/newsfirstlive-kannada/media/post_attachments/wp-content/uploads/2024/11/Cm-Siddaramaiah-On-Chamundeshwari-ratha.jpg)
ಮೈಸೂರು: ನಾಡದೇವತೆ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಆಸಕ್ತಿ ತೋರಿದೆ. ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಸ್ವರ್ಣ ರಥಕ್ಕೆ ಮನವಿ!
ಕಳೆದ ನವೆಂಬರ್ 19ರಂದು ಕಾಂಗ್ರೆಸ್ MLC ದಿನೇಶ್ ಗೂಳಿಗೌಡ ಅವರು ಭಕ್ತರ ಪರವಾಗಿ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸಿ ಸಮರ್ಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಕನ್ನಡ ನಾಡಿನ ಅಸ್ಮಿತೆ, ನಾಡದೇವತೆ ಚಾಮುಂಡೇಶ್ವರಿ ದೇವಿ. ಚಾಮುಂಡಿ ಬೆಟ್ಟ, ದೇವಸ್ಥಾನ, ದೇವಿಗೆ ಪೌರಾಣಿಕ ಹಿನ್ನೆಲೆ ಇದೆ. ನಾಡದೇವಿಯನ್ನು ಪೂಜಿಸುವಾಗ ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಅನ್ನೋದು ಭಕ್ತರ ಬೇಡಿಕೆಯಾಗಿದೆ. ಹೀಗಾಗಿ ಚಿನ್ನದ ರಥಕ್ಕೆ ಅಗತ್ಯ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ಚಿನ್ನದ ರಥ ನಿರ್ಮಿಸಲು ಸುಮಾರು 100 ಕೋಟಿ ರೂಪಾಯಿ ಬೇಕಾಗಬಹುದು. ಈ ಉದ್ದೇಶಕ್ಕಾಗಿ ದೇವಸ್ಥಾನದಲ್ಲಿ ಪ್ರತ್ಯೇಕ ಹುಂಡಿ ಇಡಬೇಕು. ಸಂಗ್ರಹವಾದ ಹಣಕ್ಕಿಂತ ಹೆಚ್ಚು ಬೇಕಿದ್ರೆ ಸರ್ಕಾರವೇ ಭರಿಸಬೇಕು. ಮುಂದಿನ ದಸರಾ ಒಳಗೆ ಚಿನ್ನದ ರಥ ನಿರ್ಮಿಸಿ ರಥೋತ್ಸವ ಮಾಡಬೇಕು ಎಂದು MLC ದಿನೇಶ್ ಗೂಳಿಗೌಡ ಅವರು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದರು.
/newsfirstlive-kannada/media/post_attachments/wp-content/uploads/2023/10/CHAMUNDI-1.jpg)
ಕಾಂಗ್ರೆಸ್ MLC ದಿನೇಶ್ ಗೂಳಿಗೌಡ ಅವರ ಮನವಿಗೆ ಸ್ಪರ್ಧಿಸಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಕಂದಾಯ ಇಲಾಖೆಯ ಧಾರ್ಮಿಕ ದತ್ತಿ ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ಧಾರ್ಮಿಕ ದತ್ತಿ ವಿಭಾಗದ ಮುಖ್ಯ ಕಾರ್ಯದರ್ಶಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/MYS_SIDDARAMAIAH_HAMPA.jpg)
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಸೋಲು.. ನಿಖಿಲ್ ರಾಜಕೀಯದ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಸಿಎಂ ಚಿನ್ನದ ರಥ ಸಂಕಲ್ಪವೇಕೆ?
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶಿಥಿಲವಾಗುತ್ತಿರುವ ಮರದ ರಥ
1827ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡಿದ್ದ ರಥ
ಮರದಲ್ಲಿ ಸಿಂಹವಾಹನ ರಥ ನಿರ್ಮಿಸಿ ಕೊಡುಗೆ ನೀಡಿದ್ದ ಒಡೆಯರ್
ರಥೋತ್ಸವ ಸಂದರ್ಭದಲ್ಲಿ ಸಿಂಹವಾಹನ ರಥವನ್ನು ಬಳಸಲಾಗುತ್ತಿತ್ತು
ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ರಥವನ್ನು ಎಳೆಯಲಾಗುತ್ತದೆ
ಆಶ್ವಯುಜ ಶುಕ್ಲ ಪೂರ್ಣಿಮೆಯಂದು ಪ್ರತಿ ವರ್ಷ ರಥಾರೋಹಣ
ಮಂಟಪೋತ್ಸವ, ಸಿಂಹವಾಹನೋತ್ಸವ, ಹಂಸವಾಹನೋತ್ಸವ
ಶಾಸ್ತ್ರೋಕ್ತವಾಗಿ ಇನ್ನೂ ಹಲವು ಕಾರ್ಯಕ್ರಮಗಳಿಂದ ರಥೋತ್ಸವ
ಪ್ರತಿ ವರ್ಷ ದಸರಾ ಬಳಿಕ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ
ಮರದ ರಥ ಶಿಥಿಲವಾಗುತ್ತಾ ಬಂದಿದ್ದು, ಹೊಸ ಚಿನ್ನದ ರಥಕ್ಕೆ ಸಂಕಲ್ಪ
ಈ ಹಿಂದೆಯೇ ಚಿನ್ನದ ರಥ ನಿರ್ಮಿಸುವ ಪ್ರಸ್ತಾಪ ಮಾಡಿದ್ದ ಭಕ್ತರು
ರಥ ನಿರ್ಮಾಣಕ್ಕೆ ₹100 ಕೋಟಿ ವೆಚ್ಚ ತಗುಲಬಹುದೆಂಬ ಅಂದಾಜು
ಆದರೆ, ಹಲವು ಕಾರಣಗಳಿಂದ ಈಡೇರದ ಚಿನ್ನದ ರಥದ ಸಂಕಲ್ಪ
ಇದೀಗ ಚಿನ್ನದ ರಥದ ನಿರ್ಮಾಣಕ್ಕೆ ಚಿಂತನೆ ನಡೆಸಿರೋ ಸರ್ಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us