ಕನ್ನಡಿಗರಿಗೆ ಸಿಹಿ ಸುದ್ದಿ ನೀಡಲಿದ್ದಾರಾ ಸಿಎಂ ಸಿದ್ದು
ಗ್ಯಾರಂಟಿ ಜಾರಿಗೆ ತರುವ ಕುರಿತಾಗಿ ಚರ್ಚೆ
ಕರೆಂಟ್ ಬಿಲ್ ಕಟ್ಟಬೇಕಾಗಿಲ್ವಾ?
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದಿದೆ. ಪಂಚ ಭರವಸೆಗಳನ್ನ ನೀಡಿ 135 ಸೀಟ್ ಪಡೆದಿದೆ. ಇದೀಗ ಕಾಂಗ್ರೆಸ್ ಪಾಳಯವನ್ನ ಅಧಿಕಾರಕ್ಕೆ ತಂದಿರೋ ಮತದಾರರು ಗ್ಯಾರಂಟಿಗಾಗಿ ಪಟ್ಟು ಹಿಡಿದಿದ್ದಾರೆ. ವಿಪಕ್ಷಗಳು ಸಿದ್ದು ಸರ್ಕಾರಕ್ಕೆ ಗ್ಯಾರಂಟಿ ಜಾರಿ ಮಾಡುವಂತೆ ಮುಗಿಬಿದ್ದಿವೆ. ಇವತ್ತು ಗ್ಯಾರಂಟಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಸಚಿವರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಕಸರತ್ತು ನಡೆಸ್ತಿದೆ. ಪಂಚ ಗ್ಯಾರಂಟಿಗಳ ಜಾರಿಗೆ ವರ್ಕೌಟ್ ಮಾಡ್ತಿದೆ.. ಈಗಾಗಲೇ ಗ್ಯಾರಂಟಿಗಳಿಗಾಗಿ ಜನರು, ವಿಪಕ್ಷಗಳ ಒತ್ತಡವೂ ಹೆಚ್ಚಾಗಿದೆ. ಈಗಾಗಲೇ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಒಂದು ಸುತ್ತಿನ ಮೀಟಿಂಗ್‌ನೂ ನಡೆಸಿದ್ರು. ಜೊತೆಗೆ ಪಂಚ ಗ್ಯಾರಂಟಿಗಳಿಗೆ ಸಂಬಂಧಿಸಿದ ಸಚಿವರ ಆಯಾ ಇಲಾಖೆಗಳ ಜೊತೆ ನಿನ್ನೆ ಸಭೆಯನ್ನೂ ನಡೆಸಿದ್ರು. ಇದೀಗ ಸಚಿವರು ಕಲೆ ಹಾಕಿರೋ ಮಾಹಿತಿಗಳ ಬಗ್ಗೆ ಇವತ್ತು ಮಹತ್ವದ ಸಭೆ ನಡೆಯಲಿದೆ.
‘ಗ್ಯಾರಂಟಿ’ಗಳ ಅನುಷ್ಠಾನಕ್ಕಾಗಿ ಇವತ್ತು ಸಿಎಂ ಸಭೆ
ನಿನ್ನೆ ಇಂಧನ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಹಲವು ಸಚಿವರು ಗ್ಯಾರಂಟಿಗಳ ಜಾರಿಗೆ ಆಯಾ ಇಲಾಖೆಗಳ ಜೊತೆ ಸಭೆ ನಡೆಸಿದ್ರು. ಭರವಸೆಗಳ ಜಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನ ಪಡೆದುಕೊಂಡ್ರು. ಇದೀಗ ಅಧಿಕಾರಿಗಳಿಂದ ಪಡೆದಿರೋ ಎಲ್ಲಾ ಮಾಹಿತಿಯ ಬಗ್ಗೆ ಇವತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲಾ ಸಚಿವರ ಸಭೆ ನಡೆಯಲಿದೆ.. ವಿಧಾನಸೌಧದಲ್ಲಿ ನಡೆಯಲಿರೋ ಸಭೆಯಲ್ಲಿ ಪಂಚ ಗ್ಯಾರಂಟಿಗಳ ಬಗ್ಗೆ ಎಲ್ಲಾ ಸಚಿವರಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿಯನ್ನ ಪಡೆಯಲಿದ್ದಾರೆ.. ಅಲ್ಲದೇ ಗ್ಯಾರಂಟಿಗಳ ಅನುಷ್ಠಾನ ಕುರಿತು ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆಯೂ ನಡೆಯಲಿದೆ.
ಏನೆಲ್ಲಾ ಚರ್ಚೆ ಆಗಬಹುದು?
ಪಂಚ ಗ್ಯಾರಂಟಿಯಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಮನೆ ಯಜಮಾನಿ ಯಾರು? ಅತ್ತೆಯೋ? ಸೊಸೆಯೋ ಎಂಬ ಬಗ್ಗೆ ಇವತ್ತು ಸಭೆಯಲ್ಲಿ ಚರ್ಚೆ ನಡೆಯೋ ಸಾಧ್ಯತೆ ಇದೆ. ಅಲ್ಲದೇ ಸರ್ಕಾರಿ ನೌಕರಿಯಲ್ಲಿ ಇರುವವರಿಗೂ ಗೃಹಲಕ್ಷ್ಮೀ ಯೋಜನೆಯನ್ನ ನೀಡ್ಬೇಕಾ? ಅಲ್ಲೇದ ಸಂಧ್ಯಾ ಸುರಕ್ಷಾ, ವಿಧವಾ ವೇತನವನ್ನ ಪಡೀತಿರೋ ಫಲಾನುಭವಿಗಳನ್ನ ಇದರಲ್ಲಿ ವಿಲೀನಗೊಳಿಸ್ಬೇಕಾ? ಎಂಬ ಚರ್ಚೆಯೂ ಶುರುವಾಗಿದೆ. ಇನ್ನೂ ಗೃಹಜ್ಯೋತಿ ಯೋಜನೆಯಡಿ 200 ವ್ಯಾಟ್ ಉಚಿತ ನೀಡಲಿದ್ದು, 200ಕ್ಕಿಂತ ಹೆಚ್ಚು ಬಳಸಿದ್ರೆ ಹೇಗೆ? ಅವರು ಸಂಪೂರ್ಣ ವಿದ್ಯುತ್ ಬಿಲ್‌ನ ಕಟ್ಟಬೇಕಾ ಎಂಬ ಚರ್ಚೆಯೂ ಇವತ್ತಿನ ಸಭೆಯಲ್ಲಿ ನಡೆಯಲಿದೆ. ಇನ್ನೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಫ್ರೀ ಪಾಸ್ ನೀಡುವುದಾ? ತೆರಿಗೆ ಕಟ್ಟುವರಿಗೂ ಫ್ರೀ ಬಸ್ ಪಾಸ್‌ಗಳನ್ನ ಕೊಡಬೇಕಾಗುತ್ತಾ? ಎಂಬ ಬಗ್ಗೆ ಸಚಿವರಿಂದ ಸಿಎಂ ಮಾಹಿತಿ ಪಡೆಯಲಿದ್ದಾರೆ. ನಿರುದ್ಯೋಗ ಭತ್ಯೆಗೆ ಪದವೀಧರನ್ನು ಮಾತ್ರವೇ ಪರಿಗಣಿಸಬೇಕಾ? ಅಲ್ಲದೇ ಅನ್ನಭಾಗ್ಯ ಯೋಜನೆಯ 10 ಕೆ.ಜಿ. ಅಕ್ಕಿ ವಿತರಣೆ ಹೇಗೆ? ಹೀಗೆ ಹತ್ತು ಹಲವಾರು ಚರ್ಚೆಗಳು ಇವತ್ತಿನ ಸಚಿವರ ಸಭೆಯಲ್ಲಿ ನಡೆಯಲಿದೆ.
ನಾಳೆಯಿಂದಲೇ ಗ್ಯಾರಂಟಿ ಜಾರಿ
ಇನ್ನೂ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ವಾರ್ಷಿಕ 52 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚವಾಗಲಿದೆ ಅಂತಾ ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಹೀಗಾಗಿ ಸರ್ಕಾರಕ್ಕೆ ವಾರ್ಷಿಕ 52 ಸಾವಿರ ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ. ಇದನ್ನು ಸರಿದೂಗಿಸಲು ಸಂಪನ್ಮೂಲ ಕ್ರೋಢೀಕರಣವನ್ನು ಯಾವ ಬಗೆಯಲ್ಲಿ ಮಾಡಬಹುದು ಎಂಬ ಬಗ್ಗೆಯೂ ಸಚಿವರೊಂದಿಗೆ ಚರ್ಚೆ ನಡೆಯಲಿದೆ. ಅಂತಿಮವಾಗಿ ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಮಾರ್ಗಸೂಚಿಗಳನ್ನ ಅಂತಿಮಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಜೂನ್ 1 ಅಂದ್ರೆ ನಾಳೆಯಿಂದಲೇ ಗ್ಯಾರಂಟಿಗಳನ್ನ ಜಾರಿಯಾಗಲಿವೆ ಎಂದು ತಿಳಿದುಬಂದಿದೆ.
ಒಟ್ಟಾರೆ, ರಾಜ್ಯದ ಜನರ ಚಿತ್ತ ನಾಳೆ ನಡೆಯಲಿರೋ ಸಚಿವ ಸಂಪುಟ ಸಭೆಯತ್ತ ನೆಟ್ಟಿದೆ.. ಯಾರಿಗೆಲ್ಲಾ ಗ್ಯಾರಂಟಿಗಳು ಗ್ಯಾರಂಟಿಯಾಗಿ ಸಿಗುತ್ತೆ ಎಂಬ ಚರ್ಚೆ ಶುರುವಾಗಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ