ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಬಸ್ ಚಲಾಯಿಸಿದ ಚಾಲಕ
ಸಮಯ ಪ್ರಜ್ಞೆಯಿಂದ ಬಸ್ ದುರಂತ ತಪ್ಪಿಸಿದ ಕಮಾಂಡರ್
ಬಸ್ ದುರಂತ ತಪ್ಪಿಸಿ 55ಕ್ಕೂ ಹೆಚ್ಚು ಮಂದಿಯನ್ನು ಉಳಿಸಿದ್ರು!
ರುದ್ರಾಪುರ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಅಸಿಸ್ಟಂಟ್ ಕಮಾಂಡರ್ ಒಬ್ಬರು ಭೀಕರ ಬಸ್ ಅಪಘಾತವೊಂದನ್ನು ತಪ್ಪಿಸಿದ್ದಾರೆ. ಈ ಮೂಲಕ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ 55ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಾಪಾಡಿದ್ದಾರೆ.
ಉತ್ತರಾಖಂಡದ ಉದಾಮ್ ಸಿಂಗ್ ನಗರ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಚಾಲಕನೋರ್ವ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಬಸ್ ಚಲಾಯಿಸುತ್ತಿದ್ದ. ನೈನಿತಾಲ್ ರೋಡ್ ಸಮೀಪದ ತಾಂಡ ಎಂಬ ಅರಣ್ಯ ಪ್ರದೇಶದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಇನ್ನೇನು ಬಸ್ ಅಪಘಾತಕ್ಕೆ ಗುರಿಯಾಗಬೇಕು ಎನ್ನುವಾಗ CISF ಅಸಿಸ್ಟಂಟ್ ಕಮಾಂಡರ್ ಸ್ಟೇರಿಂಗ್ ಹಿಡಿದು ಕಂಟ್ರೋಲ್ಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಅರಣ್ಯ ಪ್ರದೇಶದಲ್ಲಿ ಅಪಘಾತವಾಗಬೇಕಿದ್ದ ಬಸ್ ಅನ್ನೇ ಕಂಟ್ರೋಲ್ ಮಾಡಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಮೊದಲು ಡ್ರೈವರ್ ಸೀಟ್ನಿಂದ ಚಾಲಕನನ್ನು ಹೊರಗೆ ಎಳೆದಿದ್ದಾರೆ. ಬಳಿಕ ಸ್ಟೇರಿಂಗ್ ಕಟ್ರೋಲ್ ಮಾಡಿ ನಿಧಾನಕ್ಕೆ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಬಸ್ ಕೊನೆಯಲ್ಲಿ ಇದ್ದ ಅಸಿಸ್ಟಂಟ್ ಕಮಾಂಡರ್ ತನ್ನ ಪ್ರಾಣವನ್ನು ಲೆಕ್ಕಿಸದೆ ಈ ಕೆಲಸ ಮಾಡಿದ್ದಾರೆ. ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕುಡಿದು ಅಡ್ಡಾದಿಡ್ಡಿ ಬಸ್ ಚಲಾವಣೆ
ಮಕ್ಕಳು, ಮಹಿಳೆರು, ವೃದ್ಧರು ಸೇರಿದಂತೆ 55ಕ್ಕೂ ಹೆಚ್ಚು ಪ್ರಯಾಣಿಕರು ಬದುಕುಳಿದಿದ್ದಾರೆ. ಭಾರೀ ವಾಹನಗಳು ಯಾವುದೇ ಕಾರಣಕ್ಕೂ ಈ ರಸ್ತೆಯಲ್ಲಿ 60 ಕಿಲೋ ಮೀಟರ್ಗೂ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಡ್ರೈವರ್ 60 ಕಿಲೋ ಮೀಟರ್ಗೂ ಹೆಚ್ಚು ವೇಗದಲ್ಲಿ ಚಲಾಯಿಸಿದ ಕಾರಣ ಈ ಅನಾಹುತ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ