ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಶುರುವಾದ ಸಿಎಂ ಆಗುವ ಕನಸು
ನಾನು ಒಂದಲ್ಲಾ ಒಂದು ದಿನ ಸಿಎಂ ಆಗುತ್ತೇನೆ ಎಂದಿದ್ದೇಕೆ ಎಂಬಿಪಿ
ಶಿವಾನಂದ ಪಾಟೀಲ್ ಸಿನಿಯಾರಿಟಿ ಪ್ರಶ್ನೆಗೆ ಕೌಂಟರ್ ಕೊಟ್ಟ ಎಂಬಿಪಿ
ಬೆಂಗಳೂರು: ಸಿದ್ದು ಚೇರ್ ಆಪತ್ತು ಇದ್ಯಾ? ಹಾಗಾದ್ರೆ ಸಿದ್ದು ಉತ್ತರಾಧಿಕಾರಿ ಯಾರು? ಯಾರಿಗೆ ಮುಂದಿನ ಸಿಎಂ ಪಟ್ಟ? ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೀತಿದ್ಯಾ? ಪ್ರಶ್ನೆಗಳು ಹತ್ತಾರು ಇವೆ. ಆದ್ರೆ, ಉತ್ತರ ಮಾತ್ರ ಸಿಎಂ ಸೀಟ್ಗೆ ನಡೀತಿರುವ ರೇಸ್. ಇವತ್ತು ಎಂ.ಬಿ.ಪಾಟೀಲ್ ನೇರವಾಗೇ ಎಂಟ್ರಿಕೊಟ್ಟಿದ್ದಾರೆ.
ಶಾಲೆಯಲ್ಲಿ ಬೆಳಗ್ಗೆ ಬೆಳಗ್ಗೆ ಮಕ್ಕಳ ಪ್ರೇಯರ್. ಅನ್ನಭಾಗ್ಯದ ಅಕ್ಕಿ ಸಿಗುವ ನ್ಯಾಯಬೆಲೆ ಅಂಗಡಿ. ರಾಜ್ಯದ ಸಿಎಂ ಕುರ್ಚಿ.. ಇವುಗಳಲ್ಲಿ ಒಂದು ಕಾಮನ್ ಫ್ಯಾಕ್ಟರ್ ಸರತಿ ಸಾಲು. ರಾಜ್ಯದ ಸಿಎಂ ಸೀಟ್ಗಾಗಿ ಬೀಳ್ತಿರುವ ಟವಲ್ಗಳು, ಹನುಮನ ಬಾಲವನ್ನೇ ಮೀರಿಸುತ್ತಾ ಪ್ರಶ್ನೆ ಎದ್ದಿದೆ. ಕ್ಷಣಕ್ಕೊಂದು ತಂತ್ರ, ದಿನಕ್ಕೊಂದು ದಾಳ ಉರುಳ್ತಿದ್ದು, ಸೀಟ್ ಫೈಟ್ ಸೀನ್ ಹಾಲಿವುಡ್ನೇ ಮೀರಿಸ್ತಿದೆ.
ಸಿಎಂ ರೇಸ್ಗೆ ಕೊನೆಗೂ ಎಂಟ್ರಿಕೊಟ್ಟ ಎಂಬಿ ಪಾಟೀಲ್
ಚೇರ್ನಲ್ಲಿ ಸಿದ್ದು ಇದ್ದರೂ ಕಾಂಗ್ರೆಸ್ನಲ್ಲಿ ಮ್ಯೂಸಿಕಲ್ ಚೇರ್ ಗೇಮ್ಗೆ ನಿತ್ಯವೊಬ್ಬರ ಎಂಟ್ರಿ ಆಗ್ತಿದೆ. ಸಿನಿಯಾರಿಟಿ ದಾಳ ಉರುಳಿಸ್ತಿರುವ ಹಸ್ತದೊಳಗಿನ ಈ ಪಾಂಡವರ ತಂಡ, ಗುಪ್ತ ಕದನ ಮೀರಿ, ಕುರುಕ್ಷೇತ್ರಕ್ಕೆ ಕಹಳೆ ಮೊಳಗಿಸುವ ಕಾಲ ಸನ್ನಿಹಿತಗೊಳಿಸ್ತಿದೆ. ಸದ್ಯ ಸರ್ಕಾರದ ನಂಬರ್ 2 ಸ್ಥಾನದಲ್ಲಿರುವ ಡಿಕೆಶಿ, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಫ್ರಂಟ್ಲೈನ್ನಲ್ಲಿದ್ರೆ, ಬ್ಯಾಕ್ಸೈಡ್ನಲ್ಲಿ ಎಂ.ಬಿ.ಪಾಟೀಲ್ ಟವಲ್ ಜೊತೆ ನಿಂತಿದ್ದಾರೆ. ಇನ್ನು, ಮೊನ್ನೆ ನನ್ನ ಹತ್ರ ಸಿನಿಯರ್ ಸಿಟಿಜನ್ ಪಾಸ್ ಇದೆ ಅಂತ ದೇಶಪಾಂಡೆ, ಸಿದ್ದು ಬಲಕ್ಕಾಗಿ ಕಾದಿದ್ದಾರೆ.
ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್? ನಾನ್ ರೆಡಿ ಎಂದ ಸೀಕ್ರೆಟ್ ಏನು? VIDEO
ಆಸೆ ಅನ್ನೋದು ಸಹಜ ಮೆಂಬರ್ ಆದವನಿಗೆ ಎಂಎಲ್ಎ ಆಸೆ, ಎಂಎಲ್ಎಗೆ ಮಂತ್ರಿ ಆಗುವ ಆಸೆ.. ಮಂತ್ರಿ ಆದ ಬಳಿಕ ಮುಖ್ಯಮಂತ್ರಿ ಆಗಬೇಕು.. ಈಗ ಸಿಎಂ ಕುರ್ಚಿ ಕದನಕ್ಕೆ ಎಂ.ಬಿ.ಪಾಟೀಲ್ ರಂಗಪ್ರವೇಶ ಆಗಿದೆ.. ನನಗೂ ಸಿಎಂ ಆಗುವ ಆಸೆ ಇದೆ ಅಂತ ಹೇಳಿದ ಪಾಟೀಲ್, ಸದ್ಯ ಸಿಎಂ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಅಂದ್ರು.
ಇದನ್ನೂ ಓದಿ:ಜಾರಕಿಹೊಳಿ ಸೈಲೆಂಟ್ ನಡೆ ಕುತೂಹಲ.. ಸಂಚಲನ ಸೃಷ್ಟಿಸಿದ ಹೈಕಮಾಂಡ್ ರಹಸ್ಯ ಭೇಟಿ.. ಕಾಂಗ್ರೆಸ್ನಲ್ಲಿ ಏನಾಗ್ತಿದೆ?
ನಿನ್ನೆ ಎಂಬಿ ಪಾಟೀಲ್ ಸಿನಿಯಾರಿಟಿ ಪ್ರಶ್ನಿಸಿದ್ದ ತಮ್ಮದೇ ಜಿಲ್ಲೆಯ ಶಿವಾನಂದ ಪಾಟೀಲ್ಗೆ ಕೌಂಟರ್ ಕೊಟ್ರು. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳವ ಮೂಲಕ ಸಚಿವ ಶಿವಾನಂದ ಪಾಟೀಲ್ಗೆ ಕೌಂಟರ್ ಕೊಟ್ಟ ಎಂಬಿ ಪಾಟೀಲ್, ಸಿಎಂ ಆಗಲು ಸಿನಿಯರ್ಸ್ ಅನ್ನೊದೊಂದೆ ಮಾನದಂಡವಲ್ಲ. ಅದಕ್ಕೆ ಅನೇಕ ಅರ್ಹತೆಗಳು ಇವೆ ಎಂದು ಹೇಳಿದ್ರು
ಸದ್ಯ ಖಾಲಿ ಇಲ್ಲದ ಸಿಎಂ ಚೇರ್ಗಾಗಿ ಕಾಂಗ್ರೆಸ್ನಲ್ಲಿ ದೊಡ್ಡ ಪಾಳಿ ಹತ್ತಿದೆ. ಜಾತಿ, ಪ್ರಾಬಲ್ಯ, ಸಿನಿಯಾರಿಟಿ, ವರ್ಚಸ್ಸು. ಈ ಕುರ್ಚಿಗೆ ಮಾನದಂಡಗಳ ಮಂಡನೆ ಆಗ್ತಿದೆ. ಇಷ್ಟೆಲ್ಲಾ ಬೆಳವಣಿಗೆ ಆಗ್ತಿದ್ರೂ ಸಿದ್ದು ಮಾತ್ರ ಸೈಲೆಂಟ್ ಆಗಿರೋದು ಕುತೂಹಲ ಮೂಡಿಸ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ