newsfirstkannada.com

ಪ್ರಾಸಿಕ್ಯೂಷನ್​ ವಿರುದ್ಧ ಸಿಎಂ ಕಾನೂನು ಹೋರಾಟ; ಹೈಕೋರ್ಟ್​​ನಲ್ಲಿ ಇಂದು ಸಿದ್ದರಾಮಯ್ಯ ಭವಿಷ್ಯ

Share :

Published August 31, 2024 at 7:15am

    ಇಂದು ಕಾಂಗ್ರೆಸ್​ ನಾಯಕರಿಂದ ರಾಜಭನವ ಚಲೋ

    ಸಿಎಂ ಸಿದ್ದು ಪರ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಹಸ್ತ ಪಡೆ

    ಇಂದು ಹೈಕೋರ್ಟ್​ನಲ್ಲಿ ಸಿಎಂ ರಿಟ್​ ಅರ್ಜಿ ವಿಚಾರಣೆ

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್​​ ಇವತ್ತು ರಾಜಧಾನಿಯಲ್ಲಿ ಬೀದಿಗಿಳಿಯಲು ಸಜ್ಜಾಗಿದೆ. ರಾಜ್ಯಪಾಲರ ತಾರತಮ್ಯ ಧೋರಣೆ ಖಂಡಿಸಿ ರಾಜಭವನ ಚಲೋಗೆ ಕಾಂಗ್ರೆಸ್​ ಕರೆ ನೀಡಿದೆ. ಈ ಮೂಲಕ ಕಾನೂನು ಕದನದ ಜೊತೆ ಬೀದಿ ಕದನಕ್ಕೂ ಸಜ್ಜಾಗಿದೆ.

ರಾಜ್ಯ ರಾಜಕೀಯದಲ್ಲಿ ಸದ್ಯ ಪ್ರಾಸಿಕ್ಯೂಷನ್​ ಫೈಟ್​ ತಾರಕಕ್ಕೇರಿದೆ. ರಾಜ್ಯಪಾಲರ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ಕೈ ಪಡೆ ಇದೀಗ ರಾಜ್ಯಪಾಲರ ವಿರುದ್ಧ ಬೀದಿಗಿಳಿಯಲು ಮುಂದಾಗಿದೆ. ಇವತ್ತು ರಾಜ್ಯ ರಾಜಧಾನಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನಕ್ಕೆ ಇಡೀ ಕಾಂಗ್ರೆಸ್​ ಪಡೆಯೇ ಸಜ್ಜಾಗಿದೆ.

ಮೂಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ದಿನದಿಂದಲೂ ಕಾಂಗ್ರೆಸ್​ ನಾಯಕರು ಗರ್ವನರ್​ ವಿರುದ್ಧ ಗುಟುರು ಹಾಕುತ್ತಲೇ ಇದ್ದಾರೆ. ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿ ತಿಂಗಳುಗಳೇ ಕಳೆದಿದ್ರೂ ರಾಜ್ಯಪಾಲರು ಯಾವುದೇ ಕ್ರಮಕೈಗೊಂಡಿಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಮಾತ್ರ ಖಾಸಗಿ ದೂರಿನಡಿ ಸರಿಯಾಗಿ ಪರಿಶೀಲಿಸದೇ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ ಅನ್ನೋದು ಕಾಂಗ್ರೆಸ್ಸಿಗರ ಆರೋಪ. ಹೀಗಾಗಿ ರಾಜ್ಯಪಾಲರ ಈ ಭಿನ್ನ ನಡೆಯನ್ನು ಪ್ರಶ್ನಿಸಿರುವ ಕೈ ನಾಯಕರು, ಇವತ್ತು ರಾಜಭನವ ಚಲೋಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ:ರಾಜಭವನದ ಕದ ತಟ್ಟಿದ ಮತ್ತೊಂದು ದೊಡ್ಡ ಹಗರಣ; ಸಿದ್ದು ಬಳಿಕ ಖರ್ಗೆ ಕುಟುಂಬ, ಎಂಬಿ ಪಾಟೀಲ್​​ಗೆ ಸಂಕಷ್ಟ..!

ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಮೆರವಣಿಗೆ ಕಾಂಗ್ರೆಸ್​ ನಾಯಕರು ಸಜ್ಜಾಗಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅರ್ಜಿಗಳು ರಾಜ್ಯಪಾಲರ ಮುಂದೆ ಬಾಕಿ ಇವೆ. ಹೀಗಾಗಿ ಪಕ್ಷಪಾತಿ ಧೋರಣೆ ಬಿಟ್ಟು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಎಂದು ರಾಜ್ಯಪಾಲರ ಮೇಲೆ ಒತ್ತಡ ಹಾಕಲು ಕಾಂಗ್ರೆಸ್‌ ಮುಂದಾಗಿದೆ. ರಾಜಭವನದ ಚಲೋದಲ್ಲಿ ಕಾಂಗ್ರೆಸ್​ನ ಎಲ್ಲ ಶಾಸಕರು, ಸಂಸದರು, ಎಂಎಲ್​ಸಿಗಳು, ಸಚಿವರು, ರಾಜ್ಯಸಭಾ ಸದಸ್ಯರು ಪಾಲ್ಗೊಳ್ಳಬೇಕೆಂದು ಡಿಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ.

ಮುಡಾ ಮುಗಿಯದ ಯುದ್ಧಕಾಂಡವಾಗ್ತಿದೆ. ನಿರಂತರ ಕಾನೂನು ಹೋರಾಟಕ್ಕೆ ಸಿಎಂ ಸಿದ್ದು ರೆಡಿ​ ಆಗ್ತಿದ್ದಾರೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಆದೇಶದ ಕುರಿತ ರಿಟ್‌ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಇವತ್ತು ಮತ್ತೆ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ಸಿಎಂ ಪರ ಅಭಿಷೇಕ್​ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ. ಇವತ್ತು ರಾಜ್ಯಪಾಲರ ಪರ ತುಷಾರ್​​ ಮೆಹ್ತಾ ವಾದಿಸಲಿದ್ದಾರೆ. ಒಂದ್ವೇಳೆ ಹೈಕೋರ್ಟ್​ನಲ್ಲಿ ಹಿನ್ನಡೆಯಾದ್ರೆ ಸುಪ್ರೀಂಕೋರ್ಟ್​ನಲ್ಲೂ ಕಾನೂನು ಕದನಕ್ಕೆ ಸಿಎಂ ತಯಾರಿ ನಡೆಸಿದ್ದಾರೆ.

ಕಾನೂನು ಸಮರಕ್ಕೆ ‘ಸಿದ್ಧ’ರಾಮಯ್ಯ!

  • ಇಂದಿಗೆ ರಿಟ್​​ ಅರ್ಜಿ ವಿಚಾರಣೆ ಮುಂದೂಡಿರುವ ಹೈಕೋರ್ಟ್​
  • ಸಿಎಂಗೆ ಪ್ರಾಸಿಕ್ಯೂಷನ್ ಆದೇಶ ತಿರಸ್ಕರಿಸಬಹುದೆಂಬ ವಿಶ್ವಾಸ
  • ಪ್ರಾಸಿಕ್ಯೂಷನ್​​​ ಪರ ಎತ್ತಿ ಹಿಡಿದ್ರೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ
  • ಅಲ್ಲೂ ನಿರಂತರವಾಗಿ ಕಾನೂನು ಹೋರಾಟ ಮಾಡುವ ಸಿಎಂ
  • ದ್ವಿಸದಸ್ಯ ಪೀಠದಲ್ಲೂ ವ್ಯತಿರಿಕ್ತ ತೀರ್ಪು ಬಂದ್ರೆ ಸುಪ್ರೀಂ ಮೊರೆ
  • ಈ ಬಗ್ಗೆ ಅಭಿಷೇಕ್ ಮನುಸಿಂಘ್ವಿ, ಕಪಿಲ್ ಸಿಬಲ್ ಜೊತೆ ಚರ್ಚೆ

ಒಟ್ಟಾರೆ, ಕಾಂಗ್ರೆಸ್​​​ ಕಾನೂನು ಕದನದ ಜೊತೆ ಬೀದಿ ಹೋರಾಟದ ಕದನಕ್ಕೂ ಸಜ್ಜಾಗಿದೆ. ಇವತ್ತು ರಾಜಧಾನಿಯಲ್ಲಿ ಕಾಂಗ್ರೆಸ್​​ ರಾಜಭನ ಚಲೋಗೆ ಸಜ್ಜಾಗಿದೆ. ಅತ್ತ ಹೈಕೋರ್ಟ್​​ನಲ್ಲಿ ಸಿಎಂ ರಿಟ್​​ ಅರ್ಜಿ ವಿಚಾರಣೆಗೆ ಬರಲಿದೆ.. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮನೆಮಾಡಿದೆ.

ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಮೂವರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಾಸಿಕ್ಯೂಷನ್​ ವಿರುದ್ಧ ಸಿಎಂ ಕಾನೂನು ಹೋರಾಟ; ಹೈಕೋರ್ಟ್​​ನಲ್ಲಿ ಇಂದು ಸಿದ್ದರಾಮಯ್ಯ ಭವಿಷ್ಯ

https://newsfirstlive.com/wp-content/uploads/2024/08/cm-siddu-1.jpg

Load More