Advertisment

ವಿದ್ಯಾರ್ಥಿ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿ ದುಷ್ಕೃತ್ಯ ಮೆರೆದ ದುಷ್ಕರ್ಮಿಗಳು; ಉತ್ತರಪ್ರದೇಶದಲ್ಲಿ ಹೀನ ಕೃತ್ಯ

author-image
Bheemappa
Updated On
ವಿದ್ಯಾರ್ಥಿ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿ ದುಷ್ಕೃತ್ಯ ಮೆರೆದ ದುಷ್ಕರ್ಮಿಗಳು; ಉತ್ತರಪ್ರದೇಶದಲ್ಲಿ ಹೀನ ಕೃತ್ಯ
Advertisment
  • ಯುವಕನನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ
  • ಮೊಹಲ್ಲಾ ಜಾಗೃತಿ ವಿಹಾರದಲ್ಲಿ ಯುವಕನಿಗೆ ಮನಬಂದಂತೆ ಥಳಿತ
  • ಈ ಬಗ್ಗೆ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ ಯುವಕನ ತಂದೆ

ಲಕ್ನೋ: ಉತ್ತರ ಪ್ರದೇಶದ ಮೀರತ್‌ನಲ್ಲಿ ದುಷ್ಕರ್ಮಿಗಳ ಗುಂಪೊಂದು 12ನೇ ತರಗತಿಯ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisment

ನವೆಂಬರ್ 13 ರಂದು ವಿದ್ಯಾರ್ಥಿ ಸಂಬಂಧಿಕರ ಮನೆಗೆ ಹೋಗಿ ವಾಪಸ್ಸಾಗುವಾಗ 7 ಜನ ದುಷ್ಕರ್ಮಿಗಳು ಯುವಕನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಅಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮೀರತ್ ಮೆಡಿಕಲ್ ಪೊಲೀಸ್ ಠಾಣಾ ಪ್ರದೇಶದ ಮೊಹಲ್ಲಾ ಜಾಗೃತಿ ವಿಹಾರದಲ್ಲಿ ಘಟನೆ ನಡೆದಿದ್ದು ಹಲ್ಲೆ ಬಳಿಕ ವಿದ್ಯಾರ್ಥಿಯ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿ ದುಷ್ಕೃತ್ಯ ಮೆರೆದಿದ್ದಾರೆ. ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment