newsfirstkannada.com

ಅಂಬಾರಿ ಹೊತ್ತು ಹೊರಟ ಕ್ಯಾಪ್ಟನ್​ ಅಭಿಮನ್ಯು.. ಮೈಸೂರು ಜಂಬೂ ಸವಾರಿಯ ಅದ್ಭುತ ವಿಡಿಯೋ ಇಲ್ಲಿದೆ

Share :

24-10-2023

    5 ಕಿ.ಮೀ ದೂರ 750 ಕೆ.ಜಿ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯು

    ಅದ್ಧೂರಿ ಜಂಬೂಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

    ಅಂಬಾರಿ ಸಾಗುತ್ತಿರುವ ರಸ್ತೆಗಳಲ್ಲಿ 6 ಸಾವಿರ ಪೊಲೀಸರ ನಿಯೋಜನೆ

ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಕಳೆಗಟ್ಟಿದೆ. ಅದ್ಧೂರಿ 414ನೇ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. 750 ಕೆ.ಜಿಯ ಅಂಬಾರಿ ಹೊತ್ತಿಕೊಂಡಿರುವ ಅಭಿಮನ್ಯು ಆನೆ ರಾಜಗಾಂಭೀರ್ಯದಿಂದ ರಾಜಬೀದಿಗಳಲ್ಲಿ ದೊಡ್ಡ ಮೆರವಣಿಗೆಯ ಮೂಲಕ ಹೆಜ್ಜೆ ಹಾಕುತ್ತ 5 ಕಿಲೋ ಮೀಟರ್​ ದೂರದ ಬನ್ನಿ ಮಂಟಕ್ಕೆ ತೆರಳಲಿದ್ದಾನೆ. ಬಳಿಕ ಅಲ್ಲಿ ವಿಶೇಷವಾದ ಪೂಜೆ ನೆರವೇರಲಿದೆ.

ಸದ್ಯ ಅರಮನೆ ನಗರಿ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು ಜನ ಜಂಗುಳಿ ನಡುವೆಯ ಸಂಭ್ರಮದ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ರಾಜಗಾಂಭೀರ್ಯದಿಂದ ಕ್ಯಾಪ್ಟನ್​ ಅಭಿಮನ್ಯು ಅಂಬಾರಿಯನ್ನು ಹೊತ್ತುಕೊಂಡು ಸಾಂಸ್ಕೃತಿಕ ನಗರಿಯಲ್ಲಿ ಹೋಗುತ್ತಿದ್ದಾನೆ.

ಅಭಿಮನ್ಯು ಜೊತೆ ಲಕ್ಷ್ಮಿ, ವಿಜಯಾ, ಕುಮ್ಕಿ, ಹಿರಣ್ಯ, ವರಲಕ್ಷ್ಮಿ ಮಹೇಂದ್ರ, ಭೀಮ ಸೇರಿದಂತೆ ಒಟ್ಟು 14 ಆನೆಗಳು ಈ ಬಾರಿ ದಸರಾದಲ್ಲಿ ಪಾಲ್ಗೊಂಡಿವೆ. ಎಲ್ಲ ಆನೆಗಳು ವಿಶೇಷವಾಗಿ ಸಿಂಗಾರ ಮಾಡಿಕೊಂಡಿದ್ದು ಜನ ಸಾಗದ ನಡುವೆ ರಾಜಗಾಂಭೀರ್ಯದಿಂದ ತೆರಳುತ್ತಿವೆ.

ಶ್ರೀ ಚಾಮುಂಡಿ ದೇವಿ

ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿ ದೇವಿಯನ್ನು ಹೂವುಗಳಿಂದ ಶೃಂಗಾರ ಮಾಡಲಾಗಿದೆ. ನಾಡಿನ ಅಧಿದೇವತೆಯನ್ನು ಹೊತ್ತುಕೊಂಡು ಅಭಿಮನ್ಯು ಸಾಗುತ್ತಿದ್ದಾನೆ. ಅರಮನೆಯಲ್ಲಿ ದಸರಾ ಉತ್ಸವ ಕಳೆಗಟ್ಟಿದ್ದು ಲಕ್ಷಾಂತರ ಜನರು ಇದರಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಜಂಬೂ ಸವಾರಿ ಸಾಗುತ್ತಿರುವ ರಸ್ತೆಗಳಲ್ಲಿ ಸುಮಾರು 6 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾರಿ ಹೊತ್ತು ಹೊರಟ ಕ್ಯಾಪ್ಟನ್​ ಅಭಿಮನ್ಯು.. ಮೈಸೂರು ಜಂಬೂ ಸವಾರಿಯ ಅದ್ಭುತ ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/10/MYS_DASARA_CM_SIDDARAMAIAH.jpg

Load More