ಆಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ ಕೈ ಕೊಟ್ಟ ಮುಂಗಾರು ಮಳೆ
ಮುಂಗಾರು ಇಲ್ಲದೆ ರಾಜ್ಯದಲ್ಲಿ ನಾನಾ ಅವಾಂತರ ಸೃಷ್ಟಿ
ಹವಾಮಾನ ವೈಪರಿತ್ಯದಿಂದ ವಕ್ಕರಿಸಿದ ಹೊಸ ರೋಗ!
ಬೆಂಗಳೂರು: ರಾಜ್ಯದಲ್ಲಿ ಕೈಕೊಟ್ಟ ಮುಂಗಾರು ನಾನಾ ಅವಾಂತರ ಸೃಷ್ಟಿ ಮಾಡಿದೆ. ಮಳೆಯಿಲ್ಲದೇ ಅನ್ನದಾತರು ಕಂಗಾಲಾಗಿದ್ದಾರೆ. ರಾಜ್ಯದ ಡ್ಯಾಂನ ನೀರು ಖಾಲಿಯಾಗ್ತಿದ್ದು, ನೀರಿಗಾಗಿ ಪರದಾಟ ಶುರುವಾಗಿದೆ. ಇದೆಲ್ಲಾ ಒಂದು ಕಡೆಯಾದ್ರೆ, ಮಳೆಯಾಗಬೇಕಿದ್ದ ಆಗಸ್ಟ್ ತಿಂಗಳಿನಲ್ಲಿ ಬಿರು ಬಿಸಿಲು ಆವರಿಸಿದ್ದು, ಆರೋಗ್ಯ ಕೈಕೊಟ್ಟು ಆಸ್ಪತ್ರೆ ಹೋಗುವವರ ಸಂಖ್ಯೆ 20 ಪರ್ಸೆಂಟ್ ಹೆಚ್ಚಳವಾಗಿದೆ.
ಹೌದು, ಸಿಲಿಕಾನ್ ಸಿಟಿಯಲ್ಲಿ ಕಳೆದ 15 ದಿನಗಳಿಂದ ಆಸ್ಪತ್ರೆಗಳ ಓಪಿಡಿಗಳ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹವಾಮಾನ ವೈಪರೀತ್ಯ ಜನರನ್ನ ಹೈರಾಣಗಿಸಿದ್ದು, ಕೆಮ್ಮು, ನೆಗಡಿ, ಅಲರ್ಜಿ, ಅಸ್ತಮ ಹಾಗೂ ಚರ್ಮದ ಸಮಸ್ಯೆಗಳು ಕಾಡ್ತಿವೆ. ಇನ್ನೂ ಕಾಯಿಲೆಗೆ ತುತ್ತಾಗಿರುವವರ ಪೈಕಿ ಹೆಚ್ಚು ಮಕ್ಕಳು ಅನ್ನೋದು ಮತ್ತಷ್ಟು ಆತಂಕಕ್ಕೆ ಕಾರಣವಾಗ್ತಿದೆ.
ಅನಾರೋಗ್ಯದಿಂದ ಬಚಾವ್ ಆಗಲು ವೈದ್ಯರು ನೀಡ್ತಿರುವ ಸಲಹೆಗಳೇನು?
ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಜೊತೆಗೆ ಆರೋಗ್ಯ ಕೊಂಚ ಏರುಪೇರಾದಗಲೇ ವೈದ್ಯರನ್ನ ಸಂಪರ್ಕಿಸಿ. ಜೊತೆಗೆ ಬಿಸಿ ಆಹಾರಗಳನ್ನ ಸೇವಿಸಿ, ಸ್ವಚ್ಚತೆ ಕಾಪಾಡಿಕೊಳ್ಳಿ. ಹೊರಗಿನ ಆಹಾರ, ಅಥವಾ ಜಂಕ್ ಫುಡ್ಗಳಿಂದ ದೂರವಿರಿ. ಹಾಗೆಯೇ ಸಾಧ್ಯವಾದಷ್ಟು ಬಿಸಿಲಿಗೆ ಹೋಗುವುದನ್ನ ಕಂಟ್ರೋಲ್ ಮಾಡಿ ಅಂತಾ ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ