Advertisment

ವಿದ್ಯಾರ್ಥಿಗೆ 100ಕ್ಕೂ ಹೆಚ್ಚು ಬಾರಿ ಕಾಂಪಾಸ್​​ನಿಂದ ಹಲ್ಲೆ ನಡೆಸಿದ ಸಹಪಾಠಿಗಳು; ಅಸಲಿಗೆ ಆಗಿದ್ದೇನು?

author-image
Veena Gangani
Updated On
ವಿದ್ಯಾರ್ಥಿಗೆ 100ಕ್ಕೂ ಹೆಚ್ಚು ಬಾರಿ ಕಾಂಪಾಸ್​​ನಿಂದ ಹಲ್ಲೆ ನಡೆಸಿದ ಸಹಪಾಠಿಗಳು; ಅಸಲಿಗೆ ಆಗಿದ್ದೇನು?
Advertisment
  • 4ನೇ ತರಗತಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದಲೇ ಹಲ್ಲೆ
  • ಘಟನೆ ಬಗ್ಗೆ ಏರೋಡ್ರೋಮ್ ಪೊಲೀಸ್ ಠಾಣೆಯಲ್ಲಿ ಕೇಸ್​​​
  • ಸಿಸಿಟಿವಿ ದೃಶ್ಯಾವಳಿ ನೀಡುತ್ತಿಲ್ಲ ಎಂದು ಪೋಷಕರ ಆರೋಪ

ಭೋಪಾಲ್: 4ನೇ ತರಗತಿ ವಿದ್ಯಾರ್ಥಿ ಮೇಲೆ ಮೂವರು ಸಹಪಾಠಿಗಳು ಕೈವಾರ​ದಿಂದ 108 ಬಾರಿ ದಾಳಿ ಮಾಡಿರೋ ಆಘಾತಕಾರಿ ಘಟನೆ ಇಂದೋರ್ ನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಹೌದು, ಮೂವರು ಓರ್ವನ ಮೇಲೆ ಏಕಾಏಕಿ ದಾಳಿ ನಡೆಸಿ ಸೀನ್​ ಕ್ರಿಯೇಟ್​ ಮಾಡಿದ್ದಾರೆ. ಬಾಲಕನಿಗೆ ಗಂಭೀರ ಗಾಯಗಳಾಗಿವೆ.

Advertisment

ಹಲ್ಲೆಗೆ ಒಳಗಾದ ಬಾಲಕ ಮನೆಗೆ ಹೋಗಿ ವಿಚಾರದ ಬಗ್ಗೆ ಪೋಷಕರಿಗೆ ತಿಳಿಸಿದ್ದಾನೆ. ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆ ದಾಖಲಿಸಿದ್ದಾರೆ. ಈ ಘಟನೆ ಸಂಬಂಧ ಹಲ್ಲೆಗೊಳಗಾದ ಬಾಲಕನ ಪೋಷಕರು ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ತನಿಖೆ ನಡೆಸಿದ್ದಾರೆ. ನವೆಂಬರ್ 24 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಲೆಯಲ್ಲಿ ನಡೆದ ದಾಳಿಯಿಂದಾಗಿ ನನ್ನ ಮಗನಿಗೆ ಭೀತಿ ಉಂಟಾಗಿದೆ ಎಂದು ತಂದೆ ಆರೋಪಿಸಿದ್ದಾರೆ.

“ನನ್ನ ಮಗ ಮನೆಗೆ ಹಿಂದಿರುಗಿದಾಗ ಈ ಬಗ್ಗೆ ತಿಳಿಸಿದ. ಅವನ ಸಹಪಾಠಿಗಳು ಏಕೆ ಹಿಂಸಾತ್ಮಕವಾಗಿ ನಡೆದುಕೊಂಡರು ಎಂದು ನನಗೆ ಇನ್ನೂ ತಿಳಿದಿಲ್ಲ. ಶಾಲೆಯ ಆಡಳಿತ ಮಂಡಳಿಯು ತರಗತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತಿಲ್ಲ’ ಎಂದು ಅವರು ಆಪಾದಿಸಿದ್ದಾರೆ. ಘಟನೆಯ ಬಗ್ಗೆ ಏರೋಡ್ರೋಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದೂ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment