newsfirstkannada.com

ಸಿಎಂ ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಸಚಿವ ಕೆ.ಎನ್ ರಾಜಣ್ಣ; ಡಿ.ಕೆ ಶಿವಕುಮಾರ್ ಬಣಕ್ಕೆ ಟಾಂಗ್‌?

Share :

03-11-2023

  ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಹೆದರೋದಿಲ್ಲ

  ನಮಗೆ ಏನು ಮಾತನಾಡಬಾರದು ಅಂತ ಎಐಸಿಸಿ ಹೇಳಿದೆ

  ಸಿಎಂ ಸಿದ್ದು ಇರೋವರೆಗೆ ನಾವೆಲ್ಲಾ ಸಿದ್ದರಾಮಯ್ಯ ಪರ

ತುಮಕೂರು: ನಾನೇ ಸಿಎಂ.. 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ ಈ ಖಡಕ್‌ ಮಾತಿನ ಬಳಿಕವೂ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಯ ಕಾಳಗ ನಿಂತಿಲ್ಲ. ಹೈಕಮಾಂಡ್ ಮಾತನಾಡಬೇಡಿ ಅಂತಾ ಸೂಚನೆ ನೀಡಿದ್ರೂ ಸಚಿವರು ಬಹಿರಂಗವಾಗೇ ತಮ್ಮ ಡಿಮ್ಯಾಂಡ್‌ ಏನು ಅನ್ನೋದನ್ನ ಹೇಳಿದ್ದಾರೆ.

ಕಾಂಗ್ರೆಸ್​ ಸರ್ಕಾರದಲ್ಲಿ ಸಿಎಂ ಕುರ್ಚಿ ಕಾಳಗ ನಡೆಯುತ್ತಿರುವಾಗಲೇ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹೊರತು ಪಡಿಸಿದ್ರೆ, ಗೃಹ ಸಚಿವ ಪರಮೇಶ್ವರ್ ಅವರೇ​ ಸಿಎಂ ಆಗಬೇಕು. ಪರಮೇಶ್ವರ್​ ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ನಮಗೆ ಸಂತೋಷ. ನಮ್ಮ ಜಿಲ್ಲೆಯವರು ಮುಖ್ಯಮಂತ್ರಿ ಆದರೆ ನಾವೆಲ್ಲಾ ಮುಖ್ಯಮಂತ್ರಿ ಆದಂತೆ ಅಂತ ಭಾವಿಸುತ್ತೇವೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎನ್ ರಾಜಣ್ಣ ಅವರು, ಡಾ.ಜಿ ಪರಮೇಶ್ವರ್ ಅವರು ಈಗ ಹೋಮ್ ಮಿನಿಸ್ಟರ್ ಇದ್ದಾರೆ. ಸಿಎಂ ಆಗುವ ಅವಕಾಶವಿದೆ. ಮುಂದೆ ಏನು ಬೇಕಾದ್ರೂ ಆಗಬಹುದು. ಡಾಕ್ಟರೆ ನಿಮಗೆ ಅದೃಷ್ಟವಿದೆ ನಡೆಸುತ್ತೀರಿ ಅಂತ ಹಿಂದೊಮ್ಮೆ ಹೇಳಿದ್ದೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ನಾವೆಲ್ಲಾ ಸಂತೋಷ ಪಡುತ್ತೇವೆ ಎಂದು ಹೇಳಿದರು.

ನಾನು ಯಾರಿಗೂ ಹೆದರಲ್ಲ!

ಸಿಎಂ ಸಿದ್ದರಾಮಯ್ಯ ಇರೋವರೆಗೆ ನಾವೆಲ್ಲಾ ಸಿದ್ದರಾಮಯ್ಯ ಪರ. ನಾವು, ಪರಮೇಶ್ವರ್ ಇಬ್ಬರು ಅವರ ಪರವಿರುತ್ತೇವೆ. ಎಐಸಿಸಿಯವರು ನಮಗೆ ಹೇಳಿದ್ದಾರೆ ಏನು ಮಾತನಾಡಬಾರದು ಅಂತ ಆದ್ರೆ ನಾನು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು. ಹಾಗಾಗಿ ನನ್ನ ಮನಸಿನ ಭಾವನೆ ಹೇಳಿದ್ದೇನೆ ಎಂದು ಕೆ.ಎನ್‌ ರಾಜಣ್ಣ ಹೇಳಿದರು. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಹೆದರೋದಿಲ್ಲ ಎಂದು ಕೆ.ಎನ್‌ ರಾಜಣ್ಣ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎನ್ನುತ್ತಿರುವ ಶಾಸಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ದೆಹಲಿಯಲ್ಲಿ ಸಿಎಂ ಸ್ಥಾನ ಬಗ್ಗೆ ಆದ ಚರ್ಚೆ ಗೊತ್ತಿಲ್ಲ. ಅದು ಸಿಎಂ ಹಾಗೂ ಅಧ್ಯಕ್ಷರಿಗೆ ಮಾತ್ರ ಗೊತ್ತು. ಸತ್ಯ, ಅಸತ್ಯದ ಬಗ್ಗೆ ನಾನು ಜಡ್ಜ್​ ಮಾಡಲ್ಲ ಎಂದು ಡಾ. ಜಿ ಪರಮೇಶ್ವರ್​ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಸಚಿವ ಕೆ.ಎನ್ ರಾಜಣ್ಣ; ಡಿ.ಕೆ ಶಿವಕುಮಾರ್ ಬಣಕ್ಕೆ ಟಾಂಗ್‌?

https://newsfirstlive.com/wp-content/uploads/2023/11/KN-Rajanna-On-Parameshwar.jpg

Load More