊಂದನ್ನು ಮಾಡಿದ್ದಾರೆ. ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಅವರು, ನಾನು ಶೇರ್ ಮಾಡಿಕೊಂಡ ಮೇಲೆ ಸಾಕಷ್ಟು ಜನರು ಆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಇನ್ನೂ ಕೆಲವರಿಗೆ ಧೈರ್ಯ ಇರುವುದಿಲ್ಲ. ನಾನೂ ಕೂಡ ಪೊಲೀಸ್​ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಮಾರ್ಚ್​ 13ನೇ ತಾರೀಕು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ  FIR ದಾಖಲು ಮಾಡಿದ್ದೇನೆ. ಆ ಬಗ್ಗೆ ಏನೂ ಆಕ್ಷನ್​ ತೆಗೆದುಕೊಂಡಿಲ್ಲ. ಈ ಹಿಂದೆ 25ಕ್ಕೂ ಹೆಚ್ಚು ಜನರು ಕೊರೋನಾ ಸಮಯದಲ್ಲಿ ಕೆಟ್ಟ ಟ್ರೋಲ್​ ಪೇಜ್​ಗಳ ಬಗ್ಗೆ ದೂರು ದಾಖಲಿಸಿದ್ದೇವೆ. ಆದರೆ ಅದರ ಬಗ್ಗೆ ಪೊಲೀಸರು ಯಾವುದೇ ರೀತಿಯಲ್ಲಿ ಆಕ್ಷನ್ ತೆಗೆದುಕೊಂಡಿಲ್ಲ. ನನಗೆ ಈಗ ಯಾವುದಾದರೂ ಬಂದ್ರೆ ಪೊಲೀಸರು ಆಕ್ಷನ್ ತೆಗೆದುಕೊಳ್ಳುತ್ತಾರೆ ಅಂತ ನನಗೆ ನಂಬಿಕೆ ಇಲ್ಲ ಸರ್​ ಅಂತ ಅಸಮಧಾನ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಡಲ್​​ವುಡ್​ ಮತ್ತೋರ್ವ ನಟಿಗೂ ಅಶ್ಲೀಲ ಮೆಸೇಜ್​​ ಕಳಿಸಿದ್ದ ರೇಣುಕಾಸ್ವಾಮಿ.. ಏನಿದು ಹೊಸ ಟ್ವಿಸ್ಟ್​​?

https://newsfirstlive.com/wp-content/uploads/2024/06/chitrala.jpg

Load More