ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತೀರಿ ಎಂಬ ಅಪವಾದ ಬರಲಿದೆ
ಸರ್ಕಾರಿ ಉದ್ಯೋಗದಲ್ಲಿ ಲಾಭ, ಹೊಸ ವಸ್ತು ಖರೀದಿ
ನಿಮ್ಮ ಕೆಲಸದಲ್ಲಿ, ವೃತ್ತಿಯಲ್ಲಿ ಹಲವರಿಂದ ಸಹಾಯ ಸಿಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ ರಾಶಿ
- ಕಾನೂನು ವಿಷಯದಲ್ಲಿ ಜಗಳವಾಗಬಹುದು
- ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ
- ನಿಮ್ಮನ್ನು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ
- ಯಾರಿಗೆ ಬುದ್ಧಿವಂತಿಕೆ ಕೆಲಸ ಮಾಡುತ್ತದೆಯೋ ಅವರಿಗೆ ಶುಭ ಲಾಭ
- ರಾಜಕೀಯ ವಿಚಾರದಲ್ಲಿ ಆಸಕ್ತಿ ಇರುವವರಿಗೆ ಸಂತೋಷದ ಸುದ್ದಿ
- ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆ ಆಗಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ನಿಮ್ಮ ಕೆಲಸದಲ್ಲಿ, ವೃತ್ತಿಯಲ್ಲಿ ಹಲವರಿಂದ ಸಹಾಯ ಸಿಗಬಹುದು
- ಹಣದ ಲಾಭ ಗೌರವ ತರುತ್ತದೆ
- ಭಾವನಾತ್ಮಕವಾಗಿ ಬಲಶಾಲಿಗಳು, ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ
- ಸ್ನೇಹಿತರು ಬಂಧುಗಳು ನಿಮ್ಮನ್ನು ಅಭಿನಂದಿಸುವ ದಿನ
- ಆಲಸ್ಯ ಬೇಡ ಹಿನ್ನಡೆಯಾಗಬಹುದು
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ಮಿಥುನ
- ಧಾರ್ಮಿಕ ಕಾರ್ಯಾಚರಣೆಗೆ ಮನಸ್ಸು ಮಾಡುತ್ತೀರಿ
- ಹಲವು ಹಿಂದಿನ ವಿವಾದ ಎಂದು ಇತ್ಯರ್ಥವಾಗಬಹುದು
- ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
- ಸ್ವಾಭಾವಿಕವಾಗಿರಿ ಶುಭವಿದೆ
- ಸಾಯಂಕಾಲ ಅಶುಭ ಸೂಚನೆ ಇದೆ ದೂರದ ಬಂಧುಗಳು ಕಿರಿಕಿರಿ ಮಾಡಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕಟಕ
- ಬಿಡುವಿಲ್ಲದ ಕೆಲಸದಲ್ಲಿ ವಿದ್ಯಾಭ್ಯಾಸದಲ್ಲಿ ಗುಣಮಟ್ಟ ತುಂಬಾ ಕಡಿಮೆಯಾಗಬಹುದು
- ಕಟ್ಟಡ ಸಾಮಾಗ್ರಿಗಳನ್ನ ಮಾರಾಟ ಮಾಡುವವರಿಗೆ ತೊಂದರೆ ಇದೆ, ಜಾಗೃತೆ ವಹಿಸಿ
- ವಾಹನ ಖರೀದಿಗೆ ದಿನ ಚೆನ್ನಾಗಿಲ್ಲ
- ನೀಲಿ ಬಣ್ಣದ ಬಟ್ಟೆಯನ್ನು ಧರಿಸಿದ್ರೆ ಒಳ್ಳೆಯದು
- ವೃದ್ಧರಿಗೆ, ಕಾಲು ಊನ ಇರುವವರಿಗೆ, ಕುಟುಂಬದವರಿಗೆ ಸಹಾಯ ಮಾಡಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಆತ್ಮವಿಶ್ವಾಸವೇ ನಿಮ್ಮ ಕೆಲಸ ಕಾರ್ಯಗಳ ಪ್ರಗತಿಗೆ ಸಹಾಯ
- ಅಧಿಕಾರಿ ವರ್ಗದವರಿಗೆ ಸಹಕಾರ ದೊರೆಯದೆ ತೊಂದರೆ
- ಸಮೂಹದೊಂದಿಗೆ ಕೆಲಸ ಮಾಡಿ ಅನುಕೂಲವಿದೆ
- ಕುಟುಂಬದಲ್ಲಿ ನಿತ್ಯದ ಕೆಲಸಗಳಿಂದ ಬೇಸರ
- ಹೊಸ ವ್ಯವಹಾರಕ್ಕೆ ಶುಭವಾಗಿರುವುದಿಲ್ಲ
- ಕಬ್ಬಿನ ವ್ಯಾಪಾರಿಗಳಿಗೆ ಲಾಭವಿದೆ
- ಶನೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆ
- ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತೀರಿ ಎಂಬ ಅಪವಾದ ಬರಲಿದೆ
- ನಿಮಗಿದು ಹೊಸದೇನಲ್ಲ ಆದರೂ ಸಮಾಜ ಆಗಾಗ ಎಚ್ಚರಿಸುತ್ತಿರುತ್ತದೆ
- ಯಾರಿಗೂ ಆಶ್ವಾಸನೆ ಭರವಸೆ ಕೊಡಬೇಡಿ
- ಶ್ವಾಸಕೋಶದ ಸಮಸ್ಯೆ ಇರುವವರು ಜಾಗೃತರಾಗಿರಬೇಕು
- ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಬೇಸರವಾಗಬಹುದು
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ತುಲಾ
- ಇಂದು ತುಂಬಾ ಮಂಗಳಕರವಾದ ದಿನ
- ಸ್ವಾತಿ ನಕ್ಷತ್ರ ಶನಿವಾರ ಹುಟ್ಟಿದವರಿಗೆ ತೊಂದರೆ ಇದೆ
- ಸರ್ಕಾರಿ ಉದ್ಯೋಗದಲ್ಲಿ ಲಾಭ, ಹೊಸ ವಸ್ತು ಖರೀದಿ
- ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಕೊಳ್ಳದಿರಿ
- ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
- ಸಂತಾನ ಅಪೇಕ್ಷಿಗಳಿಗೆ ಅಶುಭ ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ
- ಸಂಘ ಸಂಸ್ಥೆಗಳ ವಿಚಾರವಾಗಿ ಏನು ಹೇಳಿಕೆ ನೀಡಬಾರದು
- ನಿಮಗೆ ಸಂಬಂಧಪಟ್ಟ ಕೆಲಸಗಳಲ್ಲಿ ಭಾಗಿಗಳಾಗಿ, ಅವಮಾನವಾಗಬಹುದು
- ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ, ಆದರೆ ನೀವು ಸ್ವೀಕರಿಸುವುದಿಲ್ಲ
- ತುಂಬಾ ಶ್ರಮದಾಯಕವಾದ ದಿನ
- ಆಹಾರ ಮಿತವಾಗಿರಲಿ ಸ್ವಲ್ಪ ಕಷ್ಟ ಇದೆ
- ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ನಷ್ಟವಾಗಬಹುದು
- ಐಶ್ವರ್ಯಾ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಉದ್ಯೋಗ ಬದಲಾವಣೆಗೆ ಅವಕಾಶವಿದೆ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆ ಆಗಬಹುದು, ಅನುಕೂಲವಿಲ್ಲ
- ಮನಸ್ಸಿನಲ್ಲಿ ಅತೃಪ್ತಿ ಭಾವನೆ ಕಾಣಬಹುದು
- ಎಲ್ಲಾ ಇದ್ದರೂ ನಿಮ್ಮ ಆಲೋಚನೆ ಬೇರೆ ಬೇರೆ ಇರಬಹುದು
- ನಿಮಗೆ ತೊಂದರೆ ಮಾಡುವವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
- ಯಾವುದನ್ನೂ ಧೈರ್ಯವಾಗಿ ಎದುರಿಸುವುದಿಲ್ಲ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಕರ
- ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ಚಿಂತನೆ ನಡೆಯಬಹುದು
- ರಾಜಕೀಯ ಒತ್ತಡ, ರಾಜಕಾರಣಿಗಳ ಭಯ ಕಾಡಬಹುದು
- ಹಣ ಮುಖ್ಯ ಎಂಬ ತೀರ್ಮಾನಕ್ಕೆ ಬಂದು ಬೇರೆಲ್ಲವನ್ನ ಗಮನಿಸುವುದಿಲ್ಲ
- ನೀವು ಗೌರವವಾಗಿ ಕೊಟ್ಟಿದ್ದ ಹಣವನ್ನು ನಿಮಗೆ ಹಿಂದಿರುಗಿಸುತ್ತಾರೆ, ಅವಮಾನವಾಗಬಹುದು
- ವಿಚಾರಗಳನ್ನು ಆಳವಾಗಿ ತಿಳಿದುಕೊಳ್ಳಬಹುದು, ಸ್ವಂತಿಕೆ ಇರಬೇಕು
- ಬೇರೆಯವರನ್ನು ಅವಲಂಭಿಸಬಾರದು
- ಶಕ್ತಿ ದೇವತೆಯನ್ನು ಪ್ರಾರ್ಥನೆ ಮಾಡಿ
ಕುಂಭ
- ಹಳೆಯ ದುಡ್ಡು ಆಸ್ತಿ ಎಲ್ಲವೂ ನಿಮ್ಮ ಮುಂದೆ ಬರಬಹುದು
- ಅನುಭವಿಸುವ ಯೋಗವಿಲ್ಲ
- ಮನಸ್ಸಿನಲ್ಲಿ ಭಯ ಕಾಡುತ್ತದೆ
- ನೀವು ಯಾವ ತಪ್ಪು ಮಾಡಿಲ್ಲದಿದ್ದರೂ ಒಂಟಿತನ
- ಭವಿಷ್ಯದ ಭಯ ನಿಮ್ಮನ್ನು ಬಿಡುವುದಿಲ್ಲ
- ನಿಮ್ಮ ಕೆಲವು ನಿರ್ಧಾರಗಳು ರಾಜಕೀಯ ಹೇಳಿಕೆಗಳಿಂದ ನಿಮಗೆ ಹಿನ್ನಡೆ
- ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
- ತುಂಬಾ ದಿನಗಳಿಂದ ಅನಾರೋಗ್ಯದಿಂದ ನೆರಳುತ್ತಿದ್ದರೆ ಸ್ವಲ್ಪ ಎಚ್ಚರಿಕೆ ವಹಿಸಿ
- ಶಿವನ ಆರಾಧನೆ ಮಾಡಿ
ಮೀನ
- ನಿಮ್ಮ ಬುದ್ಧಿವಂತಿಕೆಯಿಂದಾನೇ ಹಿನ್ನಡೆಯಾಗುವ ದಿನ
- ವಿಷಯ ಅರ್ಥವಾಗದಿದ್ದರೂ ಮುಂದೆ ತತ್ವ ಬೋಧನೆ ಅವಶ್ಯಕತೆ ಇರುವುದಿಲ್ಲ
- ಬೇರೆಯವರ, ಸಮಾಜದ ಹಿತಕ್ಕೆ ಅನುಗುಣವಾಗಿ ನಡೆಯಬೇಕು
- ಸಂಬಂಧಪಟ್ಟವರ ಸಂಬಂಧಪಟ್ಟ ವಿಷಯಕ್ಕೆ ಜಗಳ ಮಾಡಬಹುದು
- ಸರ್ಕಾರದ ಹಣ ನಿಮಗೆ ಸಹಾಯವಾಗುತ್ತದೆ
- ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ
- ಒಂಟಿಯಾಗಿ ಎದುರಿಸಬೇಕಾಗುತ್ತದೆ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ