newsfirstkannada.com

ಜನರಿಗೆ ಬಿಗ್​​ ಶಾಕ್​​; ಸಾಂಬಾರು ಪದಾರ್ಥ, ತರಕಾರಿ, ಹಣ್ಣುಗಳ ಬೆಲೆ ಭಾರೀ ಏರಿಕೆ; 1 ಕೆಜಿಗೆ ಎಷ್ಟು..?

Share :

26-06-2023

    ಗ್ಯಾರಂಟಿ ಯೋಜನೆಗಳ ಖುಷಿಯಲ್ಲಿದ್ದ ರಾಜ್ಯದ ಜನರಿಗೆ ಬಿಗ್​ ಶಾಕ್​​

    ಕೈಕೊಟ್ಟ ಮಳೆ, ವಿದ್ಯುತ್​​ ಬಿಲ್​ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ

    ಸಾಂಬಾರು ಪದಾರ್ಥ, ತರಕಾರಿ, ಹಣ್ಣುಗಳ ದರದಲ್ಲಿ ಭಾರೀ ಹೆಚ್ಚಳ..!

ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಿಸಿತ್ತು. ಈಗ ಕೊಟ್ಟ ಮಾತು ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿ ಜಾರಿಗೆ ಮುಂದಾಗಿದೆ. ಹೀಗೆ ಜನ ಗ್ಯಾರಂಟಿ ಯೋಜನೆಗಳ ಖುಷಿಯಲ್ಲಿರುವಾಗಲೇ ರಾಜ್ಯ ಸರ್ಕಾರ ಕರೆಂಟ್​ ಬಿಲ್​ ಏರಿಕೆ ಮಾಡಿ ಶಾಕ್​ ನೀಡಿತ್ತು. ಈಗ ವಿದ್ಯುತ್​​ ಬಿಲ್​ ಏರಿಕೆ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಸಾರ್ವಜನಿಕರು ತರಕಾರಿ ಅಂಗಡಿಗೆ ಹೋದರೂ, ದಿನಸಿ ಅಂಗಡಿಗೆ ಭೇಟಿ ಕೊಟ್ಟರೂ ಜೇಬಿಗೆ ಕತ್ತರಿ ಬೀಳುವುದು ಮಾತ್ರ ಗ್ಯಾರಂಟಿ.

ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಮುಂಗಾರು ಕೈ ಕೊಟ್ಟ ಪರಿಣಾಮ ತರಕಾರಿ ಬೆಲೆ ಏರಿಕೆ ಆಗಿದೆ. ಅದರಲ್ಲೂ ಇರುವ ಕಡಿಮೆ ತರಕಾರಿಗೆ ಭಾರೀ ಬೇಡಿಕೆ ಬಂದಿದೆ. ಜತೆಗೆ ನಿತ್ಯ ಸೇವಿಸುವ ಆಹಾರ ಸಾಮಾಗ್ರಿಗಳ ಬೆಲೆಯೂ ಗಗನಕ್ಕೇರುತ್ತಿದೆ. ಹಣ್ಣುಗಳ ದರದ ಬಗ್ಗೆ ಅಂತೂ ಮಾತಾಡುವ ಹಾಗೇ ಇಲ್ಲ. ಈ ಬೆಲೆ ಏರಿಕೆಯಿಂದ ತರಕಾರಿ ಪ್ರಿಯರು, ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಬೆಲೆ ಬಿಸಿ ಆಗಿದೆ.

ಕೋವಿಡ್​​ ಬಳಿಕ ದೇಶದಲ್ಲಿ ಹೆಚ್ಚಾದ ಹಣದುಬ್ಬರದಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದರು. ಇದರ ಪರಿಣಾಮ ಹಲವು ದಿನಗಳ ಕಾಲ ನಿರಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇತ್ತು. ಬಳಿಕ ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ, ಸಾಂಬಾರು ಪದಾರ್ಥಗಳು ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿತ್ತು. ಈ ಅಂಥದ್ದೇ ಪರಿಸ್ಥಿತಿ ಮತ್ತೆ ಎದುರಾಗಿದೆ.

ಸಾಂಬಾರು ಪದಾರ್ಥಗಳ ಬೆಲೆ ಹೀಗಿದೆ..!

  • ಉದ್ದಿನಬೇಳೆ ₹128
  • ಮಸೂರ್‌ ದಾಲ್ ₹85
  • ಹೆಸರು ಬೇಳೆ ₹105
  • ಜೀರಾ ₹750
  • ಅರಿಶಿಣ ಪುಡಿ ₹307
  • ಚಿಲ್ಲಿ ಪೌಡರ್ ₹425
  • ದನಿಯಾ ಪೌಡರ್ ₹218
  • ಪೆಪ್ಪರ್ ‌₹520
  • ಬ್ಯಾಡಗಿ ಮೆಣಸು 850

ತರಕಾರಿ ದರ ಹೀಗಿದೆ..!

  • ಟೊಮ್ಯಾಟೊ ₹120
  • ಬೀನ್ಸ್ ₹110
  • ಕ್ಯಾರೆಟ್ ₹90
  • ನವಿಲುಕೋಸು ₹70
  • ಮೂಲಂಗಿ ₹49
  • ನುಗ್ಗೆಕಾಯಿ ₹100
  • ಬೀಟ್‍ರೂಟ್ ₹50
  • ಹಸಿಮೆಣಸಿನಕಾಯಿ ₹115
  • ಬೆಂಡೆಕಾಯಿ ₹54
  • ಬೆಳ್ಳುಳ್ಳಿ ₹170
  • ಶುಂಠಿ ₹200
  • ಕರಿಬೇವು ₹80
  • ಕೊತ್ತಂಬರಿ ₹45

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನರಿಗೆ ಬಿಗ್​​ ಶಾಕ್​​; ಸಾಂಬಾರು ಪದಾರ್ಥ, ತರಕಾರಿ, ಹಣ್ಣುಗಳ ಬೆಲೆ ಭಾರೀ ಏರಿಕೆ; 1 ಕೆಜಿಗೆ ಎಷ್ಟು..?

https://newsfirstlive.com/wp-content/uploads/2023/06/Vegetables.jpg

Load More