‘ಜೈನಮುನಿ ಕೊಂದವರನ್ನು ಎನ್ಕೌಂಟರ್ ಮಾಡಬೇಕು’
‘ದೇಹವನ್ನು ಒಂಬತ್ತು ತುಂಡರಿಸಿ ಬೋರ್ವೆಲ್ಗೆ ಹಾಕಿದ್ದಾರೆ’
ಜೈನಮುನಿ ಹತ್ಯೆಯಲ್ಲಿ ಹಣದ ವ್ಯವಹಾರ ಇಲ್ಲ -ಬೊಮ್ಮಾಯಿ
ವಿಧಾನಸಭೆ: ಚಿಕ್ಕೋಡಿಯ ನಂದಿಪರ್ವತ ಆಶ್ರಮದ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವು ವಿಧಾನಸಭೆ ಕಲಾಪದಲ್ಲೂ ಇವತ್ತು ಸದ್ದು ಮಾಡಿತು. ಶೂನ್ಯವೇಳೆಯಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಬಿಜೆಪಿ ಸದಸ್ಯ ಸಿದ್ದು ಸವದಿ, ಜೈನಮುನಿಗಳನ್ನು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು ಗುಡುಗಿದರು.
ಹತ್ಯೆ ನೋಡಿದರೆ ಉಗ್ರಗಾಮಿಗಳ ಪಿತೂರಿ ಇರಬಹುದು. ನಮ್ಮ ದೇಶಕ್ಕೆ ಎಚ್ಚರಿಕೆ ಸಂದೇಶ ಕೊಡುವುದು ಇದ್ದರೂ ಇರಬಹುದು. ಇದರ ಹಿಂದೆ ಷಡ್ಯಂತ್ರ ಇದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಮತ್ತೊಂದು ಭಯೋತ್ಪಾದಕ ಘಟನೆ ನಡೆಸುವ ಶಕ್ತಿಗಳ ನಿಗ್ರಹವಾಗಬೇಕು ಅಂತಾ ಆಗ್ರಹಿಸಿದರು.
ತನಿಖೆಗೆ ಬೊಮ್ಮಾಯಿ ಆಗ್ರಹ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ.. ಕೋಪ ಬಂದಾಗ ಬೇರೆ ಬೇರೆ ಸ್ವರೂಪದಲ್ಲಿ ಕೊಲೆ ಮಾಡುತ್ತಾರೆ. ಆದರೆ, ಮುನಿಗಳಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ್ದಾರೆ ಎಂದರೆ ಏನು? ಮುನಿಗಳಿಗೆ ಹತ್ತಿರ ಇರುವವರೇ ಕೊಲೆ ಮಾಡಿದ್ದಾರೆ. ಯಾವುದೇ ಹಣಕಾಸಿನ ವ್ಯವಹಾರ ಇರಲಿಲ್ಲ. ಹಣಕಾಸಿನ ವ್ಯವಹಾರಕ್ಕೂ ಮುನಿಗಳಿಗೆ ಯಾವುದೇ ಸಂಬಂಧ ಇಲ್ಲ. ಮುನಿಗಳ ಹತ್ಯೆ ಯಾಕೆ ನಡೆದಿದೆ ಎಂಬುವುದನ್ನ ಪತ್ತೆ ಮಾಡಬೇಕು ಅಂತಾ ಸರ್ಕಾರವನ್ನು ಒತ್ತಾಯಿಸಿದರು.
ಈ ವಿಚಾರವನ್ನು ತನಿಖೆ ಮಾಡದೇ ಪೋಲಿಸರು ತನಿಖೆಯ ಅಂತ್ಯಕ್ಕೆ ಬಂದುಬಿಟ್ಟಿದ್ದಾರೆ. ದೇಹವನ್ನ ಒಂಬತ್ತು ತುಂಡು ಮಾಡಿ ಬೋರ್ವೆಲ್ಗೆ ಹಾಕಿದ್ದಾರೆ ಅಂದರೆ ಎಷ್ಟು ಸಮಯ ಇರಬೇಕು? ಇದನ್ನ ಒಬ್ಬರು, ಇಬ್ಬರು ಮಾಡಲು ಸಾಧ್ಯವೇ? ಸೀರೆ, ಬಟ್ಟೆಗಳನ್ನು ಬಳಸಿ ದೇಹದ ಭಾಗಗಳನ್ನು ಕೊಳವೆ ಬಾವಿಗೆ ಹಾಕಿದ್ದಾರೆ. ಇದರ ಹಿಂದೆ ಹಲವರಿದ್ದಾರೆ. ಹಣಕಾಸಿನ ವ್ಯವಹಾರದ ಕೇಸ್ ಹಾಕಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಷಡ್ಯಂತ್ರ ನಡೆದಿದೆ. ದೇಹವನ್ನು ತುಂಡು ಮಾಡಿ ಬೋರ್ವೆಲ್ಗೆ ಹಾಕುವ ಧೈರ್ಯ ಯಾವಾಗ ಬರುತ್ತೆ? ರಾಜ್ಯದಲ್ಲಿ ಭಯ ಇಲ್ಲದ ವಾತಾವರಣ ಇದೆ ಎಂದು ಆಡಳಿತ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
‘ಅಗತ್ಯ ಬಿದ್ದರೆ ನಾಳೆ ನಾನೇ..’
ವಿಪಕ್ಷಗಳ ಆರೋಪಕ್ಕೆ ಕೊನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ಕೆಲವರು ರಾಜಕೀಯ ಬೆರೆಸಿ ಮಾತನ್ನಾಡಿದ್ದಾರೆ. ಇದು ಅತ್ಯಂತ ಖಂಡನೀಯ, ಕ್ರೂರ ಘಟನೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ನಾನೂ ಕೂಡ ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಗೃಹ ಸಚಿವ ಪರಮೇಶ್ವರ್ ಹುಬ್ಬಳ್ಳಿಗೆ ಹೋಗಿದ್ದಾರೆ. ಕೃತ್ಯ ಖಂಡಿಸಿ ವರೂರು ಶ್ರೀಗಳು ಧರಣಿ ಮಾಡ್ತಿದ್ದ ಸ್ಥಳಕ್ಕೆ ಹೋಗಿದ್ದರು. ಶ್ರೀಗಳನ್ನು ಗೃಹ ಸಚಿವರು ಮನವೊಲಿಸಿದ್ದಾರೆ. ಶ್ರೀಗಳು ಅಮರಣಾಂತ ಉಪವಾಸ ಕೈಬಿಟ್ಟಿದ್ದಾರೆ. ಹತ್ಯೆಯಾದ ಸ್ಥಳಕ್ಕೂ ಗೃಹ ಸಚಿವರು ಹೋಗ್ತಾರೆ. ಎಲ್ಲವನ್ನೂ ಅವರೇ ಖುದ್ದು ಪರಿಶೀಲಿಸ್ತಿದ್ದಾರೆ. ಇವತ್ತು ರಾತ್ರಿ ಗೃಹಸಚಿವರು ಬರಬಹುದು. ಹಾಗಾಗಿ ನಾಳೆ ಇದಕ್ಕೆ ಅವರೇ ಉತ್ತರ ಕೊಡ್ತಾರೆ. ಅಗತ್ಯ ಬಿದ್ದರೆ ನಾಳೆ ನಾನು ಉತ್ತರ ಕೊಡ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ