newsfirstkannada.com

ಹೈಕಮಾಂಡ್​​ಗೆ ಹೊಸ ತಲೆನೋವು; ಸಿದ್ದು ವಿರುದ್ಧದ ಹರಿಪ್ರಸಾದ್​​ ಬಹಿರಂಗ ಅಸಮಾಧಾನಕ್ಕೆ ಕಾರಣವೇನು?

Share :

Published September 13, 2023 at 6:10pm

Update September 13, 2023 at 6:11pm

    ಹರಿ’ತ ಮಾತಿಗೆ ಹಳಿತಪ್ಪಿದ ಕಾಂಗ್ರೆಸ್​ ಪಯಣ!

    ಪಕ್ಷದೊಳಗಿನ ಸಿಟ್ಟು ಶಮನಕ್ಕೆ ಸಿದ್ದು ರಣತಂತ್ರ!

    ‘ಹೈ’​​ಗೆ ಬಿಸಿತುಪ್ಪವಾದ ಬಿ.ಕೆ. ಹರಿಪ್ರಸಾದ್ ನಡೆ!

ಬೆಂಗಳೂರು: ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲೇ ಸಿದ್ದು ಸರ್ಕಾರದ ಒಳಗೆ ಬೂದಿಮುಚ್ಚಿದ ಕೆಂಡ ಸೃಷ್ಟಿ ಆಗ್ತಿದೆ. ಈವರೆಗೆ ಇಷ್ಟು ಕಾಠಿಣ್ಯದ ಹೇಳಿಕೆ ಸಿದ್ದು ವಿರುದ್ಧ ಪ್ರಯೋಗ ಆಗಿರಲಿಲ್ಲ. ಈ ಹರಿತ ಹೇಳಿಕೆಗಳಿಂದ ಸಿಎಂಗೆ ತಲೆನೋವು ತಂದಿಟ್ಟಿದೆ. ತಮ್ಮ ವಿರುದ್ಧದ ಈ ದಾಳಿಗೆ ರಕ್ಷಣಾತ್ಮಕ ಆಟಕ್ಕೆ ಇಳಿದ ಸಿದ್ದು, ಮಧು ಬಂಗಾರಪ್ಪ ಮೂಲಕ ಡ್ಯಾಮೇಜ್​​ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಹೈಕಮಾಂಡ್​ ಹರಿಪ್ರಸಾದ್​ಗೆ ನೋಟಿಸ್​ ನೀಡಿ, ಗದ್ದಲಕ್ಕೆ ಬ್ರೇಕ್​ ಹಾಕಿದೆ.

ರಾಜಕೀಯದಲ್ಲಿ ಹಿಂದಡಿಯಿದ್ದ ಸಿದ್ದರಾಮಯ್ಯ ಅಹಿಂದ ಮೂಲಕ ಮುಂದಡಿ ಇಟ್ಟಿದ್ದರು. ಅಂದು ದಳಪತಿ ಜೊತೆ ದಂಗಲ್​​ ಗೆದ್ದ ಸಿದ್ದರಾಮಯ್ಯ, ಈಗ ಅದೇ ಅಸ್ತ್ರ ತಿರುಗುಬಾಣ ಆಗಿದೆ. ಸಿದ್ದು ವಿರುದ್ಧ ಹಿಂದುಳಿದ ವರ್ಷದ ಶಸ್ತ್ರ ಹಿರಿದು ನಿಂತ ಹರಿಪ್ರಸಾದ್​​, ಹರಿತ ಮಾತುಗಳಿಂದ ಸಿಎಂ ಸಿದ್ದುರನ್ನ ಕೆಣಕ್ತಿದ್ದಾರೆ. ಈ ಕೆಣಕಿನ ಮಾತಿಗೆ ಒಳಗೊಳಗೆ ಕುದ್ದು ಹೋದ ಸಿದ್ದು, ಹೈಕಮಾಂಡ್​​​ ಬಳಿ ಹರಿ ನಾಮ ಪಠಿಸಿದ್ದಾರೆ. ಆಗ್ತಿರುವ ನೋವುಗಳನ್ನ ವರಿಷ್ಠರ ಬಳಿ ತೋಡಿಕೊಂಡಿದ್ದಾರೆ.

ಪಕ್ಷದೊಳಗಿನ ಸಿಟ್ಟು ಶಮನಕ್ಕೆ ಸಿಎಂ ಸಿದ್ದು ಮಾಸ್ಟರ್ ಪ್ಲಾನ್!

ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು. ದೇವರಾಜು ಅರಸು​​ ಕಾರಲ್ಲಿ ಕೂತ್ರೆ ದೇವರಾಜು ಅರಸು ಆಗಲ್ಲ. ನಾನೊಬ್ಬ ಸರ್ಕಾರ ಮಾಡಿದ್ದೀನಿ ಅಂತ ಯಾರಾದ್ರೂ ಗುಂಗಲಿದ್ರೆ ಜನ ತೀರ್ಮಾನಿಸ್ತಾರೆ. ಯಾರೋ ಕೆಲವರು ಪಂಚೆ ಹಾಕಿಕೊಂಡು ಹೂಬ್ಲೆಟ್ ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲ. ಇವು ಈಡಿಗ ಸಮುದಾಯ ಸಭೆಯಲ್ಲಿ ಹರಿಪ್ರಸಾದ್​ ಸಿಡಿಸಿದ ಸಿಡಿಗುಂಡುಗಳು.

ಹೈಕಮಾಂಡ್​​ಗೆ ಬಿಸಿತುಪ್ಪವಾದ ಬಿ.ಕೆ. ಹರಿಪಸ್ರಾದ್ ನಡೆ!

ಈ ಹರಿತ ಮಾತುಗಳೇ ಸಿದ್ದರಾಮಯ್ಯರ ಆತ್ಮಾಭಿಮಾನಕ್ಕೆ ಇರಿದಿದೆ. ಹರಿಪ್ರಸಾದ್​ ಮಾತಿಗೆ ಬೇಸರ ಹೊರಹಾಕಿರುವ ಸಿದ್ದು, ದಲಿತರು ಸಿಎಂ ಆಗಬೇಕೆಂದು ಪದೇ ಪದೇ ಹೇಳಿಕೆ ನೀಡ್ತಿದ್ದಾರೆ. ಈ ಮಾತುಗಳು ಹೈಕಮಾಂಡ್​ಗೂ ಮುಜುಗರ ತರಿಸಿದೆ. ಕ್ರಮ ಕೈಗೊಂಡರೂ ಕಷ್ಟ, ಕ್ರಮ ಕೈಗೊಳದೇ ಇದ್ದರೂ ಕಷ್ಟ ಅನ್ನೋ ಹಾಗೆ ಬಿಸಿ ತುಪ್ಪದ ಸ್ಥಿತಿಯಲ್ಲಿ ಹೈಕಮಾಂಡ್​​ ಇದೆ. ಈ ಬಗ್ಗೆ ಹೈಕಮಾಂಡ್​ಗೂ ಸಿಎಂ ಸಿದ್ದರಾಮಯ್ಯರ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

ಸಮುದಾಯಗಳನ್ನ ಸೆಳೆಯಲು ಸಿದ್ದರಾಮಯ್ಯ ತಂತ್ರ

ಇನ್ನು, ಬಿ.ಕೆ. ಹರಿಪ್ರಸಾದ್​ಗೆ ಟಾಂಗ್ ಕೊಡಲು ಸಿದ್ದು ಪಡೆ ರಣತಂತ್ರ ಸಿದ್ಧಪಡಿಸ್ತಿದೆ. ಕೌಂಟರ್ ಕೊಡಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಮಧು ಬಂಗಾರಪ್ಪ ಮೂಲಕ ಡ್ಯಾಮೇಜ್ ಕಂಟ್ರೋಲ್​ಗೆ ಸಿಎಂ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಅಷ್ಟಕ್ಕೂ ಮಾಸ್ಟರ್​​ ಪ್ಲಾನ್​ ಏನು? ಸಿದ್ದು ಕ್ಯಾಂಪ್​​ನ ಲೆಕ್ಕಾಚಾರ ಏನು ಅನ್ನೋದನ್ನ ತೋರಿಸ್ತೀವಿ ನೋಡಿ!

‘ಹರಿ’ಗೆ ಸಿದ್ದು ‘ಪ್ರಸಾದ’

ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲಾ ಸಮುದಾಯಗಳ ಬೆಂಬಲಕ್ಕೆ ಸಿದ್ದು ಯತ್ನ ಶುರುವಾಗಿದೆ. ಜೊತೆಗೆ ರಾಜಕೀಯ ಲೆಕ್ಕಾಚಾರವನ್ನೂ ಹಾಕಿರುವ ಸಿದ್ದರಾಮಯ್ಯ, ಈಡಿಗ, ಬಿಲ್ಲವ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೂಲಕ ಸಮುದಾಯದ ಓಲೈಕೆಗೆ ಸಜ್ಜಾಗಿರುವ ಸಿದ್ದರಾಮಯ್ಯ, ಅಗತ್ಯವಿದ್ದಲ್ಲಿ ಮತ್ತೊಮ್ಮೆ ಸಮುದಾಯದ ಸಮಾವೇಶ ಆಯೋಜನೆ ಪ್ಲಾನ್​​​ ರೂಪಿಸಿದ್ದಾರೆ. ಇದೇ ಸಮಾವೇಶದಲ್ಲಿ ಖುದ್ದು ಭಾಗಿ ಆಗಿ ಶಕ್ತಿ ಪ್ರದರ್ಶನಕ್ಕೂ ಸಿಎಂ ಚಿಂತನೆ ನಡೆಸಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸಮುದಾಯದ ವಿರೋಧ ವ್ಯಕ್ತವಾಗದಂತೆ ಅಲರ್ಟ್ ಆಗಿದ್ದಾರೆ ಎಂದು ಗೊತ್ತಾಗಿದೆ.

‘ಸಿದ್ದರಾಮಯ್ಯರಲ್ಲಿ ಜನ ಅರಸು ಅವರನ್ನ ಕಾಣ್ತಿದ್ದಾರೆ’

ಇತ್ತ, ಕೊಪ್ಪಳದ ಕುಷ್ಟಗಿಯಲ್ಲಿ ಸಿದ್ದು ಪರ ಸಚಿವ ತಂಗಡಗಿ ಬ್ಯಾಟ್​​​ ಮಾಡಿದ್ದಾರೆ. ಚರ್ಚೆ ಮಾಡುವ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಅಂತ ಹೇಳಿದ್ದಾರೆ. ಇತ್ತ, ಅಮರೇಗೌಡ ಬಯ್ಯಾಪುರ ಕೂಡ ನೋವಾಗಿರಬಹುದು. ಆದ್ರೆ ಹೇಳಿಕೆ ನೀಡುವುದು ತಪ್ಪು ಅಂತ ರೆಡ್​ ಮಾರ್ಕ್​ ಎಳೆದಿದ್ದಾರೆ.

ಇದನ್ನೂ ಓದಿ: Tallest dog: ಜಗತ್ತಿನ ಅತಿ ಎತ್ತರದ ಡಾಗ್ ಜೀಯಸ್ ಇನ್ನಿಲ್ಲ.. ಗಿನ್ನೆಸ್ ದಾಖಲೆ ಬರೆದಿದ್ದ ಶ್ವಾನಕ್ಕೆ ಏನಾಯ್ತು?

ಒಟ್ಟಾರೆ, ಕಾಂಗ್ರೆಸ್​​ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲೇ ಭಿನ್ನಸ್ವರ ಬೀದಿಗೆ ಬಂದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಪ್ರಕಟಗೊಳ್ತಿದೆ. ವರಿಷ್ಠರ ಸೂಚನೆಯಂತೆ ಮುಂದಿನ ದಿನಗಳಲ್ಲಿ ಹರಿಪ್ರಸಾದ್​ ತಮ್ಮ ಹೇಳಿಕೆಗೆ ವಿರಾಮ ನೀಡುವ ಸಾಧ್ಯತೆ ಇದೆ. ಅದಾಗ್ಯೂ ಆಗಿರುವ ಡ್ಯಾಮೇಜ್​​ಗೆ ಬ್ಯಾಂಡೇಜ್​​ ಬಿಗಿಯಲು ಹೊಸ ಸಮಾವೇಶಕ್ಕೆ ಸಿದ್ದು ಪ್ಲಾನ್​​ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಕಮಾಂಡ್​​ಗೆ ಹೊಸ ತಲೆನೋವು; ಸಿದ್ದು ವಿರುದ್ಧದ ಹರಿಪ್ರಸಾದ್​​ ಬಹಿರಂಗ ಅಸಮಾಧಾನಕ್ಕೆ ಕಾರಣವೇನು?

https://newsfirstlive.com/wp-content/uploads/2023/09/Siddu_Hariprasad.jpg

Load More