newsfirstkannada.com

ಬಜೆಟ್‌ಗೂ ಮುನ್ನ ಕಾಂಗ್ರೆಸ್ ಶಾಸಕರಿಗೆ ಬಿಸಿ ಮುಟ್ಟಿಸಿದ ಸಿಎಂ; ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

Share :

07-07-2023

    ದಾಖಲೆಯ ಬಜೆಟ್‌ ಮಂಡನೆಗೂ ಮುನ್ನ ಶಾಸಕರಿಗೆ ಖಡಕ್ ಸೂಚನೆ

    ಪ್ರತಿಪಕ್ಷಗಳ ಟ್ರ್ಯಾಪ್‌ಗೆ ಯಾರೂ ಬಲಿಯಾಗಬೇಡಿ ಎಂದ ಸಿದ್ದರಾಮಯ್ಯ

    ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸಿಎಂ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 14ನೇ ಬಜೆಟ್‌ ಮಂಡನೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಇನ್ನೆನ್ನೂ ಕೆಲವೇ ಕ್ಷಣದಲ್ಲಿ ವಿಧಾನಸಭೆಯಲ್ಲಿ ಸಿದ್ದರಾಮಯ್ಯ 2023-24ನೇ ಸಾಲಿನ ತಮ್ಮ ಲೆಕ್ಕಾಚಾರವನ್ನು ಮಂಡಿಸಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಯಾವೆಲ್ಲಾ ಜನಪರ ಯೋಜನೆಗಳನ್ನು ಘೋಷಣೆ ಮಾಡುತ್ತೆ. ಲೋಕಸಭಾ ಚುನಾವಣೆಗೂ ಮುನ್ನ ತನ್ನ 5 ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಯೋಜನೆಗಳಿಗೂ ಭರ್ಜರಿ ಅನುದಾನ ಕೊಡುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

ದಾಖಲೆಯ ಬಜೆಟ್ ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ತಮ್ಮ ಕ್ಯಾಬಿನೆಟ್ ಸದಸ್ಯರ ಜೊತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಈ ಮೀಟಿಂಗ್‌ನಲ್ಲೇ ಸಿಎಂ ಖಡಕ್ ಸೂಚನೆಯನ್ನು ನೀಡಿದ್ದು, ಕಾಂಗ್ರೆಸ್ ಶಾಸಕರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಇಂದು ರಾಜ್ಯ ಬಜೆಟ್​​ ಮಂಡನೆ; ಸಿದ್ದು ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ; ಯಾರಿಗೆ ಬಂಪರ್​​..?

8 ತಿಂಗಳು ವಿಶೇಷ ಅನುದಾನಕ್ಕೆ ಬ್ರೇಕ್‌!
ಪ್ರತಿಪಕ್ಷಗಳು ನಡೆಸುವ ಟ್ರ್ಯಾಪ್‌ಗೆ ಯಾರೂ ಬಲಿಯಾಗಬೇಡಿ. ಗ್ಯಾರಂಟಿ ಯೋಜನೆಗಳ ಕಾರಣ ವಿಶೇಷ ಅನುದಾನ ಕೇಳಬೇಡಿ. ಇನ್ನು ಎಂಟು ತಿಂಗಳು ವಿಶೇಷ ಅನುದಾನ ಕೊಡುವುದು ಕಷ್ಟಸಾಧ್ಯ. ಎಲ್ಲರೂ ಇದಕ್ಕೆ ಸಹಕಾರ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಖಡಕ್ ಸೂಚನೆಯನ್ನು ನೀಡಿದ್ದಾರೆ. ಬಜೆಟ್‌ನಲ್ಲಿ ತಮ್ಮ ಕ್ಷೇತ್ರಗಳಿಗೆ ಅನುದಾನದ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿಯ ಸೂಚನೆಗೆ ದಂಗಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಜೆಟ್‌ಗೂ ಮುನ್ನ ಕಾಂಗ್ರೆಸ್ ಶಾಸಕರಿಗೆ ಬಿಸಿ ಮುಟ್ಟಿಸಿದ ಸಿಎಂ; ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

https://newsfirstlive.com/wp-content/uploads/2023/07/CM-Siddaramaiah-Congress.jpg

Load More