newsfirstkannada.com

VIDEO: ಎಲ್ರಿಗೂ ರೀ.. ನನ್‌ ಹೆಂಡ್ತಿಗೂ ಫ್ರೀ ಅಂತಾ ಹೇಳಿದ್ದೇಕೆ ಸಿಎಂ ಸಿದ್ದರಾಮಯ್ಯ?

Share :

02-06-2023

  ಕೊನೆಗೂ ರಾಜ್ಯದ ಜನತೆಗೆ ಒಲಿದ 5 ಗ್ಯಾರಂಟಿ​!

  ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿದ ಸಿಎಂ ಸಿದ್ದರಾಮಯ್ಯ

  ಜಾತಿ, ಧರ್ಮದ ಬೇಧಭಾವ ಇಲ್ಲ ಎಂದ ಮುಖ್ಯಮಂತ್ರಿ

ಗ್ಯಾರಂಟಿ.. ಗ್ಯಾರಂಟಿ.. ಗ್ಯಾರಂಟಿ.. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಘೋಷಿಸಿದ್ದ 5 ಗ್ಯಾರಂಟಿಗಳಿಗೆ ಕೊನೆಗೂ ಗ್ಯಾರಂಟಿ ಸಿಕ್ಕಿದೆ. ಇಂದು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಗ್ಯಾರಂಟಿ ಕೊಟ್ಟಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಎಲ್ಲರಿಗೂ ತಲುಪಿಸುತ್ತೇವೆ. ಈ ಯೋಜನೆಗಳಿಗೆ ಜಾತಿ, ಧರ್ಮದ ಬೇಧಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು, ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಷರತ್ತುಗಳಿಲ್ಲ. 200 ಯೂನಿಟ್ ಉಚಿತ ವಿದ್ಯುತ್ ಬಾಡಿಗೆದಾರರಿಗೂ ಸಿಗಲಿದೆ. ಪ್ರತಿಯೊಂದು ಮನೆಯ ಯಜಮಾನಿಗೆ 2000 ರೂಪಾಯಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ ಎಂದರು. ಇನ್ನು ಶಕ್ತಿ ಯೋಜನೆಯಲ್ಲಿ ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಬಸ್ ಪ್ರಯಾಣ ಉಚಿತ ಇರಲಿದ್ಯಾ ಅನ್ನೋ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪಂಚಿಂಗ್ ಡೈಲಾಗ್ ಹೊಡೆದ್ರು. ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್‌ನಲ್ಲಿ ಉಚಿತ ಪ್ರಯಾಣ ಇರಲಿದೆ. ಎಲ್ರಿಗೂ ರೀ.. ನನ್‌ ಹೆಂಡ್ತಿಗೂ ಫ್ರೀ ಅಂತಾ ನಗು, ನಗುತ್ತಲೇ ಗ್ಯಾರಂಟಿ ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಎಲ್ರಿಗೂ ರೀ.. ನನ್‌ ಹೆಂಡ್ತಿಗೂ ಫ್ರೀ ಅಂತಾ ಹೇಳಿದ್ದೇಕೆ ಸಿಎಂ ಸಿದ್ದರಾಮಯ್ಯ?

https://newsfirstlive.com/wp-content/uploads/2023/06/Siddaramaiah-4.jpg

Load More