newsfirstkannada.com

ಐದು ಗ್ಯಾರಂಟಿ ಯೋಜನೆಗಳ ಜಾರಿ ಯಾವಾಗ?- ಈ ಬಗ್ಗೆ ಸಿಎಂ ನಡೆಸಿದ ಮಹತ್ವದ ಸಭೆಯಲ್ಲಿ ಆಗಿದ್ದೇನು?

Share :

Published May 31, 2023 at 3:32pm

    ನಾಳೆ ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ

    ಐದು ಗ್ಯಾರಂಟಿ ಯೋಜನೆಗಳ ಜಾರಿ ಯಾವಾಗ?

    ಸಿಎಂ ನಡೆಸಿದ ಮಹತ್ವದ ಸಭೆಯಲ್ಲಿ ಆಗಿದ್ದೇನು?

ಇಂದು ಗ್ಯಾರಂಟಿ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ರು. ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಚಿವರ ಜೊತೆ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆ ಸಂಬಂಧ ಚರ್ಚೆ ನಡೆಸಿದ್ರು. ಈ ವೇಳೆ ಸಚಿವರು ಗ್ಯಾರಂಟಿ ಯೋಜನೆಯ ಪರಮಾಧಿಕಾರವನ್ನು ಸಿಎಂಗೆ ನೀಡಿದ್ದಾರೆ. ನಾವು ಗ್ಯಾರಂಟಿಯನ್ನು ಜಾರಿ ಮಾಡುವುದು ಗ್ಯಾರಂಟಿ ಅಂತ ಸಿಎಂ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ಮಹದೇವಪ್ಪ ನಿಂಗೂ ಫ್ರೀ.. ನಂಗೂ ಫ್ರೀ.. ನಿಂಗೂ ಫ್ರೀ.. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಅಂತ ಗ್ಯಾರಂಟಿ ಕೊಟ್ಟಿದ್ದ ಸರ್ಕಾರದ ವಾರೆಂಟಿ ಅವಧಿ ಮುಗಿದಿದೆ. ಯಾಕಂದ್ರೆ ಸಿದ್ದರಾಮಯ್ಯ ಸರ್ಕಾರ ಬಂದು 10 ದಿನ ಕಳೆದ್ರೂ ಗ್ಯಾರಂಟಿ ಜಾರಿಯಾಗಿಲ್ಲ. ಇಂದಲ್ಲ ನಾಳೆ ಅಂತ ಸಭೆ ಮೇಲೆ ಸಭೆ ನಡೆಸಿ ಜನರ ನಿರೀಕ್ಷೆಗಳನ್ನು ಮುಂದಕ್ಕೆ ಹಾಕ್ತಿದ್ದಾರೆ. ನಿನ್ನೆ ಕೂಡ ನಾಳೆ ಮಹತ್ವದ ಸಭೆ ಮಾಡಿ ಗ್ಯಾರಂಟಿ ಘೋಷಿಸ್ತೀವಿ ಅಂತ ಸಚಿವರು ಹೇಳಿದ್ರು. ಅದರಂತೆ ಇಂದು ಸಿಎಂ ಸಿದ್ದರಾಮಯ್ಯ ಸಚಿವರ ಜೊತೆ ಸಭೆ ನಡೆಸಿದ್ರು.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ‘ಗ್ಯಾರಂಟಿ’ ಸಭೆ

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಬಹುನಿರೀಕ್ಷಿತ ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸುವ ಬಗ್ಗೆ ಸಭೆ ನಡೆಸಿದ್ರು. ಇಂಧನ ಸಚಿವ ಕೆ.ಜೆ ಜಾರ್ಜ್‌, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಸಚಿವರು ಸಭೆಯಲ್ಲಿ ಭಾಗಿಯಾಗಿದ್ರು. ಈ ವೇಳೆ ಐದು ಭರವಸೆಗಳನ್ನು ಜಾರಿಗೊಳಿಸಿದ್ರೆ ಆಗುವ ಖರ್ಚು-ವೆಚ್ಚಗಳ ಲೆಕ್ಕಾಚಾರದ ಕುರಿತು ಅಧಿಕಾರಿಗಳು, ಸಚಿವರ ಜೊತೆಗೆ ಸಿಎಂ ಚರ್ಚಿಸಿದ್ದಾರೆ.

ಮುಖ್ಯಮಂತ್ರಿಗೆ ಪರಮಾಧಿಕಾರ ನೀಡಿದ ಸಚಿವರು

ಇನ್ನು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಪರಮಾಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಚಿವ ಸಂಪುಟ ಸಭೆ ನಡೆಸಿ 200 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇರಿದಂತೆ ಐದು ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿದರು.

ನಾಳೆ ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ

ಇನ್ನು ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಸಿಎಂ ಮತ್ತೆ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್​ ಗ್ಯಾರಂಟಿ ಘೋಷಣೆ ಕುರಿತು ಸರಣಿ ಸಭೆಗಳನ್ನು ನಡೆಸಿರುವ ಸಿಎಂ, ನಾಳೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ. ಈ ಮೂಲಕ ನಾಳೆ ಸಂಪುಟ ಸಭೆ ಬಳಿಕ ಜಾರಿಯಾಗಬೇಕಿದ್ದ ಗ್ಯಾರಂಟಿ ಯೋಜನೆಗಳು ನಾಳೆಯಿಂದ ಜಾರಿಯಾಗಲ್ಲ. ಶುಕ್ರವಾರವೇ ಗ್ಯಾರೆಂಟಿ ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

‘ಗ್ಯಾರಂಟಿ ಜಾರಿ ಗ್ಯಾರಂಟಿ’

ಒಟ್ಟಾರೆ ಗ್ಯಾರಂಟಿ ಈಡೇರಿಸುವ ಬಗ್ಗೆ ಇಂದು ನಡೆದ ಸಭೆಯಲ್ಲಿ ಸಿಎಂ ಅಧಿಕಾರಿಗಳು ಹಾಗೂ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ನಾವು ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಪಕ್ಕಾ ಅಂತ ಸಾರಿ ಸಾರಿ ಹೇಳ್ತಿರುವ ಸಿಎಂ ಸಿದ್ದರಾಮಯ್ಯ ನಾಡಿದ್ದು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐದು ಗ್ಯಾರಂಟಿ ಯೋಜನೆಗಳ ಜಾರಿ ಯಾವಾಗ?- ಈ ಬಗ್ಗೆ ಸಿಎಂ ನಡೆಸಿದ ಮಹತ್ವದ ಸಭೆಯಲ್ಲಿ ಆಗಿದ್ದೇನು?

https://newsfirstlive.com/wp-content/uploads/2023/05/Siddu_123.jpg

Load More