newsfirstkannada.com

ಸ್ವಂತ ತಮ್ಮನಿಗೇ ವಾರ್ನಿಂಗ್ ಕೊಟ್ಟ CM.. ಮನೆ ಖಾಲಿ ಮಾಡದಿದ್ರೆ ಧ್ವಂಸ; ರೇವಂತ್ ರೆಡ್ಡಿ ಎಚ್ಚರಿಕೆ

Share :

Published August 29, 2024 at 12:09pm

    30 ದಿನಗಳಲ್ಲಿ ಸ್ವಯಂ ಪ್ರೇರಿತವಾಗಿ ಮನೆ ತೆರವು ಮಾಡಬೇಕು

    ನಟ ನಾಗರ್ಜುನ್ ಅವರ ಕನ್ವೆನ್ಷನ್ ಹಾಲ್ ನೆಲಸಮ ಮಾಡಿದ್ದರು

    ರೇವಂತ್ ರೆಡ್ಡಿ ಸ್ವಂತ ತಮ್ಮ ತಿರುಪತಿ ರೆಡ್ಡಿಗೆ ಬಂದ ಸಂಕಷ್ಟ..!

ಹೈದರಾಬಾದ್: ತೆಲುಗು ನಟ ನಾಗರ್ಜುನ್ ಅವರ ಕನ್ವೆನ್ಷನ್ ಹಾಲ್ ನೆಲಸಮ ಮಾಡಿದ ಬೆನ್ನಲ್ಲೇ ತನ್ನ ಸಹೋದರನಿಗೆ ಮನೆ ಖಾಲಿ ಮಾಡುವಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸೂಚನೆ ನೀಡಿದ್ದಾರೆ. ಅಕ್ರಮ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಸಿಎಂ ಸಮರ ಸಾರಿದ್ದು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಬಿಗ್ ಶಾಕ್​.. ಮಾರ್ಕೆಟ್​ನಲ್ಲಿ ಬೆಲೆ ಹೆಚ್ಚಿಸಿಕೊಂಡ ಈರುಳ್ಳಿ, ಬೆಳ್ಳುಳ್ಳಿ; ಕೆಜಿಗೆ ಎಷ್ಟು ರೂಪಾಯಿ?

ತಿರುಪತಿ ರೆಡ್ಡಿ ಎನ್ನುವರು ಸಿಎಂ ರೇವಂತ್ ರೆಡ್ಡಿ ಅವರ ಸಹೋದರನಾಗಿದ್ದು ಇದೀಗ ಇವರ ಮನೆಯನ್ನೇ ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡು ತಿರುಪತಿ ರೆಡ್ಡಿ ಮನೆ ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರದಿಂದ ನೋಟಿಸ್ ನೀಡಲಾಗಿದ್ದು ನಿವಾಸವನ್ನು ನೆಲಸಮ ಮಾಡುವುದಾಗಿ ತಿಳಿಸಲಾಗಿದೆ. 30 ದಿನಗಳಲ್ಲಿ ಸ್ವಯಂ ಪ್ರೇರಿತವಾಗಿ ಮನೆ ತೆರವು ಮಾಡಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಭೀಕರ ಮಳೆಯಿಂದ 26 ಸಾವು.. ಮುಂದುವರೆದ ವರುಣಾರ್ಭಟ, 11 ಜಿಲ್ಲೆಗಳಿಗೆ ರೆಡ್​ ಅಲರ್ಟ್!

ಸಿಎಂ ರೇವಂತ್ ರೆಡ್ಡಿ ಅವರ ಸಹೋದರ ತಿರುಪತಿ ರೆಡ್ಡಿ ಮಾದಾಪುರ ಅಮರ್ ಕೋ-ಆಪರೇಟಿವ್ ಸೊಸೈಟಿ ಬಳಿಯ ದುರ್ಗ ಕೆರೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಇದರಲ್ಲೇ ಕಚೇರಿ ಕೂಡ ಇದೆ. ಹೀಗಾಗಿ ಮನೆ ಹಾಗೂ ಕಚೇರಿ ಖಾಲಿ ಮಾಡುವಂತೆ ಸದ್ಯ ನೋಟಿಸ್ ನೀಡಲಾಗಿದೆ. ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಜನಸಾಮಾನ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಎಂದು ನೋಡದೆ ಡೆಮಾಲಿಷ್ ಮಾಡುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ತೆಲುಗು ಸೂಪರ್ ಸ್ಟಾರ್ ನಾಗರ್ಜುನ್ ಅವರಿಗೆ ಸೇರಿದ್ದ ಐಷಾರಾಮಿ ಎನ್​​.ಕನ್ವೆನ್ಷನ್​ ಹಾಲ್​ ಅನ್ನು ಧ್ವಂಸ ಮಾಡಲಾಗಿತ್ತು. ಇದು ತೆಲಂಗಾಣದ್ಯಾಂತ ಭಾರೀ ಸುದ್ದಿಯಾಗಿತ್ತು. ಇದೀಗ ಸ್ವಂತ ಸಹೋದರನ ನಿವಾಸವೇ ಸರ್ಕಾರದ ಸ್ಥಳದಲ್ಲಿ ಇರುವ ಕಾರಣ ಅದನ್ನು ಧ್ವಂಸ ಮಾಡಲು ಸಿಎಂ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಂತ ತಮ್ಮನಿಗೇ ವಾರ್ನಿಂಗ್ ಕೊಟ್ಟ CM.. ಮನೆ ಖಾಲಿ ಮಾಡದಿದ್ರೆ ಧ್ವಂಸ; ರೇವಂತ್ ರೆಡ್ಡಿ ಎಚ್ಚರಿಕೆ

https://newsfirstlive.com/wp-content/uploads/2024/08/CM_REVANTH_REDDY_BROTHER.jpg

Load More