newsfirstkannada.com

ಟೊಮ್ಯಾಟೋ ಕೊಳ್ಳಂಗಿಲ್ಲ.. ಸಾಂಬರ್ ರುಚಿಯಿಲ್ಲ.. ರಾಜ್ಯದ ಜನಕ್ಕೆ ದುಸ್ವಪ್ನವಾದ ಈ 6 ವಸ್ತುಗಳ ಬೆಲೆ ಏರಿಕೆ..!

Share :

03-08-2023

    ಕರುನಾಡ ಜನತೆಗೆ ದರ ಏರಿಕೆಯ ಬಿಗ್​ ಶಾಕ್​

    60 ಸಾವಿರದ ಗಡಿಯಲ್ಲಿ ಬಂಗಾರದ ದರ್ಬಾರ್​

    ರಾಜ್ಯದಲ್ಲಿ ‘ದುಬಾರಿ ದುಖಾನ್​​’ನ ದರ’ಭಾರ’!

ರಾಜ್ಯದಲ್ಲಿ ದುಬಾರಿ ದುಖಾನ್​ ಓಪನ್​ ಆಗಿದೆ. ಸರ್ಕಾರಗಳು ಆಗಸದಲ್ಲಿ ದರಗಳ ನೃತ್ಯ ಸಂಯೋಜನೆ ಆಯೋಜಿಸಿವೆ. ಮಾರುಕಟ್ಟೆಯ ಯಾವುದೇ ಜಾಗಕ್ಕೂ ಕಾಲಿಟ್ಟರೂ ಕಾಂಚಾಣದ ಸದ್ದು ತಾಳ ತಟ್ತಿದೆ. ಹಾಗಂತ ಇದು ಮನರಂಜನೆಯಲ್ಲ. ಶ್ರೀಸಾಮಾನ್ಯನ ಜೇಬಿಗೆ ಬೀಳ್ತಿರುವ ಟ್ಯಾಕ್ಸ್​ ಎಂಬ ಕತ್ತರಿ ಪ್ರಯೋಗ. ಗ್ಯಾರಂಟಿಗಳ ಪುಕ್ಸಟ್ಟೆ ಯುಗದಲ್ಲಿ ಸರ್ಕಾರದ ಪರ್ಯಾಯ ವಸೂಲಿ ಮಾರ್ಗಗಳು ಜನರನ್ನ ದಿಕ್ಕೆಡೆಸ್ತಿವೆ.

ರಾಜ್ಯದಲ್ಲಿ ‘ದುಬಾರಿ ದುಖಾನ್​​’ನ ದರ’ಭಾರ’!

ಕಿಚನ್​​​ ರಾಣಿ ಟೊಮ್ಯಾಟೋ ಬೆಲೆ ಎದೆ ಇರಿಯುವಷ್ಟು ದುಬಾರಿ ಆಗಿದೆ. ಹಾಲಿನ ಬೆಲೆಯೂ ಜೇಬು ಬಿಸಿಯಾಗುತ್ತಿದೆ. ಹೊಟೇಲ್​ ರೇಟು ಕೇಳಲೇಬೇಡಿ. ಕಾಫಿ-ಟೀ ತುಟಿಗಳನ್ನ ಸುಡುತ್ತಿದೆ. ಮನೆಯಲ್ಲಿ ಗ್ಯಾಸ್​ ಸಿಲಿಂಡರ್​ಗೆ ತಿಂಗಳಿಗೊಮ್ಮೆ ಟ್ಯಾಕ್ಸ್​​ ಕೇಳುತ್ತಿದೆ. ಬಂಗಾರದ ಭಾರ ಕೂಡ 60 ಸಾವಿರದ ಗಡಿಯಲ್ಲಿ ದರ್ಬಾರ್​​ ನಡೆಸುತ್ತಿದೆ. ಇದು ಗ್ಯಾರಂಟಿಗಳ ಬಳುವಳಿನಾ? ಸರ್ಕಾರದ ವಿರುದ್ಧ ವಿಪಕ್ಷಗಳ ಚಳುವಳಿನಾ? ಆದ್ರೆ, ಲೋಕ ಕದನಕ್ಕೂ ಮುನ್ನವೇ ಸರ್ಕಾರದ ವಿರುದ್ಧ ದರ ಏರಿಕೆ ಅಸ್ತ್ರ ಮಾತ್ರ ಬಿಜೆಪಿ ಬತ್ತಳಿಕೆ ಸೇರಿದೆ. ಬಿಜೆಪಿ ಅತಿರಥ ನಾಯಕರು, ಅಗತ್ಯವಸ್ತುಗಳ ಬೆಲೆ ಏರಿಕೆ ಬಗ್ಗೆ ಗರಂ ಆಗಿದೆ.

ಸಿಎಂ ಸಿದ್ದರಾಮಯ್ಯ ಅವರು ಅವೆಲ್ಲವನ್ನ ಮರೆತು ಈಗ ಬೆಲೆ ಏರಿಕೆ ಹೊರೆಯನ್ನು ಜನರ ಮೇಲೆಯೇ ಹೊರಿಸಿದ್ದಾರೆ. ಎಟಿಎಂ ಸರ್ಕಾರದಿಂದಾಗಿ ಎದ್ದು ನಿಲ್ಲುವುದೇ ಕಷ್ಟವಾಗಿರುವಾಗ ಜನಸಾಮಾನ್ಯರು ಉತ್ತಮ ಭವಿಷ್ಯದ ಕನಸನ್ನೂ ಕಳೆದುಕೊಂಡಿದ್ದಾರೆ – ಕರ್ನಾಟಕ ಬಿಜೆಪಿ

ಬೆಲೆ ಏರಿಕೆ 6ನೇ ಗ್ಯಾರಂಟಿ!
1. ವಿದ್ಯುತ್ ದರ ಏರಿಕೆಯ ಶಾಕ್
2. ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ
3. ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ
4. ಹೊಟೆಲ್​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ
5. ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ
6. ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಮೂಲಕ ಬರುವಂತ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ.

ಮಾಜಿ ಡಿಸಿಎಂ ಅಶೋಕ್​ ಕೂಡ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಕಾಂಗ್ರೆಸ್​ ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ಯಾ ಅಂತ ವಾಗ್ದಾಳಿ ನಡೆಸಿದ್ದಾರೆ. ಒಟ್ಟಾರೆ, ಪೂರೈಕೆ ಕಡಿಮೆ ಆಗಿ, ಬೇಡಿಕೆ ಹೆಚ್ಚಾದಾಗ ಬೆಲೆ ಗಗನ ಕುಸುಮ ಆಗೋದು ಸಾಮಾನ್ಯ. ಇದು ದುಬಾರಿ ದುನಿಯಾದ ಸಿಂಪಲ್​ ಅರ್ಥಶಾಸ್ತ್ರ. ಇದೆಲ್ಲ ಸರ್ಕಾರದ ಕಂಟ್ರೋಲ್​​​ ಇಲ್ಲವಾದ್ರೂ, ಬೆಲೆ ನಿಯಂತ್ರಣಕ್ಕೆ ಸರ್ಕಾರ ಬೇರೆ ದಾರಿ ಕಂಡುಕೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಕೊಳ್ಳಂಗಿಲ್ಲ.. ಸಾಂಬರ್ ರುಚಿಯಿಲ್ಲ.. ರಾಜ್ಯದ ಜನಕ್ಕೆ ದುಸ್ವಪ್ನವಾದ ಈ 6 ವಸ್ತುಗಳ ಬೆಲೆ ಏರಿಕೆ..!

https://newsfirstlive.com/wp-content/uploads/2023/08/VEGITABLE.jpg

Load More