ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಭೆ
ಆರು ಜಿಲ್ಲೆಗಳ ಸಚಿವರು, ಶಾಸಕರೊಂದಿಗೆ ಸಿಎಂ ಚರ್ಚೆ
ಜಿಲ್ಲೆಯ ಸಮಸ್ಯೆಗಳು , ಪರಿಹಾರ, ಅನುದಾನ, ವರ್ಗಾವಣೆ
ಮೂರು ತಿಂಗಳಷ್ಟೇ ಹಿಂದೆ ಜನ್ಮತಾಳಿರುವ ಸಿದ್ದರಾಮಯ್ಯ ಸರ್ಕಾರ ಒಳಬೇಗುದಿಯಲ್ಲಿ ಬೇಯುತ್ತಿದೆ. ಗ್ಯಾರಂಟಿ ಹೊರೆಗಳ ನಡುವೆ ಸಚಿವರು-ಶಾಸಕರ ನಡುವೆ ಕಮ್ಯುನಿಕೇಷನ್ ಗ್ಯಾಪ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪಕ್ಷದೊಳಗಿನ ಭಿನ್ನಮತ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಈ ನಡುವೆ ನಾಳೆ ಸಿಎಂ ಸಿದ್ದರಾಮಯ್ಯ ಸಚಿವರು, ಶಾಸಕರಿಗೆ ನೀತಿಪಾಠ ಹೇಳಲು ಸಜ್ಜಾಗಿದ್ದಾರೆ.
ಸಿದ್ದರಾಮಯ್ಯ-ಡಿಕೆಶಿ ನೇತೃತ್ವದ ಜೋಡೆತ್ತಿನ ಸರ್ಕಾರಕ್ಕೆ ತಾ‘ಪತ್ರ’ಯಗಳ ಹೊರೆ ಕಾಡುತ್ತಿದೆ. 20ಕ್ಕೂ ಹೆಚ್ಚು ಸಚಿವರ ವಿರುದ್ಧ ಹಲವು ಶಾಸಕರು ಪತ್ರ ಸಮರ ನಡೆಸಿದ್ದು, ಇದು ಬಿರುಗಾಳಿಯನ್ನೇ ಎಬ್ಬಿಸಿದೆ. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ ಅವರ ದುರಂಹಕಾರಕ್ಕೆ ಬುದ್ಧಿ ಹೇಳಿ ಅಂತ ಸಿಎಂಗೆ ಪತ್ರ ಬರೆದಿದ್ದ ಬಳಿಕ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕೂಡ ನಡೆಸಿದ್ದರು. ಇದಾದ ಬಳಿಕವೂ ಪಕ್ಷದಲ್ಲೂ ಅಸಮಾಧಾನ ಹೊಗೆಯಾಡುತ್ತಲೇ ಇದ್ದು ಈಗ ಪಕ್ಷದೊಳಗಿನ ಭಿನ್ನಮತವನ್ನು ಸಂಪೂರ್ಣವಾಗಿ ಕಿತ್ತು ಹಾಕಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ.
ಸಚಿವರ ಮೇಲೆ ಶಾಸಕರ ಅತೃಪ್ತಿ.. ಮಂಡೇ ಮೀಟಿಂಗ್
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳು ಕಳೆದಿದ್ದು, ಈ ನಡುವೆಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವರ ಹಾಗೂ ತಮ್ಮದೇ ಪಕ್ಷದ ಕಾಂಗ್ರೆಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಶಾಸಕರು ಪತ್ರ ಬರೆದಿದ್ದ ಬಳಿಕ ಬೆಂಗಳೂರಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದ ಸಿದ್ದರಾಮಯ್ಯ ಶಾಸಕರ ಮುನಿಸು ತಣಿಸುವ ಕೆಲಸಕ್ಕೆ ಕೈ ಹಾಕಿದ್ದರು. ಇಷ್ಟಾದರೂ ಪಕ್ಷದಲ್ಲಿ ಭಿನ್ನಮತ ಕೊನೆಗೊಂಡಿಲ್ಲ. ಇದಾದ ಬಳಿಕ ದೆಹಲಿಯಲ್ಲಿ ರಾಜ್ಯ ಕೈ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿ ಭ್ರಷ್ಟಾಚಾರರಹಿತ ಆಡಳಿತ ನೀಡಬೇಕು ಅಂತ ಸೂಚನೆ ನೀಡಿದ್ದರು. ವರ್ಗಾವಣೆ ದಂಧೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳ ನಡುವೆ ಶಾಸಕರು ಕೂಡ ಸಚಿವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಸಚಿವರು ಹಾಗೂ ಶಾಸಕರ ನಡುವಿನ ಮುನಿಸಿಗೆ ಮದ್ದು ಅರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದು ನಾಳೆ 6 ಜಿಲ್ಲೆಗಳ ಸಚಿವರು ಹಾಗೂ ಶಾಸಕರ ಜೊತೆ ಮಹತ್ವದ ಸಭೆ ಕರೆದಿದ್ದಾರೆ.
ಶಾಸಕರ ಅಹವಾಲು ಆಲಿಸಲಿರುವ ಸಿಎಂ ಸಿದ್ದರಾಮಯ್ಯ
ನಾಳೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಹಾಗೂ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಸಭೆ ನಡೆಯಲಿದೆ. ವಿವಿಧ ಜಿಲ್ಲೆಯ ಸಮಸ್ಯೆಗಳು , ಪರಿಹಾರ, ಅನುದಾನ, ವರ್ಗಾವಣೆ ವಿಚಾರ ಹಾಗೂ ಸಚಿವರು-ಶಾಸಕರ ನಡುವೆ ಸಮನ್ವಯ ಕೊರತೆ ಬಗ್ಗೆ ಚರ್ಚೆ ನಡೆಯಲಿದೆ. ಶಾಸಕರ ಅಹವಾಲು ಆಲಿಸಿ ಸಚಿವರ ಮೂಲಕ ಕೆಲಸ ಮಾಡಿಸಲು ಸಿಎಂ ಪ್ಲಾನ್ ಮಾಡಿದ್ದಾರೆ.
ಶೂನ್ಯ ಭ್ರಷ್ಟಾಚಾರದ ಸರ್ಕಾರ ನಡೆಸುವಂತೆ ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದೆ. ಮತ್ತೊಂದೆಡೆ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ವಿರೋಧ ಪಕ್ಷಗಳು ಇದನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ರೂಪಿಸುತ್ತಿದೆ. ಮತ್ತೊಂದು ಕಡೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಅಸಮಾಧಾನವೂ ಪಕ್ಷಕ್ಕೆ ಮುಜುಗರ ತರಿಸಿದೆ. ಪಂಚ ಗ್ಯಾರಂಟಿಗಳನ್ನು ಜಾರಿ ಮಾಡುವ ಜೊತೆಗೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯನ್ನೂ ಗೆಲ್ಲುವುದು ಕೈಪಡೆಯ ಲೆಕ್ಕಾಚಾರ ಆಗಿದೆ. ಇದಕ್ಕೂ ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ಪಡೆದು ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಯತ್ನ ನಡೆಸ್ತಿದೆ.
ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಅಂತ ಹೇಳಿಕೊಳ್ತಿದೆ.. ಆದ್ರೆ ಪಕ್ಷದೊಳಗಿನ ಅಸಮಾಧಾನ ಕಸಿವಿಸಿ ಉಂಟು ಮಾಡ್ತಿದೆ. ಹೀಗಾಗಿ ನಾಳೆ ಸಭೆ ನಡೆಸಿ ಎಲ್ಲರ ಅಸಮಾಧಾನಗಳನ್ನು ತಣಿಸುವ ಕೆಲಸಕ್ಕೆ ಸಿಎಂ ಕೈ ಹಾಕಿದ್ದು ಇದರ ಫಲಿತಾಂಶ ಏನು ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ