newsfirstkannada.com

ಚಲುವರಾಯಸ್ವಾಮಿಗೆ ಕೊಂಚ ರಿಲೀಫ್; ಪ್ರಭಾವಿ ರಾಜಕಾರಣಿಗಳಿಗೆ ಕಂಟಕವಾಗುತ್ತಾ ಸಿಐಡಿ ವರದಿ?

Share :

27-08-2023

    ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದ ಕೇಸ್

    ರಾಜಕೀಯ ಸ್ವರೂಪ ಪಡೆದಿದ್ದ ಕೃಷಿ ಸಚಿವರ ವಿರುದ್ಧ ಬರೆದಿದ್ದ ಪತ್ರ

    ಸಿಐಡಿ ವರದಿಯಲ್ಲಿ ಬಹಿರಂಗವಾಗುತ್ತಾ ಷಡ್ಯಂತ್ರದ ಸಂಚು?

ಸಚಿವ ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೆಗಲೇರಿತ್ತು. ಅನಾಮಧೇಯ ಪತ್ರವೊಂದು ರಾಜ್ಯಪಾಲರ ದ್ವಾರ ತಲುಪಿತ್ತು. ಇದು ಸಿದ್ದರಾಮಯ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿತ್ತು. ಪತ್ರದ ಜಾಲವನ್ನು ಜಾಲಾಡಿದ ಸಿಐಡಿ ಅಧಿಕಾರಿಗಳು ತನಿಖೆಯನ್ನ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಇಂಟರೆಸ್ಟಿಂಗ್​ ಅಂದ್ರೆ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರ ಬಿದ್ದಿದೆ. ಪತ್ಯವ್ಯೂಹದಲ್ಲಿ ಸಿಲುಕಿದ್ದ ಕೃಷಿ ಸಚಿವ ಚಲುವರಾಯಸ್ವಾಮಿಗೀಗ ಕೊಂಚ ರಿಲೀಫ್​​ ಸಿಕ್ಕಿದೆ.

ಇಂಥದ್ದೊಂದು ಪತ್ರ ಹೊರ ಬೀಳುತ್ತಲೇ ವಿಪಕ್ಷಗಳು ಸರ್ಕಾರದ ವಿರುದ್ಧ ಇದ್ದನ್ನೇ ಅಸ್ತ್ರವಾಗಿ ಬಳಸಿದ್ವು. ಭ್ರಷ್ಟ ಸರ್ಕಾರ ಅಂತಾ ಚಾಟಿ ಬೀಸಿದ್ರು. ಕೂಡಲೇ ಅಲರ್ಟ್​ ಆದ ಸರ್ಕಾರ ಪ್ರಕರಣವನ್ನ ಸಿಐಡಿಗೆ ವಹಿಸಿತ್ತು. ಪತ್ರದ ಜಾಲವನ್ನ ಜಾಲಾಡಿದ ಸಿಐಡಿ ಟೀಂ, ನಕಲಿ ಪತ್ರ ಸೃಷ್ಟಿಸಿದ ಆರೋಪ ಮೇರೆಗೆ ಕೆ.ಆರ್.ಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್​ರನ್ನು​ ಬಂಧಿಸಿ ವಿಚಾರಣೆ ನಡೆಸಿದೆ. ತನಿಖೆ ಪೂರ್ಣಗೊಳಿಸಿ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದೆ.

ಪ್ರಭಾವಿ ರಾಜಕಾರಣಿಗಳಿಗೆ ಕಂಟಕವಾಗುತ್ತಾ ಸಿಐಡಿ ವರದಿ?

ನಿಜ.. ಸದ್ಯ ಸಿಐಡಿ ತನಿಖೆ ಬಳಿಕ ಇಂಥದ್ದೊಂದು ಪ್ರಶ್ನೆ ಉದ್ಭವಿಸಿದೆ. ಕೃಷಿ ಅಧಿಕಾರಿಗಳ ವಿಚಾರಣೆ ನಡೆಸಿರೋ ಸಿಐಡಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದು, ಈ ವರದಿ ಪ್ರಭಾವಿ ರಾಜಕಾರಣಿಗಳಿಗೆ ಕಂಟಕವಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಸಿಐಡಿ ವರದಿಯಿಂದ ಯಾರಿಕೆ ಕಂಟಕ?

  • ರಾಜಕೀಯ ಸ್ವರೂಪ ಪಡೆದಿದ್ದ ಕೃಷಿ ಸಚಿವರ ವಿರುದ್ಧ ಬರೆದಿದ್ದ ಪತ್ರ
  • ದೂರಿನ ಹಿಂದೆ ರಾಜಕೀಯ ನಾಯಕರ ಕೈವಾಡ ಎಂದಿದ್ದ ಕಾಂಗ್ರೆಸ್​
  • ನೇರವಾಗಿ ಜೆಡಿಎಸ್‌ ನಾಯಕರ ವಿರುದ್ಧ ಆರೋಪಿಸಿದ್ದ ಕಾಂಗ್ರೆಸ್​
  • ಕೃಷಿ ಅಧಿಕಾರಿಗಳ ಬಂಧನದ ಬಳಿಕವು ಷಡ್ಯಂತ್ರದ ಬಗ್ಗೆ ಆರೋಪ
  • ನೇರವಾಗಿ ಹೆಚ್​ಡಿಕೆಯತ್ತ ಬೊಟ್ಟು ಮಾಡಿದ್ದ ಚಲುವರಾಯಸ್ವಾಮಿ
  • ಸಿಐಡಿ ವಿಚಾರಣೆ ವೇಳೆಯೂ ಪತ್ರದ ಹಿಂದೆ ರಾಜಕೀಯ ಕೈವಾಡ ಪತ್ತೆ
  • ಎ.ಡಿ ಗುರುಪ್ರಸಾದ್, ಕೃಷಿ ಅಧಿಕಾರಿ ಸುದರ್ಶನ್ ವಿಚಾರಣೆ ವೇಳೆ ಮಾಹಿತಿ

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಬರೆದಿದ್ದ ಪತ್ರವನ್ನ ಸಿಐಡಿ ಟೀಂ ಜಾಲಾಡಿದೆ. ಸಿಐಡಿ ವಿಚಾರಣೆ ವೇಳೆ ಪತ್ರದ ಹಿಂದೆ ರಾಜಕೀಯ ಕೈವಾಡ ಇರುವ ಸ್ಫೋಟಕ ಮಾಹಿತಿಯೂ ಹೊರ ಬಿದ್ದಿದೆ. ತನಿಖೆ ಪೂರ್ಣಗೊಳಿಸಿರೋ ಸಿಐಡಿ ನಾಳೆಯೇ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದೆ. ಸಿಐಡಿ ವರದಿ ಪ್ರಭಾವಿ ರಾಜಕಾರಣಿಗಳಿಗೆ ಕಂಟಕವಾಗುತ್ತಾ ಅನ್ನೋದನ್ನ ಕಾದು ನೋಡಬೇಕಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲುವರಾಯಸ್ವಾಮಿಗೆ ಕೊಂಚ ರಿಲೀಫ್; ಪ್ರಭಾವಿ ರಾಜಕಾರಣಿಗಳಿಗೆ ಕಂಟಕವಾಗುತ್ತಾ ಸಿಐಡಿ ವರದಿ?

https://newsfirstlive.com/wp-content/uploads/2023/08/CHELUVARAYSWAMY-1.jpg

Load More