ರಾಜ್ಯದ ಈ ಜಿಲ್ಲೆಗಳಲ್ಲಿ ಮೊದಲು ‘ಧನಭಾಗ್ಯ’ ಜಾರಿ ಮಾಡಲಾಗುತ್ತೆ
10.5 ಲಕ್ಷ ಜನರ ಖಾತೆಗಳಿಗೆ ಸಿದ್ದರಾಮಯ್ಯ ಸರ್ಕಾರದಿಂದ ಕಾಂಚಾಣ
1 BPL ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಜತೆಗೆ 170 ರೂ.
ಅನ್ನಭಾಗ್ಯ ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಪ್ರತಿ ಬಡ ಕುಟುಂಬದ ಮನೆ ತಲುಪೋ ಯೋಜನೆ. ಹಸಿದ ಜನರ ಹೊಟ್ಟೆ ತುಂಬಿಸ್ತಿರೋ ‘ಅನ್ನ’ರಾಮಯ್ಯ ಕೊಟ್ಟಿರೋ ಭಾಗ್ಯ. ಇದೀಗ ಈ ಅನ್ನಭಾಗ್ಯ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ. ಬಡಜನರ ಹಸಿವು ನೀಗಿಸುವುದರ ಜೊತೆಗೆ ಅವರ ಖಾತೆಗೆ ಝಣಝಣ ಕಾಂಚಾಣ ಬೀಳಲಿದೆ. ಇವತ್ತು ಈ ಮಹತ್ತರ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ.
ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ಸಿಗದೇ ಸಿದ್ದರಾಮಯ್ಯ ಸರ್ಕಾರ ಪ್ಲಾನ್ ಬಿ ಮೊರೆ ಹೋಗಿತ್ತು. ಬಡವರ ಹೊಟ್ಟೆ ತುಂಬಿಸುವಷ್ಟು ಅಕ್ಕಿ ಸಿಗದೇ ಹಣ ಕೊಡಲು ಮುಂದಾಗಿತ್ತು. ಇದೀಗ ಮಹಿಳೆಯರಿಗೆ ಶಕ್ತಿ ಕೊಟ್ಟು, ಗೃಹಜ್ಯೋತಿ ಬೆಳಗಿಸಲು ಸಜ್ಜಾಗಿರೋ ‘ಕೈ’ ಬಳಿಕ 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಜಾರಿಗೆ ಕೌಂಟ್‌ಡೌನ್ ಶುರುವಾಗಿದೆ.
ಪಡಿತರ ಚೀಟಿ ಹೊಂದಿದವರ ಖಾತೆಗೆ ಬೀಳಲಿದೆ ಹಣ
ಅನ್ನಭಾಗ್ಯ ಯೋಜನೆ ಜಾರಿಗೆ ಮುಂದಾಗಿದ್ದ ಸರ್ಕಾರಕ್ಕೆ ಅಕ್ಕಿ ಅಭಾವ ಎದುರಾಗಿತ್ತು. ಅಕ್ಕಿ ಕೊಡ್ತೇವೆ ಎಂದಿದ್ದ ಎಫ್‌ಸಿಐ ಕೊನೆ ಟೈಮ್ನಲ್ಲಿ ಕೈಕೊಟ್ಟಿತ್ತು. ನೆರೆ ರಾಜ್ಯಗಳ ನೆರವು ಕೇಳಿದ್ದ ಸರ್ಕಾರಕ್ಕೆ ಅಲ್ಲಿ ಅಕ್ಕಿ ಸಿಗಲಿಲ್ಲ. ಕೊನೆಗೆ ಬಡವರ ಮನೆಗೆ ಅನ್ನಭಾಗ್ಯ ಯೋಜನೆಯ 5 ಅಕ್ಕಿ, ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ಕೆಜಿಗೆ 34 ರೂ.ನಂತೆ ತಲಾ 170 ರೂಪಾಯಿ ಕೊಡಲು ನಿರ್ಧರಿಸಿತ್ತು. ಇದೀಗ ಪಡಿತರ ಚೀಟಿ ಹೊಂದಿರೋ ಫಲಾನುಭವಿಗಳಿಗೆ ಅನ್ನಭಾಗ್ಯದ ಜೊತೆ ಧನ ಭಾಗ್ಯ ನೀಡುವ ಯೋಜನೆಗೆ ಇವತ್ತು ಚಾಲನೆ ಸಿಗಲಿದೆ. ಸಿದ್ದರಾಮಯ್ಯ ಸರ್ಕಾರ 3ನೇ ಗ್ಯಾರಂಟಿ ಇವತ್ತು ಲಾಂಚ್ ಮಾಡಲಿದೆ.
ಇವತ್ತು ‘ಧನಭಾಗ್ಯ’ಕ್ಕೆ ಚಾಲನೆ
ಮೈಸೂರು, ಕೋಲಾರದಲ್ಲಿ ಮೊದಲು ‘ಧನಭಾಗ್ಯ’ ಜಾರಿ
ಇವತ್ತು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು, ಆಹಾರ ಇಲಾಖೆಯ ಸಚಿವ ಕೆ.ಹೆಚ್. ಮುನಿಯಪ್ಪ ಜಿಲ್ಲೆ ಕೋಲಾರದಲ್ಲಿ ಅಧಿಕೃತವಾಗಿ ಅನ್ನಭಾಗ್ಯ ಜೊತೆ ಧನಭಾಗ್ಯ ಯೋಜನೆ ಆರಂಭವಾಗಲಿದೆ. ಒಟ್ಟು 10.5 ಲಕ್ಷ ಜನರ ಖಾತೆಗಳಿಗೆ ಇವತ್ತು ಸಿದ್ದರಾಮಯ್ಯ ಸರ್ಕಾರದಿಂದ ಝಣಝಣ ಕಾಂಚಾಣ ಬೀಳಲಿದೆ. ಬಳಿಕ ಒಂದೊಂದೇ ಜಿಲ್ಲೆಗಳಿಗೆ ಅನ್ನಭಾಗ್ಯ ಹಣ ಬಿಡುಗಡೆ ಮಾಡಲು ಆಹಾರ ಇಲಾಖೆ ಮುಂದಾಗಿದೆ.
ಇನ್ನೂ ರಾಜ್ಯದಲ್ಲಿ ಎಷ್ಟು ಮಂದಿ ಅನ್ನಭಾಗ್ಯದ ಜೊತೆ ಧನಭಾಗ್ಯದ ಲಾಭವನ್ನ ಪಡೆಯಲಿದ್ದಾರೆ ಎಂಬ ಅಂಕಿ ಅಂಶವನ್ನ ನೋಡಿದ್ರೆ,
ಧನಭಾಗ್ಯ ಫಲಾನುಭವಿಗಳು
ಇನ್ನೂ ಪ್ರತಿ ಸದಸ್ಯನಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ತಲಾ 170 ರೂಪಾಯಿ ಕೊಡ್ತಿದ್ದು, ಒಂದು ಕುಟುಂಬದಲ್ಲಿ ಎಷ್ಟು ಜನರಿದ್ರೆ ಎಷ್ಟು ಹಣ ಸಿಗುತ್ತೆ ಅಂತಾ ನೋಡಿದ್ರೆ.
ಕಾಂಚಾಣ ಭಾಗ್ಯದ ಲೆಕ್ಕ
ಒಂದು ಬಿಪಿಎಲ್ ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಜೊತೆಗೆ 170 ರೂಪಾಯಿ ಹಣ ಸಿಗಲಿದೆ. ಒಂದ್ವೇಳೆ 1 ಕುಟುಂಬದಲ್ಲಿ ಇಬ್ಬರಿದ್ದರೆ 10 ಕೆ.ಜಿ. ಅಕ್ಕಿ, 340 ರೂಪಾಯಿ ಹಣ ಸಿಗಲಿದೆ. 1 ಕುಟುಂಬದಲ್ಲಿ ಮೂವರಿದ್ದರೆ 15 ಕೆ.ಜಿ ಅಕ್ಕಿ, 510 ರೂಪಾಯಿ ದುಡ್ಡು ಸಿಗುತ್ತೆ. ಹಾಗೇ 1 ಕುಟುಂಬದಲ್ಲಿ ನಾಲ್ವರಿದ್ದರೆ 20 ಕೆ.ಜಿ. ಅಕ್ಕಿ 680 ರೂಪಾಯಿ, ಐವರಿದ್ದರೆ 25 ಕೆ.ಜಿ. ಅಕ್ಕಿ, 850 ರೂಪಾಯಿ, 10 ಜನ ಸದಸ್ಯರಿದ್ರೆ 50 ಕೆ.ಜಿ. ಅಕ್ಕಿ 1,700 ರೂಪಾಯಿ ಹಣ ಖಾತೆಗೆ ಬೀಳಲಿದೆ.
ಅನ್ನಭಾಗ್ಯ ಯೋಜನೆಯೇನೋ ಇವತ್ತು ಜಾರಿಯಾಗಲಿದೆ. ಆದ್ರೆ, ಎಲ್ಲ ಪಡಿತರ ಚೀಟಿದಾರರ ಖಾತೆಗೆ ಇವತ್ತೇ ಹಣ ಬೀಳುವುದಿಲ್ಲ. ಬದಲಾಗಿ ಸಾಂಕೇತಿಕವಾಗಿ 2 ಜಿಲ್ಲೆಗಳ ಜನರ ಅಕೌಂಟ್‌ಗೆ ಹಣ ಹಾಕಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಪಡಿತರ ಫಲಾನುಭವಿಗಳ ಎಲ್ಲ ಖಾತೆಗೆ ಹಣ ಬೀಳುವುದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ