newsfirstkannada.com

Nandini milk prices: ನಂದಿನಿ ಹಾಲಿನ ದರ ಏರಿಕೆ ಆಗಿಲ್ಲ.. HDK ಆರೋಪಕ್ಕೆ CM ಖಡಕ್ ಉತ್ತರ; ಏನಂದ್ರು?

Share :

Published June 26, 2024 at 3:04pm

    ಹಾಲಿನ ದರ ಹೆಚ್ಚಾಗಿಲ್ಲ ಪ್ಯಾಕೆಟ್‌ ದರ 2 ರೂಪಾಯಿ ಏರಿಕೆ ಆಗಿದೆ ಅಷ್ಟೇ!

    ಕುಮಾರಸ್ವಾಮಿ ಮೊದಲು ಓದಿಕೊಂಡು, ತಿಳಿದುಕೊಂಡು ಮಾತನಾಡಲಿ

    ರೈತರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳವಾಗಿಲ್ಲ. ವಿರೋಧ ಪಕ್ಷ ನಾಯಕರ ಹೇಳಿಕೆಯಲ್ಲಿ ಹುರುಳಿಲ್ಲ. ರಾಜ್ಯದ ರೈತರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: Breaking: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್.. ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ! 

ಹಾಲಿನ ದರ ಹೆಚ್ಚಳವಾಗಿಲ್ಲ ಮೊದಲು ಎಷ್ಟಿತ್ತೋ ಅಷ್ಟೇ ಇದೆ. ಹಾಲು ಹೆಚ್ಚಾಗಿರೋದ್ರಿಂದ 500 ಮಿ.ಲೀ ಇರೋದನ್ನ 550 ಮಿ.ಲೀ ಹೆಚ್ಚು ಮಾಡಿದ್ದೇವೆ. ಹೆಚ್ಚುವರಿ 50 ಮೀಲಿ ಲೀಟರ್‌ಗೆ 2 ರೂಪಾಯಿ 10 ಪೈಸೆ ಏರಿಕೆ ಮಾಡಬೇಕಿತ್ತು. ಆದರೆ ಕೆಎಂಎಫ್ ಕೇವಲ 2 ರೂಪಾಯಿ ಏರಿಕೆ ಮಾಡಿದೆ. ಹಾಗಿದ್ರೆ ಹಾಲಿನ ದರ ಹೆಚ್ಚಳವೇ ಮಾಡಿಲ್ಲ. ಬಿಜೆಪಿಯವರು ಹೇಳ್ತಿರೋದು ಸರಿಯಿಲ್ಲ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಾ ಇತ್ತು. ಈಗ ಹಾಲಿನ ಉತ್ಪಾದನೆ 99 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ರೈತರಿಂದ ಹಾಲು ಕೊಂಡುಕೊಳ್ಳಬೇಕು ಅಲ್ವಾ? ನಾವು ಬೇಡ ಎಂದು ಹೇಳೋಕೆ ಆಗಲ್ಲ. ಅದಕ್ಕೋಸ್ಕರ ಅರ್ಧ ಲೀಟರ್‌ನಲ್ಲಿ 50 ಮಿ.ಲೀ ಲೀಟರ್ ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಕ್ವಾಂಟಿಟಿ ಹೆಚ್ಚಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಬೆಲೆ ಹೆಚ್ಚು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹಾಲನ್ನು ಚೆಲ್ಲೋಕೆ ಆಗುತ್ತಾ?
ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಹೆಚ್ಚಳ ಆಗಿರೋ 50 ಮಿ.ಲೀ ಹಾಲನ್ನು ಜನ ತೆಗೆದುಕೊಳ್ಳಲೇಬೇಕಾ ಅನ್ನೋ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ರೈತರಿಂದ ಉತ್ಪಾದನೆ ಆಗುವ ಹೆಚ್ಚುವರಿ ಹಾಲನ್ನು ತೆಗೆದುಕೊಳ್ಳಲೇ ಬೇಕು. ಹೆಚ್ಚಾದ ಹಾಲನ್ನು ಚೆಲ್ಲೋಕೆ ಆಗುತ್ತಾ. ಹಾಲು ಚೆಲ್ಲೋಕೆ ಆಗೊಲ್ಲ. ರೈತರ ಬಳಿ ನಾವು ತಗೊಳ್ಳಲ್ಲ ಅಂತ ಹೇಳೋಕೆ ಆಗಲ್ಲ. 550 ಮಿ.ಲೀ ಹಾಲನ್ನು ಜನರು ಕೊಂಡುಕೊಳ್ಳಲೇಬೇಕು. ಮಾರಾಟ ಮಾಡಬೇಕು ಅಲ್ವಾ? ಅದಕ್ಕೆ 2 ರೂಪಾಯಿ ಜಾಸ್ತಿ ಕೊಡಿ ಅಂತ ಕೇಳ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆಚ್‌ಡಿಕೆ ಆರೋಪಕ್ಕೆ ಸಿಎಂ ತಿರುಗೇಟು!
ಗ್ಯಾರೆಂಟಿಯಿಂದಲೇ ಬೆಲೆ ಏರಿಕೆಗೆ ಕಾರಣ ಎಂಬ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೊದಲು ಸರಿಯಾಗಿ ಓದಿಕೊಂಡು, ತಿಳಿದುಕೊಂಡು ಮಾತನ್ನಾಡಲಿ. ಬೆಲೆ ಏರಿಕೆ ಎಲ್ಲಿ ಆಗಿದೆ ಹೇಳಿ ನೋಡೋಣ. ಹೆಚ್ಚುವರಿಯಾಗಿ ಕೊಡುತ್ತಿರುವ ಹಾಲಿಗೆ ಹಣ ಪಡೆಯುತ್ತಿದ್ದೇವೆ. ಇದರ ಹೊರತಾಗಿ ಬೆಲೆ ಏರಿಕೆ ಎಲ್ಲಾಗಿದೆ. ಸುಮ್ಮನೆ ವಿರೋಧ ಪಕ್ಷಗಳು ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nandini milk prices: ನಂದಿನಿ ಹಾಲಿನ ದರ ಏರಿಕೆ ಆಗಿಲ್ಲ.. HDK ಆರೋಪಕ್ಕೆ CM ಖಡಕ್ ಉತ್ತರ; ಏನಂದ್ರು?

https://newsfirstlive.com/wp-content/uploads/2024/06/Siddaramaiah-On-Nandini-Milk-Price.jpg

Load More