17 ಲಕ್ಷಕ್ಕೂ ಅಧಿಕ ಮಕ್ಕಳು ಬೆಳಗಿನ ಉಪಹಾರ ಸೇವಿಸಲಿದ್ದಾರೆ
ಉಪಹಾರ ಸ್ಕೀಂನಿಂದ 99.9 ಪರ್ಸೆಂಟ್ ಮಕ್ಕಳು ಶಾಲೆಗೆ ಹಾಜರು
ಎಷ್ಟೋ ಮಕ್ಕಳು ಬೆಳಗ್ಗಿನ ಉಪಹಾರ ವಂಚಿತರಾಗುತ್ತಿದ್ದಾರೆ; ಸಿಎಂ ಸ್ಟಾಲಿನ್
ತಮಿಳುನಾಡು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಬ್ರೇಕ್ ಫಾಸ್ಟ್ ಸ್ಕೀಂ ಜಾರಿಗೆ ತಂದಿದೆ. ಇನ್ಮೇಲೆ ಪ್ರತಿದಿನ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗ್ಗಿನ ಉಪಹಾರವು ಮಕ್ಕಳಿಗೆ ಸಿಗಲಿದೆ.
ತಮಿಳುನಾಡಿನಲ್ಲಿ 1920ರಲ್ಲೇ ಮಧ್ಯಾಹ್ನದ ಬಿಸಿಯೂಟ ಜಾರಿಗೆ ಬಂದಿತ್ತು. ಆ ಬಳಿಕ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಮಕ್ಕಳನ್ನ ಶಾಲೆಗೆ ಆಕರ್ಷಿಸಲಾಯಿತು. ಬಳಿಕ 1996-2001ರಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಜಾರಿ ಬಂತು. 2006ರಲ್ಲಿ ವಾರದ ಐದು ದಿನ ಮೊಟ್ಟೆ ನೀಡುವ ಯೋಜನೆ ಜಾರಿ ತರಲಾಯಿತು.
ಆರಂಭಿಕವಾಗಿ 2021ರಲ್ಲಿ ಕೆಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಬ್ರೇಕ್ ಫಾಸ್ಟ್ ಸ್ಕೀಂ ಜಾರಿ ತರಲಾಯಿತು. ಇದೀಗ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬೆಳಗಿನ ಉಪಹಾರ ಸ್ಕೀಂ ವಿಸ್ತರಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಬ್ರೇಕ್ ಫಾಸ್ಟ್ ಸ್ಕೀಂನಿಂದ 17 ಲಕ್ಷಕ್ಕೂ ಅಧಿಕ ಮಕ್ಕಳು ಬೆಳಗಿನ ಉಪಹಾರ ಸೇವಿಸಲಿದ್ದಾರೆ. ಮಾತ್ರವಲ್ಲದೆ, ಬೆಳಗ್ಗಿನ ಉಪಹಾರ ಸ್ಕೀಂನಿಂದ 99.9 ಪರ್ಸೆಂಟ್ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಸರ್ಕಾರಿ ಶಾಲಾ ಮಕ್ಕಳಿಗೆ ಜಾರಿಗೊಳಿಸಿದ ಉಪಹಾರ ಸ್ಕೀಂಗೆ ಅದ್ಧೂರಿ ಚಾಲನೆ ನೀಡಿ ಮಾತನಾಡಿದ್ದಾರೆ. ಮೂಳೆ ಸರಿಯಾಗಿ ಕೆಲಸ ಮಾಡಲು ಆಹಾರ ಸೇವನೆ ಮುಖ್ಯ. ಅದರಲ್ಲೂ ಮಕ್ಕಳು ಬೆಳಗ್ಗೆ ಆಹಾರ ಸೇವಿಸಲೇಬೇಕು. ಎಷ್ಟೋ ಮಕ್ಕಳು ಬೆಳಗ್ಗಿನ ಉಪಹಾರ ವಂಚಿತರಾಗುತ್ತಿದ್ದಾರೆ. ಬೆಳಗಿನ ಉಪಹಾರದಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಬಾರದು. ಹೀಗಾಗಿ ಬೆಳಗಿನ ಉಪಹಾರ ಸ್ಕೀಂ ಜಾರಿ ಮಾಡುತ್ತಿದ್ದೇವೆ. ಇದರ ಜತೆಗೆ ಮಧ್ಯಾಹ್ನದ ಬಿಸಿಯೂಟವು ಇರಲಿದೆ ಎಂದು ಹೇಳಿದ್ದಾರೆ. ಬಳಿಕ ಮಕ್ಕಳಿಗೆ ಬೆಳಗ್ಗಿನ ಉಪಹಾರ ಬಡಿಸಿ, ಮಕ್ಕಳ ಜತೆ ಉಪಹಾರ ಸೇವಿಸಿದ್ದಾರೆ.
ವಿದ್ಯಾರ್ಥಿನಿಯೊಬ್ಬಳು ಬ್ರೇಕ್ಫಾಸ್ಟ್ ಸ್ಕೀಂ ಬಗ್ಗೆ ಮಾತನಾಡಿದ್ದು, ಬ್ರೇಕ್ಫಾಸ್ಟ್ ಸ್ಕೀಂನಿಂದ ಶಾಲೆ ಮಕ್ಕಳು ಫುಲ್ ಖುಷ್ ಆಗಿದ್ದಾರೆ. ನಾನು ಇನ್ಮೇಲೆ ಶಾಲೆಯಲ್ಲೇ ಬೆಳಗ್ಗಿನ ಉಪಾಹಾರ ಸೇವಿಸುತ್ತೇನೆ. ಇಷ್ಟು ದಿನ ನಾನು ಹಸಿವಿನಿಂದಲೇ ಶಾಲೆಗೆ ಹಾಜರಾಗುತ್ತಿದ್ದೆ. ಮಧ್ಯಾಹ್ನದ ಬಿಸಿಯೂಟದವರೆಗೂ ನನಗೆ ತಲೆ ಸುತ್ತುವಂತೆ ಆಗುತ್ತಿತ್ತು. ನನ್ನ ಅಮ್ಮ ಮನೆಯಲ್ಲಿ ಬೆಳಗ್ಗಿನ ಉಪಹಾರ ಮಾಡಲಾಗದೆ ಕೆಲಸಕ್ಕೆ ಹೋಗುತ್ತಾರೆ. ಒಟ್ಟಿಗೆ ಮಧ್ಯಾಹ್ನ ಶಾಲೆಯಲ್ಲೇ ಊಟ ಮಾಡು ಎಂದು ಹೇಳುತ್ತಾರೆ. ಹೀಗಾಗಿ ಇನ್ಮೇಲೆ ಶಾಲೆಯಲ್ಲೇ ಬೆಳಗ್ಗೆ ಮತ್ತು ಮಧ್ಯಾಹ್ನ ಆಹಾರ ಸೇವಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ