newsfirstkannada.com

ಹಾಡಹಗಲೇ ಸಿನಿಮೀಯ ರೀತಿಯ ದರೋಡೆ.. 20 ಕೋಟಿ ಮೌಲ್ಯದ ಆಭರಣ ಲೂಟಿ ಮಾಡಿ ಪರಾರಿ

Share :

10-11-2023

  ಗ್ರಾಹಕರಂತೆ ಆಗಮಿಸಿದ್ದ 8 ಯುವಕರು ಪಿಸ್ತೂಲು ತೋರಿಸಿ ದರೋಡೆ

  ಪ್ಲಾಸ್ಟಿಕ್ ಕೇಬಲ್ ಟೈಯಿಂದ ಮಹಿಳಾ ಉದ್ಯೋಗಿಗಳನ್ನು ಕಟ್ಟಿ ಹಾಕಿ ಕೃತ್ಯ

  ಚಿನ್ನಾಭರಣವನ್ನೆಲ್ಲ ಬ್ಯಾಗ್‌ನಲ್ಲಿ ತುಂಬಿಕೊಂಡು ಪರಾರಿಯಾದ ಕಳ್ಳರು

ಡೆಹ್ರಾಡೂನ್‌: ಉತ್ತರಾಖಂಡ್‌ನ ರಾಜಪುರ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಶಾಲೆಯ ಮುಂಭಾಗದಲ್ಲಿರುವ ರಿಲಯನ್ಸ್ ಜ್ಯುವೆಲರ್ಸ್​​ನಲ್ಲಿ ದರೋಡೆ ಆಗಿದೆ. ಎಂದಿನಂತೆ ಬೆಳಗ್ಗೆ 10.20ರ ಸುಮಾರಿಗೆ ಸಿಬ್ಬಂದಿ ಜ್ಯುವೆಲರ್ಸ್ ಶೋ ರೂಂ ತೆರೆದಿದ್ದಾರೆ. ಕೌಂಟರ್​ನಲ್ಲಿ ನೌಕರರು ಆಭರಣ ಜೋಡಿಸುತ್ತಿದ್ದರು. ಗ್ರಾಹಕರಂತೆ ಆಗಮಿಸಿದ್ದ 8 ಯುವಕರು ಪಿಸ್ತೂಲು ತೋರಿಸಿ ಸಿನಿಮೀಯ ರೀತಿಯಲ್ಲಿ ಆಭರಣ ಅಂಗಡಿ ಲೂಟಿ ಮಾಡಿದ್ದಾರೆ.

ಇಬ್ಬರು ದುಷ್ಕರ್ಮಿಗಳು ಪ್ಲಾಸ್ಟಿಕ್ ಕೇಬಲ್ ಟೈಯಿಂದ ಮೂವರು ಮಹಿಳಾ ಉದ್ಯೋಗಿಗಳನ್ನು ಹೊರತುಪಡಿಸಿ ಎಲ್ಲರ ಕೈಗಳನ್ನು ಕಟ್ಟಿ ಹಾಕಿದ್ದಾರೆ. ಎಲ್ಲರನ್ನೂ ಸ್ವಾಗತ ಕೌಂಟರಿನ ಬಳಿ ಕೂರಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ಚಿನ್ನಾಭರಣ ಸಂಗ್ರಹಿದ್ದಾರೆ. ಮೂವರು ಮಹಿಳಾ ಉದ್ಯೋಗಿಗಳಿಗೆ ಪಿಸ್ತೂಲ್ ತೋರಿಸಿ ಆಭರಣಗಳನ್ನು ತ್ವರಿತವಾಗಿ ತೆಗೆಯುವಂತೆ ಹೇಳಿದ್ದಾರೆ. ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸಂಪೂರ್ಣವಾಗಿ ಸೆರೆಯಾಗಿದೆ.

ನಂತರ ಎಲ್ಲಾ ಉದ್ಯೋಗಿಗಳನ್ನು ಕಟ್ಟಿ ಹಾಕಿ ಶೋರೂಂನ ಅಡುಗೆ ಕೋಣೆಗೆ ಬೀಗ ಹಾಕಿದ್ದಾರೆ. ಚಿನ್ನಾಭರಣವನ್ನೆಲ್ಲ ಬ್ಯಾಗ್‌ನಲ್ಲಿ ತುಂಬಿಕೊಂಡು ಓಡಿ ಹೋಗಿದ್ದಾರೆ. ಇದಾದ ನಂತರ ಮಹಿಳಾ ಉದ್ಯೋಗಿಗಳು ಗಾರ್ಡ್ ಮತ್ತು ಇತರ ನೌಕರರನ್ನು ಅಡುಗೆ ಕೋಣೆಯಿಂದ ಹೊರಗೆ ಕರೆದೊಯ್ದು ವ್ಯವಸ್ಥಾಪಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಹಗಲೇ ಸಿನಿಮೀಯ ರೀತಿಯ ದರೋಡೆ.. 20 ಕೋಟಿ ಮೌಲ್ಯದ ಆಭರಣ ಲೂಟಿ ಮಾಡಿ ಪರಾರಿ

https://newsfirstlive.com/wp-content/uploads/2023/11/Diamond-Robbery.jpg

Load More