newsfirstkannada.com

ಇನ್ನೂ ನಿಲ್ಲದ ಮಣಿಪುರ ಹಿಂಸಾಚಾರ; ರಾಜೀನಾಮೆ ಘೋಷಿಸಿದ್ದ ಸಿಎಂ ಬಿರೇನ್​ ಸಿಂಗ್​ ಯೂಟರ್ನ್​​!

Share :

30-06-2023

  ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ

  ಹಿಂಸಾಚಾರ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ರಾಜೀನಾಮೆ ಘೋಷಣೆ

  ರಾಜೀನಾಮೆ ನಿರ್ಧಾರದಿಂದ ದಿಢೀರ್​​ ಹಿಂದೆ ಸರಿದ ಮುಖ್ಯಂತ್ರಿ ಬಿರೇನ್​ ಸಿಂಗ್​​

ಇಂಫಾಲ್​​: ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿಂಸಾಚಾರಕ್ಕೆ ಇದುವರೆಗೂ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಇದರ ನೈತಿಕ ಹೊಣೆ ಹೊತ್ತ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಹೀಗೆ ವರದಿಯಾದ ಬೆನ್ನಲ್ಲೇ ಎಚ್ಚೆತ್ತಿ ಸಿಎಂ ಬಿರೇನ್​ ಸಿಂಗ್​​ ಯೂಟರ್ನ್​​ ಹೊಡೆದಿದ್ದಾರೆ.

ಇಂದು ಮಣಿಪುರ ಸಿಎಂ ಗೃಹ ಕಚೇರಿ ಮುಂಭಾಗ ನೂರಾರು ಮಹಿಳೆಯರು ಸೇರಿದ್ದರು. ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದರು. ಸಿಎಂ ಕಚೇರಿ ಮುಂಭಾಗ ಕೆಲ ಹೊತ್ತು ದೊಡ್ಡ ಹೈಡ್ರಾಮವೇ ನಡೆದು ಹೋಯ್ತು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಸಿಎಂ ಕಚೇರಿ ಮುಂದೆ ಸೇರಿದ್ದ ಮಹಿಳೆಯರು ಒತ್ತಾಯಿಸಿದರು.

ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಸಿಎಂ ಬಿರೇನ್​ ಸಿಂಗ್​​ ರಾಜೀನಾಮೆ ನೀಡಬೇಕಿತ್ತು. ಇನ್ನೇನು ಹೋಗಬೇಕು ಎಂದು ಮನೆಯಿಂದ ಹೊರ ಬಂದಾಗ ನೂರಾರು ಮಹಿಳೆಯರು ಸಿಎಂ ಕಾರಿಗೆ ಅಡ್ಡಗಟ್ಟಿದರು. ರಾಜೀನಾಮೆ ನೀಡದಂತೆ ಒತ್ತಾಯಿಸಿ ಸಿಂಗ್​ ಪರ ಘೋಷಣೆ ಕೂಗಿದರು.

ಸದ್ಯ ಈ ಬಗ್ಗೆ ಟ್ವೀಟ್​ ಮಾಡಿರುವ ಸಿಎಂ ಬಿರೇನ್​ ಸಿಂಗ್​​, ನಾನು ರಾಜೀನಾಮೆ ನೀಡದೇ ಇರಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದಾರೆ. ಬಿರೇನ್ ಸಿಂಗ್ ತಮ್ಮ ಸೀಟು ಉಳಿಸಿಕೊಳ್ಳಲು ಈ ಹೈಡ್ರಾಮಾ ನಡೆಸಿದ್ದಾಗಿ ಟೀಕೆಗಳು ವ್ಯಕ್ತವಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ನಿಲ್ಲದ ಮಣಿಪುರ ಹಿಂಸಾಚಾರ; ರಾಜೀನಾಮೆ ಘೋಷಿಸಿದ್ದ ಸಿಎಂ ಬಿರೇನ್​ ಸಿಂಗ್​ ಯೂಟರ್ನ್​​!

https://newsfirstlive.com/wp-content/uploads/2023/06/Biren-Singh.jpg

Load More