newsfirstkannada.com

ಸಾರ್ವಜನಿಕರೇ ಎಚ್ಚರ! ಯಾರಿಂದಾದ್ರೂ ಚಾಕೊಲೇಟ್​​ ತಗೊಳ್ಳೋ ಮುನ್ನ ಹುಷಾರ್

Share :

15-09-2023

  ಪ್ರಯಾಣಿಕರಿಗೆ ಚಾಕೋಲೇಟ್‌ ಕೊಟ್ಟು ಲೂಟಿ ಮಾಡಿದ ಗ್ಯಾಂಗ್‌!

  ಮೂರು ವರ್ಷದ ಹಿಂದೆ ಮಟ್ಟ ಹಾಕಿದ್ದ ಗ್ಯಾಂಗ್ ಪೊಲೀಸ್​ ಬಲೆಗೆ

  ತಮ್ಮೂರಿಗೆ ಹೊರಟ್ಟಿದ್ದವರು ಕೊನೆಗೆ ಸೇರಿದ್ದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ

ಬೆಳಗಾವಿ: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮದ ನಿವಾಸಿಗಳು. ಎಂಟು ಜನರು ದೂರದ ಊರಿನಿಂದ ಗೋವಾಕ್ಕೆ ಬಂದು ರಸ್ತೆ ನಿರ್ಮಾಣ ಕಾಮಗಾರಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದರು. ಎರಡು ತಿಂಗಳ ಬಳಿಕ ತಮ್ಮೂರಿಗೆ ಹೊರಟ್ಟಿದ್ದ ಇವರು ಇದೀಗ ಮಾರ್ಗ ಮಧ್ಯದಲ್ಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋವಾದಿಂದ ರೈಲು ಮುಖಾಂತರ ಸೆಪ್ಟೆಂಬರ್​ 11ರಂದು ಸಂಜೆ ಪ್ರಯಾಣ ಬೆಳೆಸಿದ್ದಾರೆ.

ಮಾಸ್ಕೋ ರೈಲು ನಿಲ್ದಾಣ ಬರ್ತಿದ್ದಂತೆ ನಾಲ್ಕು ಜನ ಈ ಎಂಟು ಜನರಿದ್ದ ಬೋಗಿಗೆ ಹತ್ತಿದ್ದಾರೆ. ಎಂಟು ಜನರ ಪೈಕಿ ಒಬ್ಬರಿಗೆ ಪರಿಚಯ ಆಗಿ ಅವರಿಂದ ಹಾಗೇ ಎಲ್ಲರಿಗೂ ಪರಿಚಯವನ್ನ ಮಾಡಿಕೊಂಡಿದ್ದಾರೆ. ಹೀಗೆ ಅರ್ಧ ಗಂಟೆಗೂ ಅಧಿಕ ಕಾಲ ಮಾತಾಡಿ ಕ್ಲೋಸ್ ಆದ ಮೇಲೆ ಅದೊಂದು ಚಾಕೊಲೇಟ್ ಮತ್ತು ಚಿಪ್ಸ್ ಕೊಟ್ಟಿದ್ದಾರೆ. ಅವರು ಕೊಟ್ಟ ಚಾಕೊಲೇಟ್ ತಿಂದವರು ಮತ್ತೆ ಎದಿದ್ದು ನಿನ್ನೆ ರಾತ್ರಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ. ಎರಡು ದಿನ ಪ್ರಜ್ಞೆ ತಪ್ಪಿದವರಿಗೆ ನಿನ್ನೆ ಪ್ರಜ್ಞೆ ಬಂದಿದ್ದು ಇನ್ನೂ ಇಬ್ಬರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಜನ ವಾರ್ಡ್​ಗಳಿಗೆ ಶಿಪ್ಟ್ ಆಗಿದ್ದು ಆರೋಗ್ಯದಲ್ಲಿ ಸುಧಾರಣೆ ಕಾಣಿಸಿದೆ. ಹೀಗೆ ಪ್ರಜ್ಞೆ ಬಂದವರನ್ನ ವೈದ್ಯರು ವಿಚಾರಿಸಿದಾಗ ರೈಲಿನಲ್ಲಿ ನಾಲ್ಕು ಜನ ತಮ್ಮೊಟ್ಟಿಗೆ ಬರ್ತಿದ್ರೂ ಪರಿಚಯ ಮಾಡಿಕೊಂಡು ಚಾಕೊಲೇಟ್ ನೀಡಿದ್ರೂ ಅದು ತಿಂದ ಮೇಲೆ ಪ್ರಜ್ಞೆ ತಪ್ಪಿದ್ದೇವು. ತಮ್ಮಲ್ಲಿನ ಎಂಟು ಮೊಬೈಲ್ ಮತ್ತು ಐವತ್ತು ಸಾವಿರಕ್ಕೂ ಅಧಿಕ ಹಣ ದೋಚಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ ಅಂತಾ ಬಿಮ್ಸ್ ಆಸ್ಪತ್ರೆ ಸರ್ಜನ್ ಡಾ.ಎಬಿ ಪಾಟೀಲ್ ಹೇಳಿದ್ದಾರೆ.

ಬೆಳಗಾವಿ ಗೋವಾ ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಮತ್ತೆ ಆ್ಯಕ್ಟೀವ್ ಆಗಿದ್ದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷದ ಹಿಂದೆ 12-9-2020ರಲ್ಲಿ ಬೆಳಗಾವಿ ಪೊಲೀಸರು ಚಾಕೊಲೇಟ್ ಗ್ಯಾಂಗ್​ನ ಬಂಧಿಸಿತ್ತು. ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತುವ ಯುವಕರ ಗ್ಯಾಂಗ್​ಬೋಗಿಯಲ್ಲಿನ ಪ್ರಯಾಣಿಕರ ಜತೆಗೆ ಸಲುಗೆ ಬೆಳಸಿ ನೀರು ಕೊಡುವುದು ಇಸಿದುಕೊಳ್ಳುವುದು ಮಾಡ್ತಾ ತಮ್ಮಲ್ಲಿದ್ದ ಚಾಕೊಲೇಟ್ ಅವರಿಗೆ ನೀಡಿ ಪ್ರಜ್ಞೆ ತಪ್ಪಿಸಿ ಚಿನ್ನ, ಹಣ, ಮೊಬೈಲ್ ದೋಚಿ ಪರಾರಿಯಾಗುತ್ತಿತ್ತು. ಪ್ರಯಾಣಿಕರ ದೂರಿನನ್ವಯ ಅಂದು ಬೆಳಗಾವಿ ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳಾದ ಮೊಹಮ್ಮದ್ ಮುಕ್ತಾರ್, ಸಾಬಾದ್, ಆಲಮ್ ನನ್ನ ಬಂಧಿಸಿದ್ದರು. ಇದಾದ ಬಳಿಕ ಮತ್ತೆ ಈ ರೀತಿ ಪ್ರಕರಣಗಳು ಸಂಭವಿಸಿರಲಿಲ್ಲ. ಆದರೆ ಮೂರು ವರ್ಷದ ಬಳಿಕ ಮತ್ತೆ ಅದೇ ಮಾದರಿಯಲ್ಲಿ ಕಳ್ಳತನ ಮಾಡ್ತಿದ್ದು ಎಂಟು ಜನ ಇದೀಗ ಆಸ್ಪತ್ರೆ ಪಾಲಾಗಿದ್ದು ಹಣ ಮೊಬೈಲ್ ಕಳೆದುಕೊಂಡು ಕಂಗಾಲಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಡ್ತಿದೆ.

ಇದನ್ನು ಓದಿ: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ; ಸಚಿವ ಡಿ. ಸುಧಾಕರ್ ಕ್ಷಮೆ ಕೇಳಲು ಆಗ್ರಹ

ಹಳೆ ಗ್ಯಾಂಗ್ ಮತ್ತೆ ಆ್ಯಕ್ಟೀವ್ ಆಯ್ತಾ ಅನ್ನೋ ಆಯಾಮದಲ್ಲಿ ಮತ್ತೆ ತನಿಖೆ ನಡೆಯಬೇಕಿದೆ. ಆದರೆ ಈವರೆಗೂ ಪ್ರಕರಣದ ಕುರಿತು ಕೇಸ್ ದಾಖಲಾಗಿಲ್ಲ. ಗೋವಾ ರೈಲ್ವೆ ಪೊಲೀಸರು ಕೇಸ್ ಮಾಡ್ತಾರೆ ಅಂತಾ ಬೆಳಗಾವಿ ರೈಲ್ವೆ ಪೊಲೀಸರು ಸುಮ್ಮಿನಿದ್ದು ಇನ್ನೆರಡು ದಿನದಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳು ತಮ್ಮೂರಿಗೆ ಹೊರಡುತ್ತಾರೆ. ಹೀಗಿರುವಾಗ ಪೊಲೀಸರು ಪ್ರಕರಣದಲ್ಲಿ ಬೇಜವಾಬ್ದಾರಿ ತೋರುತ್ತಿರುವುದು ಖದೀಮರಿಗೆ ವರದನಾವಾಗಿದೆ. ಇತ್ತ ಪ್ರಯಾಣಿಕರು ಭಯದಲ್ಲಿ ಓಡಾಡುವ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಇನ್ನೂ ಬಿಮ್ಸ್ ಆಸ್ಪತ್ರೆ ನಿರ್ದೇಶಕರು ಹೇಳುವ ಪ್ರಕಾರ ಚಾಕೊಲೇಟ್ ತಿಂದ ಮೇಲೆ ಈ ರೀತಿ ಆಗಿದ್ದು ಮದ್ದು ಬರುವ ವಸ್ತು ಅದರಲ್ಲಿ ಹಾಕಿದ್ದಾರೆ ಅಂತಾ ಹೇಳಿದ್ದು ಚಾಕೊಲೇಟ್ ಗ್ಯಾಂಗ್ ಆ್ಯಕ್ಟೀವ್ ಇರುವುದಕ್ಕೆ ಸಾಕ್ಷಿಯಾಗಿದೆ.

ಮೂರು ವರ್ಷದ ಹಿಂದೆ ಮಟ್ಟ ಹಾಕಿದ್ದ ಗ್ಯಾಂಗ್ ಇದೀಗ ಮತ್ತೆ ಚಿಗುರೊಡೆದಿದ್ದು ಎಂಟು ಜನರಿಗೆ ಮದ್ದು ಬರುವ ಚಾಕೊಲೇಟ್ ನೀಡಿ ಹಣ ದೋಚಿ ಪರಾರಿಯಾಗಿದ್ದು ಪ್ರಯಾಣಿಕರಲ್ಲಿ ಭಯ ಹುಟ್ಟಿಸಿದೆ. ಕೂಡಲೇ ಕೇಸ್ ದಾಖಲಿಸಿಕೊಂಡು ಎಲ್ಲ ಮಾಹಿತಿ ಕಲೆ ಹಾಕಿ ಕೂಡಲೇ ಈ ಚಾಕೊಲೇಟ್ ಗ್ಯಾಂಗ್ ಮತ್ತೆ ಮಟ್ಟ ಹಾಕುವ ಕೆಲಸ ಪೊಲೀಸರು ಮಾಡಲಿ. ಸಾರ್ವಜನಿಕರು ಅಪರಿಚಿತ ಪ್ರಯಾಣಿಕರಿಂದ ದೂರ ಇರುವುದು ಒಳಿತು. ಗೋವಾ ಬೆಳಗಾವಿ ರೈಲಿನಲ್ಲಿ ಪ್ರಯಾಣಿಕರು ಓಡಾಡುವುದನ್ನೇ ನಿಲ್ಲಿಸುವ ಸ್ಥಿತಿ ಎದುರಾಗಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರೇ ಎಚ್ಚರ! ಯಾರಿಂದಾದ್ರೂ ಚಾಕೊಲೇಟ್​​ ತಗೊಳ್ಳೋ ಮುನ್ನ ಹುಷಾರ್

https://newsfirstlive.com/wp-content/uploads/2023/09/bgm.jpg

Load More