ಅಕ್ಕಿ ಕೊಡದೇ ಕೇಂದ್ರ ಸರ್ಕಾರ ದೊಡ್ಡ ಷಡ್ಯಂತ್ರ ನಡೆಸಿದೆ ಎಂದ ಸಿಎಂ
10 ಕೆಜಿ ಅಕ್ಕಿ ಕೊಡಲು ವರ್ಷಕ್ಕೆ 10,092 ಕೋಟಿ ರೂಪಾಯಿ ಬೇಕು
ಬಡವರಿಗೆ ಅಕ್ಕಿ ಕೊಡೋದನ್ನ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ
ಬೆಂಗಳೂರು: ಬಡವರಿಗೆ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಜಾರಿಗೆ ರಾಜ್ಯ ಸರ್ಕಾರ ತೀವ್ರ ಕಸರತ್ತು ನಡೆಸುತ್ತಿದೆ. ಬಿಜೆಪಿಯವರು ಏನೇ ರಾಜಕೀಯ ಮಾಡಲಿ. ಬಡವರಿಗೆ ಅಕ್ಕಿ ಕೊಡೋದನ್ನ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಅಕ್ಕಿ ಕೊಡದೇ ಕೇಂದ್ರ ಸರ್ಕಾರ ದೊಡ್ಡ ಷಡ್ಯಂತ್ರ ನಡೆಸಿದೆ. ಬಡವರಿಗೆ ಅಕ್ಕಿ ಕೊಡಬಾರದು ಅನ್ನೋದು ಅವರ ಉದ್ದೇಶ. ಕಾಂಗ್ರೆಸ್ ಪರ ಬಡವರು ನಿಲ್ಲುತ್ತಾರೆ ಎಂದು ಅಕ್ಕಿ ಕೊಡ್ತಿಲ್ಲ. ಬಡವರಿಗೆ 10 ಕೆಜಿ ಅಕ್ಕಿ ಕೊಡಲು ವರ್ಷಕ್ಕೆ 10,092 ಕೋಟಿ ರೂಪಾಯಿ ಬೇಕು. ಆ ದುಡ್ಡು ಕೊಡಲು ನಾವು ಸಿದ್ಧರಿದ್ದೇವೆ. ಆದ್ರೆ ಅವರು ಅಕ್ಕಿ ಕೊಡ್ತಿಲ್ಲ. ಅಕ್ಕಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಳೆದ ಜೂನ್ 12ರಂದು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೇವೆ ಅಂದ್ರು. ಆದರೆ ಜೂನ್ 13ರಂದು ಕೊಡಲ್ಲ ಅಂದ್ರು. ಬಡವರಿಗೆ ಅಕ್ಕಿ ಕೊಡುವ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನಮರ್ಯದೆ ಇದೆಯಾ? ಅಕ್ಕಿ ವಿಚಾರದಲ್ಲೂ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಈಗ ರಾಜ್ಯದ ಬಳಿ ಸ್ವಲ್ಪವೂ ಅಕ್ಕಿ ದಾಸ್ತಾನು ಇಲ್ಲ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅಕ್ಕಿ ಸಿಗುತ್ತಿಲ್ಲ. ಛತ್ತೀಸ್‌ಘಢ ಸರ್ಕಾರ 1.5 ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದು ಹೇಳಿದೆ. ಅದೂ ಕೂಡ ಒಂದು ತಿಂಗಳು ಮಾತ್ರ. ನಮಗೆ ಎರಡು ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಅಕ್ಕಿ ಬೇಕು. ಎಲ್ಲಿ ಭತ್ತ ಬೆಳೆಯುತ್ತಿದ್ದಾರೆ ಅಲ್ಲಿ ಅಕ್ಕಿ ಸಿಗುತ್ತಿಲ್ಲ.
ಬಿಜೆಪಿಯವರು ಭಾಷಣ ಮಾಡುತ್ತಾರೆ ಅಷ್ಟೇ. ಹೋಗಿ ಕೇಂದ್ರ ಸರ್ಕಾರದ ಜೊತೆ ಮಾತನಾಡಲಿ. ಕೆಲವರು ರಾಗಿ, ಜೋಳ ಕೊಡಿ ಎಂದು ಹೇಳುತ್ತಾರೆ. 2kg ರಾಗಿಯನ್ನು 6 ತಿಂಗಳು ಕೊಡಲು ಮಾತ್ರ ಸ್ಟಾಕ್ ಇದೆ. ನಮ್ಮ ಹತ್ತಿರ ಜೋಳ ಇಲ್ಲ. ಈಗ ನಾವು ನಾಫೆಡ್, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರಗಳಿಂದ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ಈ ಮೂರೂ ಕೇಂದ್ರದ ಸಂಸ್ಥೆಗಳೇ. ನೋಡೋಣ ಈ ಸಂಸ್ಥೆಗಳು ಎಷ್ಟು ಅಕ್ಕಿ ಕೊಡ್ತಾರೆ, ಎಷ್ಟು ರೂಪಾಯಿ ಕೊಡ್ತಾರೆ ಅನ್ನೋದು ಮುಖ್ಯವಾಗಿದೆ. ಪಂಜಾಬ್ ರಾಜ್ಯದ ಜತೆ ಮತ್ತೆ ಮಾತನಾಡುತ್ತೇವೆ. ನಾವು 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದುಡ್ಡು ಕೊಡ್ತೀವಿ ಕೊಡ್ರಯ್ಯಾ ಅಂದ್ರೂ ಅಕ್ಕಿ ಕೊಡ್ತಿಲ್ಲ. ಕೇಂದ್ರ ಸರ್ಕಾರ ಎಷ್ಟೇ ದ್ವೇಷದ ರಾಜಕೀಯ ಮಾಡಿದ್ರು ಬಡವರಿಗೆ ಅಕ್ಕಿ ಕೊಡೋದನ್ನ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. #NewsFirstKannada #Newsfirstlive #KannadaNews #Annabhagya #Congressguaranteescheme#Siddaramaiah… pic.twitter.com/mBaSSBla23
— NewsFirst Kannada (@NewsFirstKan) June 19, 2023