newsfirstkannada.com

ಸಿದ್ದು ಶಿಷ್ಯ​​ಗೆ ಬೆಳಗಾವಿ, ಗೌಡರ ಕೋಟೆಗೆ ರಾಜಣ್ಣ; ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಯಲ್ಲೂ ಗ್ಯಾರಂಟಿ ಗೆಲ್ಲೋ ಲೆಕ್ಕ

Share :

09-06-2023

    ತುಮಕೂರಿನಲ್ಲಿ ಪರಮೇಶ್ವರ್ ಪಾರಮ್ಯ, ಗೌಡರೂರಿಗೆ ರಾಜಣ್ಣ

    ಸಿದ್ದು ಶಿಷ್ಯ ಸತೀಶ್​​ಗೆ ಬೆಳಗಾವಿ, ಕೃಷ್ಣನೂರಿಗೆ ಲಕ್ಷ್ಮೀ ಹೆಬ್ಬಾಳ್ಕರ್‌

    ರಾಮುಲುಗೆ ನಾಗೇಂದ್ರ ಸೆಡ್ಡು, ವಿಜಯನಗರಕ್ಕೆ ಜಮೀರ್​ ವಲಸೆ

ಲೋಕಸಭಾ ಎಲೆಕ್ಷನ್​​​ ಹಿನ್ನಲೆ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮಾಡಿದ್ದಾರೆ. ಅಳೆದು ತೂಗಿ ಜಿಲ್ಲೆಗಳ ಹೊಣೆ ಒಪ್ಪಿಸಿದ್ದಾರೆ. ಈ ಜವಾಬ್ದಾರಿಯಲ್ಲೂ ಸಿಎಂ ಜಾಣತನ ಮೆರೆದಿದ್ದಾರೆ. ಇಲ್ಲೂ ಕೂಡ ಸಿದ್ದು-ಡಿಕೆಶಿ ತಮ್ಮ ಆಪ್ತರನ್ನ ಆಯಕಟ್ಟಿನ ಜಿಲ್ಲೆಗಳಲ್ಲಿ ಪ್ರತಿಷ್ಠಾಪಿಸುವಲ್ಲಿ ಸಫಲರಾಗಿದ್ದಾರೆ. ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಸರ್ಕಾರ, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದೆ. ಈ ಸಚಿವರ ನೇಮಕವೇ ಸಿಎಂ ಸಿದ್ದುಗೆ ದೊಡ್ಡ ತಲೆನೋವಾಗಿದ್ದು, ಕೊನೆಗೂ ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದ್ದಾರೆ. ಖಾತೆ ಹಂಚಿಕೆ ಆದ್ರೂ ಉಸ್ತುವಾರಿ ಜಿಲ್ಲೆಗಳದ್ದೆ ಸಿಎಂಗೆ ಹೆಚ್ಚು ವರಿ ಆಗಿತ್ತು. ಕೆಲ ಜಿಲ್ಲೆಗಳ ವಿಚಾರದಲ್ಲಿ ತಲೆದೂರಿದ್ದ ಬಿಕ್ಕಟ್ಟನ್ನ ಶಮನ ಮಾಡಲಾಗಿದೆ.

ಸಚಿವರಿಗೆ ಉಸ್ತುವಾರಿ ಜಿಲ್ಲೆಗಳನ್ನ ಹಂಚಿದ ಸಿಎಂ
ಡಿಸಿಎಂ ಡಿಕೆಶಿಗೆ ಬೆಂಗಳೂರು ನಗರದ ಜವಾಬ್ದಾರಿ

ಮುಖ್ಯವಾಗಿ ಬೆಂಗಳೂರು ಉಸ್ತುವಾರಿಗೆ ಭಾರೀ ಪೈಪೋಟಿ ನಡುವೆ ಡಿಸಿಎಂ ಡಿಕೆಶಿ ಮತ್ತೊಮ್ಮೆ ಪ್ರಾಬಲ್ಯ ಮೆರೆದಿದ್ದಾರೆ. ಬೆಂಗಳೂರು ಅಭಿವೃದ್ಧಿ ಇಲಾಖೆ ಡಿಕೆಶಿ ಬಳಿ ಇರುವ ಕಾರಣಕ್ಕೆ ಉಸ್ತುವಾರಿ ತಮಗೆ ಬೇಕು ಅಂತ ಪಟ್ಟು ಹಿಡಿದಿದ್ದರು. ಬೃಹತ್​​ ಬೆಂಗಳೂರು ಮೇಲೆ ಕೆ.ಜೆ ಜಾರ್ಜ್​ ಕಣ್ಣಿಟ್ಟಿದ್ದರು. ರಾಮಲಿಂಗಾ ರೆಡ್ಡಿಗೂ ಆಸಕ್ತಿ ಇತ್ತು. ಅಂತಿಮವಾಗಿ ಡಿಕೆಶಿ ಸಿಲಿಕಾನ್​ ಸಿಟಿ ಕಬ್ಜಾ ಮಾಡಿದ್ದಾರೆ.
ಬೆಂಗಳೂರಿಗಾಗಿ ಪೈಪೋಟಿಗಿಳಿದಿದ್ದ ಜಾರ್ಜ್​​ರನ್ನ ಚಿಕ್ಕಮಗಳೂರಿಗೆ ರವಾನಿಸಲಾಗಿದೆ. ಇತ್ತ ತವರು ಜಿಲ್ಲೆಯ ಉಸ್ತುವಾರಿಯನ್ನ ಡಿಸಿಎಂ ಡಿಕೆಶಿ​, ತಮ್ಮ ಆಪ್ತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಗೆ ಒಪ್ಪಿಸಿದ್ದಾರೆ. ತವರು ಮೈಸೂರಿಗೆ ತಮ್ಮ ಆಪ್ತಮಿತ್ರ ಮಹದೇವಪ್ಪಗೆ ಸಿಎಂ ಹೊಣೆ ನೀಡಿದ್ದಾರೆ. ಅದೇ ಜಿಲ್ಲೆಯ ಇನ್ನೊಬ್ಬ ಸಚಿವ ವೆಂಕಟೇಶ್​​​ಗೆ ನೆರೆಯ ಚಾಮರಾಜನಗರ ನೀಡಲಾಗಿದೆ. ತುಮಕೂರು ಉಸ್ತುವಾರಿ ರಾಜಣ್ಣ ಕೈತಪ್ಪಿ, ಗೃಹ ಸಚಿವ ಪರಮೇಶ್ವರ್​ಗೆ ಸಿಕ್ಕಿದೆ. ಇದರೊಂದಿಗೆ ತುಮಕೂರು ಉಸ್ತುವಾರಿ ಪಡೆಯುವಲ್ಲಿ ಪರಮೇಶ್ವರ್ ಮೇಲುಗೈ ಸಾಧಿಸಿದ್ದಾರೆ. ರಾಜಣ್ಣಗೆ ಗೌಡರ ಕೋಟೆ ಕಾಯಲು ಬೀಡಲಾಗಿದೆ. ಗೌಡರ ರಾಜಕೀಯ ವಿರೋಧಿ ಕೆ.ಎನ್​​​​ ರಾಜಣ್ಣಗೆ ಹಾಸನದ ಜವಾಬ್ದಾರಿ ನೀಡಿದ ಕಾಂಗ್ರೆಸ್​​, ಭವಿಷ್ಯದಲ್ಲಿ ಹಾಸನ ಸಿಂಹಾಸನದ ತಂತ್ರ ರೂಪಿಸಿದಂತೆ ಕಾಣ್ತಿದೆ.

ಸಿದ್ದು ಶಿಷ್ಯ ಸತೀಶ್​​ಗೆ ಬೆಳಗಾವಿ, ಕೃಷ್ಣನೂರಿಗೆ ಲಕ್ಷ್ಮೀ!

ಇತ್ತ, ದೊಡ್ಡ ಜಿಲ್ಲೆ ಬೆಳಗಾವಿ ಮತ್ತೊಮ್ಮೆ ಜಾರಕಿಹೊಳಿ ಫ್ಯಾಮಿಲಿ ತೆಕ್ಕೆಗೆ ಜಾರಿದ್ದು, ತಮ್ಮ ಆಪ್ತ ಸತೀಶ್​​​ಗೆ ಸಿದ್ದು ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ಇದೇ ಜಿಲ್ಲೆಯ ಹೆಬ್ಬಾಳ್ಕರ್​​ರ ಹೆಬ್ಬಯಕೆ ಕಮರಿದ್ದು, ಕೃಷ್ಣನೂರು ಉಡುಪಿ ಹೊಣೆ ನೀಡಿ ಟಾರ್ಗೆಟ್​​​ ಫಿಕ್ಸ್​​ ಮಾಡಲಾಗಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಕರಂದ್ಲಾಜೆಗೆ ಟಕ್ಕರ್​​ ಕೊಡಲು ಮಹಿಳಾ ಮಣಿಯನ್ನೇ ಕಾಂಗ್ರೆಸ್​​​ ಅಖಾಡಕ್ಕೆ ರವಾನಿಸಿದಂತೆ ಕಾಣ್ತಿದೆ. ಕ್ರೀಡಾ ಸಚಿವ ನಾಗೇಂದ್ರ, ತವರು ಬಳ್ಳಾರಿ ಉಸ್ತುವಾರಿ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಮತ್ತೊಮ್ಮೆ ರಾಮುಲು ಕಣಕ್ಕಿಳಿಯುವ ಸಾಧ್ಯತೆ ಕಾರಣಕ್ಕೆ ಬಳ್ಳಾರಿ ಲೋಕಸಭೆ ಗೆಲ್ಲಲು ನಾಗೇಂದ್ರಗೆ ಗುರಿ ನೀಡಲಾಗಿದೆ. ನಾಗೇಂದ್ರ ಬೆನ್ನಿಗೆ ಜಮೀರ್ ಅಹ್ಮದ್ ನಿಲ್ಲಲಿದ್ದು, ನೆರೆಯ ವಿಜಯನಗರ ಜವಾಬ್ದಾರಿ ನೀಡಲಾಗಿದೆ. ಆದ್ರೆ, ತುಮಕೂರು, ಕೋಲಾರ, ಬೆಂಗಳೂರು ರಾಜಕಾರಣ ಮಾಡಿದ್ದ ಜಮೀರ್​​​, ಬಿಸಿಲೂರಲ್ಲಿ ಬೆವರು ಹರಿಸಬೇಕಿದೆ.

ಶಿವಮೊಗ್ಗ ಜಿಲ್ಲೆಯನ್ನ ತೆಕ್ಕೆಗೆ ಪಡೆಯಲು ಮಧುಗೆ ಜವಾಬ್ದಾರಿ!
ನೆರೆಯವರಿಗೆ ತವರು, ಕೊಡಗಿಗೆ ರಾಯಚೂರಿನ ಬೋಸರಾಜ್

​​

ಯಥಾ ಪ್ರಕಾರ ಶಿವಮೊಗ್ಗವನ್ನ ಮಧು ಬಂಗಾರಪ್ಪ ಕೈಗೆ ನೀಡಲಾಗಿದೆ. ಈ ಹಿಂದೆ ಶಿವಮೊಗ್ಗದ ಈ ಹಿಂದಿನ ಸೋಲುಗಳಿಗೆ ಸೇಡು ತೀರಿಸಲು ಯಡಿಯೂರಪ್ಪ ಕುಟುಂಬ ಮಣಿಸಲು, ಮಧು ಅನಿವಾರ್ಯ ಅಂತ ಹಸ್ತಪಡೆ ಭಾವಿಸಿದೆ. ಇತ್ತ ಕಲಬುರ್ಗಿ ಜಿಲ್ಲೆಯಲ್ಲಿ ಖರ್ಗೆಗೆ ಉಸ್ತುವಾರಿ ಕೊಟ್ಟ ಕಾಂಗ್ರೆಸ್​​​ ಶರಣ್​​​ ಪ್ರಕಾಶ್​​ರನ್ನ ಪಕ್ಕದ ರಾಯಚೂರಿಗೆ ರವಾನಿಸಿದೆ. ಕುತೂಹಲವೆಂದ್ರೆ, ಇದೇ ರಾಯಚೂರು ಜಿಲ್ಲೆಯ ಬೋಸರಾಜುರನ್ನ ಬಿಸಿಲಿನಿಂದ ಮಂಜಿನೂರು ಕೊಡಗಿಗೆ ಕಳುಹಿಸಲಾಗಿದೆ. ಇತ್ತ, ಬೀದರ್​​​​ನ ರಹೀಂಖಾನ್​, ಕೃಷ್ಣ ಬೈರೇಗೌಡಗೆ ಯಾವುದೇ ಜಿಲ್ಲೆಯನ್ನ ಹಂಚಿಕೆ ಮಾಡಿಲ್ಲ. ಜೊತೆಗೆ ಸಿಎಂ ಸಿದ್ದರಾಮಯ್ಯ ತಮಗೆ ಯಾವುದೇ ಜಿಲ್ಲೆಯನ್ನ ತಮಗೆ ಹಂಚಿಕೆ ಮಾಡಿಕೊಂಡಿಲ್ಲ. ಒಟ್ಟಾರೆ, ಲೋಕಸಭಾ ಚುನಾವಣೆ ಹಿನ್ನಲೆ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಕಾಂಗ್ರೆಸ್‌ ಪಣತೊಟ್ಟಿದ್ದು, ಈ ಎಲ್ಲಾ ಸಚಿವರಿಗೂ ಒಪ್ಪಿಸಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್​​​ ಗೆಲ್ಲಿಸಲು ಹೊಣೆ ಹೊರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು ಶಿಷ್ಯ​​ಗೆ ಬೆಳಗಾವಿ, ಗೌಡರ ಕೋಟೆಗೆ ರಾಜಣ್ಣ; ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಯಲ್ಲೂ ಗ್ಯಾರಂಟಿ ಗೆಲ್ಲೋ ಲೆಕ್ಕ

https://newsfirstlive.com/wp-content/uploads/2023/06/siida.jpg

Load More