newsfirstkannada.com

ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಕೊರಿಯೋಗ್ರಾಫರ್ ನವ್ಯಾ ಬರ್ಬರ ಹತ್ಯೆ; ಅಸಲಿಗೆ ಆಗಿದ್ದೇನು?

Share :

Published August 28, 2024 at 8:13pm

    ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಮಹಿಳೆಯ ಬರ್ಬರ ಹತ್ಯೆ

    3 ವರ್ಷದ ಹಿಂದೆ ಕ್ಯಾಬ್ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದಳು

    ಭದ್ರಾವತಿ ಮೂಲದ ಕೊರಿಯೋಗ್ರಾಫರ್‌ ನವ್ಯಾ ಕೊಲೆಯಾದ ಮಹಿಳೆ

ಬೆಂಗಳೂರು: ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಇಂದು ಸಿನಿಮಾ ಕೊರಿಯೋಗ್ರಾಫರ್ ಬರ್ಬರ ಹತ್ಯೆಯಾಗಿದ್ದು ಇಡೀ ಸಿಲಿಕಾನ್ ಸಿಟಿ ಬೆಚ್ಚಿ ಬೀಳುವಂತೆ ಮಾಡಿದೆ. ಭದ್ರಾವತಿ ಮೂಲದ ನವ್ಯಾ ಕೊಲೆಯಾದ ಮಹಿಳೆ.

ಸಿನಿಮಾ ಕೊರಿಯೋಗ್ರಾಫರ್‌ ಆಗಿದ್ದ ನವ್ಯಾ ಅವರು 3 ವರ್ಷದ ಹಿಂದೆ ಚಿಕ್ಕಬಳ್ಳಾಪುರ ಮೂಲದ ಕಿರಣ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕ್ಯಾಬ್ ಚಾಲಕನಾಗಿದ್ದ ಕಿರಣ್, ನವ್ಯಾ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ ಹೋಗೋದು ಯಾವಾಗ? ಕಾನೂನು ಪ್ರಕ್ರಿಯೆ ಏನೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ! 

ನವ್ಯಾ ಜೊತೆ ಸಣ್ಣ, ಸಣ್ಣ ವಿಚಾರಕ್ಕೂ ಜಗಳ ಮಾಡುತ್ತಿದ್ದ ಕಿರಣ್ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಯಾನಕವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿಯನ್ನು ಕುರ್ಚಿಗೆ ಕಟ್ಟಿ ಹಾಕಿ ಗಂಡನೇ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: Bigg Boss Kannada: ಕೊನೆಗೂ ಬಂತು ಬಿಗ್‌ಬಾಸ್‌ ಕಾರು.. ವಿನ್ನರ್ ಕಾರ್ತಿಕ್ ಮಹೇಶ್ ಬಿಗ್ ಅಪ್ಡೇಟ್‌! 

25 ವರ್ಷದ ನವ್ಯಾ ಹಾಗೂ ಕಿರಣ್‌ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ವಾಸವಿದ್ದರು. ಪತಿ‌ ಕಿರಣ್ ಪತ್ನಿಯ ಮೇಲೆ ಅನುಮಾನಗೊಂಡು ಗಲಾಟೆ ಮಾಡುತ್ತಿದ್ದ. ಶೀಲ ಶಂಕಿಸಿ ಪತಿಯಿಂದಲೇ ಪತ್ನಿಯ ಹತ್ಯೆಯಾಗಿದೆ ಎನ್ನಲಾಗಿದೆ. ಹೆಂಡತಿಯನ್ನು ಕೊಲೆ ಮಾಡಿದ ಕಿರಣ್ ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದ. ಕೆಂಗೇರಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಕೊರಿಯೋಗ್ರಾಫರ್ ನವ್ಯಾ ಬರ್ಬರ ಹತ್ಯೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/08/Bangalore-Wife-murder-3-1.jpg

Load More