newsfirstkannada.com

ತೆಲಂಗಾಣ ಚುನಾವಣೆಗೆ ಇಂದು ಸಿದ್ದರಾಮಯ್ಯ ಎಂಟ್ರಿ; ಕೆಸಿಆರ್‌ ಸೋಲಿಸಲು ಭರ್ಜರಿ ರಣತಂತ್ರ; ಏನದು?

Share :

10-11-2023

    ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ VS ಬಿಆರ್‌ಎಸ್ ಫೈಟ್‌

    ಪ್ರಚಾರಕ್ಕೆ ಆಗಮಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ

    ಸಿಎಂ ಕೆಸಿಆರ್​ ಸ್ಪರ್ಧಿಸಿರುವ ಕಾಮರೆಡ್ಡಿ ಕ್ಷೇತ್ರದಲ್ಲಿ ಸಿದ್ದು ಮತಬೇಟೆ

ಹೈದರಾಬಾದ್‌: ಕಾಂಗ್ರೆಸ್‌, ಬಿಆರ್‌ಎಸ್ ಪಕ್ಷದ ಜಿದ್ದಾಜಿದ್ದಿಗೆ ಕಾರಣವಾಗಿರುವ ತೆಲಂಗಾಣ ವಿಧಾನಸಭಾ ಚುನಾವಣೆ ರಂಗೇರಿದೆ. ಸಿಎಂ ಸಿದ್ದರಾಮಯ್ಯ ಇಂದು ತೆಲಂಗಾಣ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ತೆಲಂಗಾಣ ಕಾಂಗ್ರೆಸ್​ ಘಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿತ್ತು. ಈ ಹಿನ್ನೆಲೆ, ಇಂದು ಇಡೀ ದಿನ ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಮತಯಾಚನೆ ಮಾಡಲಿದ್ದಾರೆ.

ಕಾಮರೆಡ್ಡಿ ಕ್ಷೇತ್ರದಲ್ಲಿ ಕೆಸಿಆರ್‌ ಸೋಲಿಸಲು ಪಣ

ಈ ಬಾರಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ಸ್ಪರ್ಧಿಸಿರುವ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆ ಮಾಡಿದ್ದಾರೆ.

ಇಂದು ಸಿಎಂ ಕೆಸಿಆರ್‌ ಸ್ಪರ್ಧಿಸಿರುವ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ರೇವಂತ್‌ ರೆಡ್ಡಿ ಪರ ನಡೆಯುವ ಕಾಂಗ್ರೆಸ್ ಬಹಿರಂಗ ಸಭೆಯಲ್ಲೂ ಭಾಗಿಯಾಗಲಿದ್ದಾರೆ.

ನವೆಂಬರ್ 30ರಂದು ತೆಲಂಗಾಣ ವಿಧಾನಸಭೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಮೆಗಾ ರಿಸಲ್ಟ್ ಹೊರ ಬೀಳಲಿದೆ. ಇನ್ನು, ಇದೇ ತಿಂಗಳ ಕೊನೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಘಡ ಚುನಾವಣಾ ಪ್ರಚಾರಕ್ಕೂ ಸಿಎಂ ಸಿದ್ದರಾಮಯ್ಯ ತೆರಳುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣ ಚುನಾವಣೆಗೆ ಇಂದು ಸಿದ್ದರಾಮಯ್ಯ ಎಂಟ್ರಿ; ಕೆಸಿಆರ್‌ ಸೋಲಿಸಲು ಭರ್ಜರಿ ರಣತಂತ್ರ; ಏನದು?

https://newsfirstlive.com/wp-content/uploads/2023/11/Siddaramaiah-Cm-KCr.jpg

Load More