newsfirstkannada.com

ಸೂರ್ಯನ ಮುಂದಿದೆ ಬಿಗ್​ ಚಾಲೆಂಜ್​.. ಕ್ಯಾಪ್ಟನ್ ಮತ್ತು ಕೋಚ್​ ಕಡೆಯಿಂದ ಬಂತು ಖಡಕ್​ ​​​​ಮೆಸೇಜ್ 

Share :

11-08-2023

    ಸೂರ್ಯನ ಸ್ಟ್ರೆಂಥ್​ ಬಳಸಿಕೊಳ್ಳಲು ಮಾಸ್ಟರ್​ ಪ್ಲಾನ್​

    ಸೂರ್ಯಗೆ ಕ್ಯಾಪ್ಟನ್ & ಕೋಚ್ ನೀಡಿರುವ ಟಾಸ್ಕ್ ಏನು?

    ಹೊಸ ರೋಲ್​​ ಹಿಂದಿದೆ ಮಾಸ್ಟರ್​ ಸ್ಟಾಟರ್ಜಿ

ಟಿ20ಯಲ್ಲಿ ಸೂರ್ಯನ ಸಕ್ಸಸ್​ ಬಗ್ಗೆ ಪ್ರಶ್ನೆಯೇ ಇಲ್ಲ. ಆದ್ರೆ, ಏಕದಿನ ಫಾರ್ಮೆಟ್​​ನಲ್ಲಿ ಸೂರ್ಯನ ಬ್ಯಾಟಿಂಗ್​ ಪ್ರತಿ ಸಲ ಚರ್ಚೆಯ ಕೇಂದ್ರ ಬಿಂದು. ಇಂಥಾ ಸೂರ್ಯನಿಗೆ ಏಕದಿನ ಫಾರ್ಮೆಟ್​ನಲ್ಲಿ ಟೀಮ್​ ಮ್ಯಾನೇಜ್​ಮೆಂಟ್​ ಹೊಸ ಟಾಸ್ಕ್ ನೀಡಿದೆ. ಅದೇನು.? ಇಲ್ಲಿದೆ ನೋಡಿ.

ಸೂರ್ಯ. ಜಗತ್ತಿಗೆ ಹೇಗೆ ಒಬ್ಬನೇ ಸೂರ್ಯನೂ. ಟಿ20 ಕ್ರಿಕೆಟ್​​ನಲ್ಲಿ ಈತನ ಆಟಕ್ಕೆ ಈತನೇ ಸರಿಸಾಟಿ. ಎದುರಾಳಿ ಯಾರೇ ಇರಲಿ. ಮೈದಾನ ಯಾವುದೇ ಇರಲಿ. ನಮ್ಮ ಸೂರ್ಯನ ಅಬ್ಬರಕ್ಕೆ ಬ್ರೇಕ್​ ಹಾಕೋರೆ ಇಲ್ಲ. ಪ್ರಚಂಡ ಬೌಲರ್ಸ್​​ ಇದ್ರೂ ಸೂರ್ಯನ ಕಟ್ಟಿಹಾಕೋದು ಅಸಾಧ್ಯದ ವಿಚಾರ. ಯಾಕಂದ್ರೆ, ಈತನಿಗೆ THE SKY IS LIMIT. ಆದರೆ, ಏಕದಿನ ವಿಚಾರಕ್ಕೆ ಬಂದ್ರೆ, ಇದು ಕಂಪ್ಲೀಟ್​ ಚೇಂಜ್​.

ಹೌದು! ಟಿ20ಯಲ್ಲಿ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸುವ ಸೂರ್ಯ, ಏಕದಿನ ಫಾರ್ಮೆಟ್​ನಲ್ಲಿ ಕಂಪ್ಲೀಟ್ ಫೇಲ್ಯೂರ್ ಅನ್ನೋದು ಓಪನ್ ಸಿಕ್ರೇಟ್. ಆಡಿದ 51 ಟಿ20 ಪಂದ್ಯಗಳಿಂದ 1780 ರನ್ ಕೊಳ್ಳೆ ಹೊಡೆದಿರುವ ಸೂರ್ಯ, ಏಕದಿನ ಫಾರ್ಮೆಟ್​ನಲ್ಲಿ ಆಡಿದ 26 ಪಂದ್ಯಗಳಿಂದ ಇದುವರೆಗೆ ಗಳಿಸಿರೋದು ಜಸ್ಟ್​ 511 ರನ್!. ಇಂಥಾ ಅಟ್ಟರ್​ ಫ್ಲಾಫ್ ಪರ್ಫಾಮೆನ್ಸ್​ ನೀಡಿರುವ ಸೂರ್ಯ​​ಗೆ ಮ್ಯಾನೇಜ್​ಮೆಂಟ್​ ಹೊಸ ಟಾಸ್ಕ್​​ ನೀಡಿದೆ.

ಸೂರ್ಯ ಕುಮಾರ್​ ಯಾದವ್​
ಸೂರ್ಯ ಕುಮಾರ್​ ಯಾದವ್​

ಸೂರ್ಯಕುಮಾರ್​ ಸ್ಟ್ರೆಂಥ್​ ತಂಡಕ್ಕೆ ಲಾಭವಾಗುತ್ತಾ.?

ಏಕದಿನ ವಿಶ್ವಕಪ್​​ನತ್ತ ದೃಷ್ಟಿ ನೆಟ್ಟಿರುವ ಟೀಮ್ ಮ್ಯಾನೇಜ್​ಮೆಂಟ್​, ಈಗ ಸೂರ್ಯಕುಮಾರ್​ ಯಾದವ್​ಗೆ ಹೊಸ ಟಾಸ್ಕ್ ನೀಡಿದೆ. ಸೂರ್ಯರ ಸ್ಟ್ರೆಂಥ್​ ಅನ್ನೇ ಎನ್​ಕ್ಯಾಶ್​ ಮಾಡಿಕೊಳ್ಳುಲು ಮುಂದಾಗಿದೆ. ಈ ನಿಟ್ಟಿನಲ್ಲಿಯೇ  4 ಹಾಗೂ 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದ ಸೂರ್ಯಗೆ 6ನೇ ಸ್ಲಾಟ್​​ನಲ್ಲಿ ಪ್ರಯೋಗಕ್ಕಿಳಿಸುತ್ತಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ. ಈ ಸ್ಟ್ರಾಟರ್ಜಿ ಉದ್ದೇಶ ಮಿಡಲ್ ಆರ್ಡರ್​ನಲ್ಲಿ ಫ್ಲಾಫ್ ಆಗಿರುವ ಸೂರ್ಯ, ಹೊಡಿಬಡಿ ಆಟಕ್ಕೆ ಎತ್ತಿದ ಕೈ. ಹೀಗಾಗಿ ಕೊನೆ 10ರಿಂದ 15 ಓವರ್​ನಲ್ಲಿ ಸೂರ್ಯನ ಸ್ಪೋಟಕ ಆಟ ಬಳಸಿಕೊಳ್ಳಲು ಗೇಮ್​ಪ್ಲಾನ್ ರೂಪಿಸಲಾಗಿದೆ.

ಸೂರ್ಯಗೆ ರೋಹಿತ್​-ದ್ರಾವಿಡ್ ಕ್ಲಿಯರ್ ಕಟ್ ಮೆಸೇಜ್!

ಸೂರ್ಯಗೆ ಹೊಸ ಟಾಸ್ಕ್ ನೀಡಿರುವ ಕೋಚ್ ದ್ರಾವಿಡ್ & ರೋಹಿತ್ ಶರ್ಮಾ. ಈಗಾಗಲೇ ಸೂರ್ಯಕುಮಾರ್​ ಯಾದವ್​​ರ ಜವಾಬ್ದಾರಿ ಬಗ್ಗೆ ಕ್ಲಿಯರ್​ ಕಟ್ ಮೆಸೇಜ್ ನೀಡಿದ್ದಾರೆ. ಈ ಬಗ್ಗೆ ಸ್ವತಃ  ಸೂರ್ಯಕುಮಾರ್ ಯಾದವ್​ ಅವ್ರೇ ಸ್ಪಷ್ಟಪಡಿಸಿದ್ದಾರೆ.

ನನ್ನ ಏಕದಿನ ಮಾದರಿಯ ದಾಖಲೆ ಕಳಪೆಯಾಗಿದೆ. ಇದನ್ನ ಒಪ್ಪಿಕೊಳ್ಳಲು ನನಗೆ ಮುಜುಗರವಿಲ್ಲ. ಎಲ್ಲರಿಗೂ ಇದು ತಿಳಿದಿದೆ. ನಿಮ್ಮ ಪ್ರದರ್ಶನದ ಬಗ್ಗೆ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಇಲ್ಲಿ ಬಹಳ ಪ್ರಮುಖವಾಗುವುದೇನೆಂದರೆ ನೀವು ಹೇಗೆ ಬೆಳವಣಿಗೆ ಸಾಧಿಸುತ್ತೀರಿ ಎಂಬುದು. ರೋಹಿತ್ ಮತ್ತು ರಾಹುಲ್ ಸರ್ ಹೇಳಿರುವುದೇನೆಂದರೆ ಈ ಮಾದರಿಯಲ್ಲಿ ನೀನು ಹೆಚ್ಚಾಗಿ ಆಡಿಲ್ಲ. ಇಲ್ಲಿ ಹೆಚ್ಚು ಆಟವನ್ನಾಡುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ. ಕೊನೆಯ 10-15 ಓವರ್‌ಗಳನ್ನು ಆಡಿದರೆ ತಂಡಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು ಎಂಬುದನ್ನು ಆಲೋಚಿಸು. ನಾವೆಲ್ಲಾ ನಿನ್ನಿಂದ ಬಯಸುತ್ತಿರುವುದು ನಿನಗೆ ದೊರೆಯುವ 15-18 ಓವರ್‌ಗಳಲ್ಲಿ ನೀನು ಎದುರಿಸುವ  40-45 ಎಸೆತಗಳಲ್ಲಿ ನಿನ್ನ ಆಟ ನೀನು ಆಡಬೇಕೆಂದು ಹೇಳಿದ್ದಾರೆ. ಇದು ಟೀಮ್ ಮ್ಯಾನೇಜ್​ಮೆಂಟ್ ನೀಡಿರುವ ಅಸೈನ್​ಮೆಂಟ್​.

ಸೂರ್ಯಕುಮಾರ್ ಯಾದವ್

ಏಕದಿನ ಫಾರ್ಮೆಟ್​ನಲ್ಲಿ ಸತತ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್​​ಗೆ, ಇದು ನಿಜಕ್ಕೂ ಬಿಗ್ ಚಾಲೆಂಜ್​.! ಈ ಹಿಂದಿನ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗಿದ್ದ ಸೂರ್ಯ, ಇತ್ತಿಚೆಗೆ ಮುಕ್ತಾಯಗೊಂಡ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ನೀಡಿದ್ದು ಫ್ಲಾಫ್ ಶೋ.

ಕ್ಯಾಪ್ಟನ್ ರೋಹಿತ್​ ಶರ್ಮಾ- ​ಕೋಚ್​ ರಾಹುಲ್​ ದ್ರಾವಿಡ್​

ಟಿ20 ಮಾದರಿಯ ಅಪ್ರೋಚ್​ಗೂ ಏಕದಿನ ಶೈಲಿಯ ಬ್ಯಾಟಿಂಗ್ ಅಪ್ರೋಚ್​ಗೂ ವ್ಯತ್ಯಾಸವಿದೆ. ಇದಕ್ಕೆಲ್ಲಾ ಮಿಗಿಲಾಗಿ ಬ್ಯಾಟಿಂಗ್ ಕ್ರಮಾಂಕವೂ ಕಂಪ್ಲೀಟ್ ಬದಲಾಗಿದೆ. ಏಕದಿನ ವಿಶ್ವಕಪ್​​ಗೂ ಮುನ್ನ  ಸೂರ್ಯಕುಮಾರ್​ಗೆ ಸಿಗೋದು ಕೇವಲ ಎಳೆಂಟು ಪಂದ್ಯಗಳು ಮಾತ್ರ. ಈ ಕಡಿಮೆ ಅವಧಿಯಲ್ಲಿ ದೊಡ್ಡ ಜವಾಬ್ದಾರಿಯನ್ನ ಹೇಗೆ ಹ್ಯಾಂಡಲ್ ಮಾಡ್ತಾರೆ ಅನ್ನೋದು ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂರ್ಯನ ಮುಂದಿದೆ ಬಿಗ್​ ಚಾಲೆಂಜ್​.. ಕ್ಯಾಪ್ಟನ್ ಮತ್ತು ಕೋಚ್​ ಕಡೆಯಿಂದ ಬಂತು ಖಡಕ್​ ​​​​ಮೆಸೇಜ್ 

https://newsfirstlive.com/wp-content/uploads/2023/08/Surya-Kumar-Yadav.jpg

Load More