newsfirstkannada.com

‘ಫ್ರೀ’ ಶಕ್ತಿ ಯೋಜನೆಗೆ ಅದ್ಧೂರಿ ಚಾಲನೆ; ಸಿಎಂ, ಡಿಸಿಎಂರಿಂದ ಲಾಂಛನ, ಸ್ಮಾರ್ಟ್ ಕಾರ್ಡ್ ಬಿಡುಗಡೆ

Share :

11-06-2023

    ಉಚಿತವಾಗಿ ಪ್ರಯಾಣಿಸೋ ಶಕ್ತಿ ಯೋಜನೆಗೆ ಚಾಲನೆ

    ಮಹಿಳಾ ಸಬಲೀಕರಣದತ್ತ ಹೆಜ್ಜೆ ಎಂಬ ಟ್ಯಾಗ್ ಲೈನ್

    ಸ್ಮಾರ್ಟ್ ಕಾರ್ಡ್‌ ಮಾದರಿ ರಿಲೀಸ್ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಸಚಿವರು, ಅಧಿಕಾರಿಗಳು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಶಕ್ತಿ ಯೋಜನೆ ಚಾಲನೆಗೆ ನೀಡಿದ ಸರ್ಕಾರ ಶಕ್ತಿ ಯೋಜನೆಯ ಲಾಂಛನವನ್ನು ಬಿಡುಗಡೆ ಮಾಡಿದೆ. ಶಕ್ತಿ ಯೋಜನೆಯ ಲೋಗೋ ನೇರಳೆ, ಬಿಳಿ ಹಾಗೂ ಹಸಿರು ಬಣ್ಣದಲ್ಲಿದೆ. ಮಹಿಳಾ ಸಬಲೀಕರಣದತ್ತ ಹೆಜ್ಜೆ ಎಂಬ ಟ್ಯಾಗ್ ಲೈನ್ ಇದರಲ್ಲಿದೆ. ಇದೇ ವೇಳೆ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್‌ನ ಮಾದರಿ ಬಿಡುಗಡೆ ಮಾಡಿದ ಸಿಎಂ, 5 ಮಂದಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ್ದಾರೆ.

ಇಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಮಹಿಳೆಯರಿಗೆ ಉಚಿತವಾಗಿ ಸಂಚಾರ ಮಾಡುವ ಬಸ್‌ಗಳ ಮೇಲೆ ಶಕ್ತಿ ಯೋಜನೆಯ ಸ್ಟಿಕರ್ ಅಂಟಿಸಲಾಗುತ್ತಿದೆ. ಸ್ಟಿಕರ್ ಅಂಟಿಸಿರುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನಡೆಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಫ್ರೀ’ ಶಕ್ತಿ ಯೋಜನೆಗೆ ಅದ್ಧೂರಿ ಚಾಲನೆ; ಸಿಎಂ, ಡಿಸಿಎಂರಿಂದ ಲಾಂಛನ, ಸ್ಮಾರ್ಟ್ ಕಾರ್ಡ್ ಬಿಡುಗಡೆ

https://newsfirstlive.com/wp-content/uploads/2023/06/Shakti.jpg

Load More