ಸದನದಲ್ಲಿ ಬಜೆಟ್ ಮಂಡಿಸುವಾಗ ರೊಚ್ಚಿಗೆದ್ದ ವಿರೋಧ ಪಕ್ಷಗಳು
ಬಿಜೆಪಿ ಶಾಸಕರಿಂದ ಅಶ್ಲೀಲ ವಿಡಿಯೋ ನೋಡಿದ ಆರೋಪಕ್ಕೆ ಗದ್ದಲ
ಸದನದ ಬಾವಿಗಿಳಿದು ಗಲಾಟೆ, ದಾಂಧಲೆ ನಡೆಸಿದ ಜನಪ್ರತಿನಿಧಿಗಳು
ಅಗರ್ತಲಾ: ಬಿಜೆಪಿ ಶಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಪಕ್ಷ ನಾಯಕರೆಲ್ಲಾ ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಿದ ಘಟನೆ ತ್ರಿಪುರ ವಿಧಾನಸಭೆಯಲ್ಲಿ ನಡೆದಿದೆ. ಸದನದಲ್ಲಿ ಹಣಕಾಸು ಸಚಿವ ಪ್ರಣಜಿತ್ ಸಿಂಗ್ ರಾಯ್ ಬಜೆಟ್ ಮಂಡಿಸಲು ಮುಂದಾದ್ರು. ಈ ವೇಳೆ ತಿಪ್ರಾ ಮೋತಾ ಪಕ್ಷದ ಸದಸ್ಯರು, ಕಾಂಗ್ರೆಸ್, ಸಿಪಿಐಎಂ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾಗ್ವಾದದ ಮಧ್ಯೆ ಪ್ರತಿಪಕ್ಷ ಸದಸ್ಯರು ಉಗ್ರ ಹೋರಾಟ ನಡೆಸಲು ಮುಂದಾಗಿದ್ದಾರೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಾಗ ಟೇಬಲ್ ಮೇಲೆ ಹತ್ತಿ ಕೂಗಾಡಿದ್ದಲ್ಲದೆ ತಳ್ಳಾಟ, ನೂಕಾಟಗಳು ಜರುಗಿವೆ.
ಬಜೆಟ್ ಅಧಿವೇಶನದಲ್ಲಿ ಆಡಳಿತ, ವಿಪಕ್ಷ ನಾಯಕರ ಮಧ್ಯೆ ವಾಗ್ವಾದ ನಡೆಯುವಾಗ ಪರಿಸ್ಥಿತಿ ನಿಯಂತ್ರಿಸಲು ಸ್ಪೀಕರ್ ಹರಸಾಹಸ ಪಟ್ಟಿದ್ದಾರೆ. ಗಲಾಟೆ ಮಧ್ಯೆ ಹತ್ತಾರು ಮಾರ್ಷಲ್‌ಗಳು ರೊಚ್ಚಿಗೆದ್ದ ಸದಸ್ಯರನ್ನ ಹಿಡಿದು ನಿಲ್ಲಿಸಲು ಸಾಧ್ಯವಾಗಿಲ್ಲ. ಆಕ್ರೋಶಗೊಂಡ ಪ್ರತಿಪಕ್ಷದ ನಾಯಕರ ಈ ಗಲಾಟೆಯ ಬಿಜೆಪಿ ಸದಸ್ಯರ ಮೇಲೆ ಕೈ, ಕೈ ಮಿಲಾಯಿಸೋ ಹಂತಕ್ಕೆ ಹೋಗಿದೆ. ಬಿಜೆಪಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲು ಪಟ್ಟು ಹಿಡಿದ ವಿರೋಧ ಪಕ್ಷದ ಸದಸ್ಯರು ಕೋಲಾಹಲಕ್ಕೆ ಕಾರಣವಾಗಿದ್ದಾರೆ.
ಕಲಾಪದಲ್ಲಿ ಕೋಲಾಹಲಕ್ಕೆ ಕಾರಣವೇನು?
ಕಳೆದ ತ್ರಿಪುರ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕ ಜಡ್ಬದ್ ಲಾಲ್ ನಾಥ್ ಅವರು ಸದನದಲ್ಲೇ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಬಿಜೆಪಿ ಶಾಸಕನ ನೀಲಿ ಪುರಾಣ ದೇಶಾದ್ಯಂತ ಚರ್ಚೆಗೀಡಾಗಿತ್ತು. ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇಂದು ತ್ರಿಪುರದಲ್ಲಿ ಬಜೆಟ್ ಅಧಿವೇಶನ ಆರಂಭವಾಗ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಗಂಗಾ ಜಲವನ್ನ ತಂದು ಶುದ್ಧಿಕರಿಸಲು ಮುಂದಾದ್ರು. ಬಿಜೆಪಿ ಶಾಸಕ ಅಶ್ಲೀಲ ವಿಡಿಯೋ ನೋಡಿರೋದ್ರಿಂದ ಸದನ ಅಪವಿತ್ರವಾಗಿದೆ ಎಂದು ಕಾಂಗ್ರೆಸ್ ಸದಸ್ಯರ ಮೇಲೆ ಗಂಗಾ ಜಲ ಹಾಕಲಾಯ್ತು. ಇದಾದ ಬಳಿಕ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪ್ರತಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಾಟೆ, ಗದ್ದಲದ ಮಧ್ಯೆ ಸದನ ರಣಾಂಗಣವಾಗಿತ್ತು.
ಪ್ರತಿಪಕ್ಷ ಸದಸ್ಯರ ಗದ್ದಲ, ಕೂಗಾಟದ ಮಧ್ಯೆ ಸದನದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಗ ತ್ರಿಪುರ ಸಿಎಂ ಮಾಣಿಕ್ ಶಾ ಸ್ಪೀಕರ್‌ಗೆ 5 ಶಾಸಕರನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಯ ಮನವಿ ಮೇರೆಗೆ ತ್ರಿಪುರ ಸ್ಪೀಕರ್ ಬಿಸ್ವಾಬಂಧು ಸೇನ್ ಅವರು ಐವರು ಶಾಸಕರನ್ನ ಅಮಾನತುಗೊಳಿಸಿ ಆದೇಶಿಸಿದ್ದಾರೆ. ತಿಪ್ರಾ ಮೋತಾ ಪಕ್ಷದ ಮೂವರು, ಕಾಂಗ್ರೆಸ್ ಹಾಗೂ ಸಿಪಿಐಎಂನ ತಲಾ ಒಬ್ಬರು ಶಾಸಕರು ಸದನದಿಂದ ಅಮಾನತ್ತುಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
त्रिपुरा के एक बीजेपी विधायक यादव लाल नाथ कुछ दिन पहले विधानसभा में बैठकर पोर्न फिल्म देख रहे थे. उसने पवित्र सभा को अपवित्र किया। आज कांग्रेस विधायक श्री सुदीप रॉय बर्मन ने विधानसभा में गंगा जल छिड़क कर विधानसभा को पवित्र करने का प्रयास किया। pic.twitter.com/RyXoLIAyBv
— Tripura Congress (@INCTripura) July 7, 2023