newsfirstkannada.com

ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್​; ಪ್ರತಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

Share :

06-06-2023

    ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಸಿಎಂ

    ಗ್ಯಾರೆಂಟಿ ಯೋಜನೆಗಳಿಗೆ ವಾರೆಂಟಿ

    ಉಚಿತ ವಿದ್ಯುತ್ ಬಳಕೆಗೆ ಅವಕಾಶ

ಕಾಂಗ್ರೆಸ್​ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳಿಗೆ ವಾರೆಂಟಿ ನೀಡಿದೆ. ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರಲು ಕೈ ಹಾಕಿದೆ. ಈ ಮಧ್ಯೆ ಗೃಹಜ್ಯೋತಿ ಯೋಜನೆ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಪ್ರತಿಪಕ್ಷ ಬಿಜೆಪಿ, ವಿದ್ಯುತ್​ ವಿಚಾರದಲ್ಲಿ ಸರ್ಕಾರ ಜನರಿಗೆ ದೋಖಾ ಮಾಡ್ತಿದೆ ಎಂದು ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಮಿತಿ ನಿಗದಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಪಕ್ಷಗಳ ಟೀಕೆಗೆ ಸಿದ್ದರಾಮಯ್ಯ ಖಡಕ್​ ತಿರುಗೇಟು

ಹೌದು! ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರಕ್ಕೆ ಬಂದ್ರೆ, ಪ್ರತಿ ಮನೆಗೂ 200 ಯುನಿಟ್​ವರೆಗೆ ಉಚಿತ ವಿದ್ಯುತ್​ ನೀಡೋದಾಗಿ ಗ್ಯಾರೆಂಟಿ ವಾಗ್ದಾನ ನೀಡಿತ್ತು. ಆದ್ರೆ ಅಧಿಕಾರಕ್ಕೆ ಬಂದ ಮೇಲೆ, ಗೃಹಜ್ಯೋತಿ ಯೋಜನೆಯಡಿ ವಿದ್ಯುತ್​ ಬಳಕೆಗೆ ಕೆಲ ಕಂಡೀಷನ್​ ಹಾಕಿತ್ತು. ವಾರ್ಷಿಕ ವಿದ್ಯುತ್​ ಬಳಕೆಯ ಆಧಾರದ ಮೇಲೆ 200 ಯುನಿಟ್​ ಬಳಕೆಗೆ ಮಿತಿ ನಿಗಧಿ ಪಡಿಸಿತ್ತು. ಮೊದಲು 200 ಯುನಿಟ್​ ಫ್ರೀ ಅಂದು. ಈಗ ಸರ್ಕಾರ ಕಂಡೀಷನ್​ ಆಗ್ತಿದೆ ಅಂತ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿತ್ತು. ಹಾಗೂ ಜನರಿಗೆ 200 ಯುನಿಟ್​ ಬಳಸುವಂತೆ ಕರೆ ನೀಡಿತ್ತು. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿದ ಮಾತನಾಡಿದ ಅವರು , ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ. ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ10 ರಷ್ಟು ಹೆಚ್ಚು ನೀಡಿದ್ದೇವೆ. ಆದರೆ ಬಿಜೆಪಿ, ವಿದ್ಯುತ್ ಅನ್ನು ಅನಗತ್ಯ ದುರುಪಯೋಗ ಮಾಡಲು ಕುಮ್ಮಕ್ಕು ನೀಡುವ ಮೂಲಕ ಜನರ ದಾರಿತಪ್ಪಿಸುತ್ತಿದೆ. ಮಿತವಾಗಿ ಬಳಸಿ ಅನ್ನುವುದೇ ತಪ್ಪಾ ಎಂದು ಪ್ರತಿಪಕ್ಷಗಳಿಗೆ ಖಡಕ್​ ತಿರುಗೇಟು ನೀಡಿದ್ದಾರೆ.

ಮಿತವಾಗಿ ಬಳಸಿ ಅನ್ನೋದೇ ತಪ್ಪಾ?

ಇನ್ನು ವಿದ್ಯುತ್ ವಿಚಾರದಲ್ಲಿ ಜನರಿಗೆ ಒಂದು ಕೈಯಲ್ಲಿ ಕೊಟ್ಟು, 2 ಕೈಯಲ್ಲಿ ಕಿತ್ತುಕೊಳ್ಳುವ ಮೂಲಕ ಸರ್ಕಾರ, ಜನರಿಗೆ ದೋಖಾ ಮಾಡ್ತಿದೆ ಎಂದು ಎಂದು ಮಾಜಿ ಸಿಎಂ ಆರೋಪಿಸಿದ್ದರು. ಈ ಆರೋಪಕ್ಕೂ ಸಿಎಂ ಸಿದ್ದರಾಮಯ್ಯ, ತಕ್ಕ ಉತ್ತರವನ್ನೇ ನೀಡಿದ್ದಾರೆ. ವಿದ್ಯುತ್ ದರ ಹೆಚ್ಚಳ ನಾವು ಮಾಡಿಲ್ಲ, ಕೆ.ಇ.ಆರ್.ಸಿ ನವರು ಮಾಡಿದ್ದಾರೆ. ನಾವು ಬರೋ ಮುಂಚನೆ ರೆಗ್ಯುಲೆಟರಿ ಆ್ಯಕ್ಟ್ ಪ್ರಕಾರ ದರ ಪರಿಷ್ಕರಣೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಜನಸಾಮಾನ್ಯರಿಗೆ ಮುಟ್ಟಿಸಲು ಸಿದ್ಧತೆ

ಆಗಸ್ಟ್​ 15ರಿಂದ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರಿಗೆ ಮುಟ್ಟಿಸಲು, ಮಹಿಳಾ ಕಲ್ಯಾಣ ಇಲಾಖೆ ಸರ್ವ ಸನ್ನದ್ಧವಾಗಿದೆ. ಈಗಾಗಲೇ ಇಲಾಖೆಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಯಾವುದೇ ಕಂಡೀಷನ್​ ಅಪ್ಲೈ ಮಾಡಿಲ್ಲ. ಪ್ರತಿಯೊಂದು ಕುಟುಂಬ ಇದರ ಲಾಭ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸರ್ಕಾರ, ಘೋಷಣೆ ಮಾಡಿರುವ ಗ್ಯಾರೆಂಟಿ ಯೋಜನೆಗಳನ್ನು ತಂದು, ಒಳ್ಳೆ ಹೆಸರು ಪಡೆದುಕೊಳ್ಳಲು ಕಸರತ್ತು ಮಾಡ್ತಿದೆ. ಮತ್ತೊಂದೆಡೆ ಪ್ರತಿಪಕ್ಷ ಬಿಜೆಪಿ, ಸರ್ಕಾರ ನುಡಿದಂತೆ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿಲ್ಲ ಎಂದು ಜನರನ್ನು ಎಚ್ಚರಿಸುವ ಕೆಲಸ ಮಾಡ್ತಿದೆ. ಈ ಎರಡೂ ಪಕ್ಷಗಳ ರಾಜಕೀಯ ಕೆಸರೆರಚಾಟದಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗದಿದ್ರೆ ಅಷ್ಟೇ ಸಾಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್​; ಪ್ರತಿಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

https://newsfirstlive.com/wp-content/uploads/2023/06/Siddu_DKS.jpg

Load More