newsfirstkannada.com

VIDEO: ಕಾಂಗ್ರೆಸ್ ಘರ್​ ವಾಪಸಿ ಪಕ್ಕಾ?; ಕೊನೆಗೂ ಸಿಎಂ ಸಿದ್ದರಾಮಯ್ಯ ಕೊಟ್ರು ಸ್ಫೋಟಕ ಸುಳಿವು

Share :

28-08-2023

    ಬಿಜೆಪಿಯಲ್ಲಿರುವ ವಲಸಿಗರಿಗೆ ಪರೋಕ್ಷವಾಗಿ ಆಹ್ವಾನ ಕೊಟ್ರಾ ಸಿಎಂ?

    ಕರ್ನಾಟಕದ ಇತಿಹಾಸದಲ್ಲೇ ವಿರೋಧ ಪಕ್ಷಕ್ಕೆ ಇಂತಹ ಸ್ಥಿತಿ ಬಂದಿರಲಿಲ್ಲ

    ಸಾಲು, ಸಾಲು ಬಿಜೆಪಿ ಶಾಸಕರು ಸಿಎಂ, ಡಿಸಿಎಂ ಭೇಟಿ ಮಾಡಿದ್ದು ಯಾಕೆ?

ಮೈಸೂರು: ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಕ್ರಾಂತಿ ಆಗೋದು ಪಕ್ಕಾ ಆಗಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಇಂದು ಕಾಂಗ್ರೆಸ್ ಘರ್‌ ವಾಪಸಿ ಬಗ್ಗೆ ಮಾತನಾಡಿದ್ದು ಕುತೂಹಲ ಕೆರಳಿಸಿದೆ. ಮೈಸೂರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಬಿಟ್ಟೋದವರಿಗಷ್ಟೇ ಮತ್ತೆ ಪಕ್ಷಕ್ಕೆ ಸ್ವಾಗತ ಅಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆಲ್ಲರಿಗೂ ಸ್ವಾಗತವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸಾಲು, ಸಾಲು ಬಿಜೆಪಿ ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾಗುತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ನಾಯಕರೆಲ್ಲಾ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೊಡ್ಡ ಮಟ್ಟದಲ್ಲಿ ಆಪರೇಷನ್ ಹಸ್ತ ನಡೆಯಲಿದೆ ಎಂದು ಬಹಿರಂಗವಾಗೇ ಹೇಳಿಕೆ ನೀಡುತ್ತಿದ್ದಾರೆ. ತೆರೆಮರೆಯಲ್ಲಿ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಆಪರೇಷನ್ ಹಸ್ತದ ವಿಚಾರ ಸಾಕಷ್ಟು ಕೋಲಾಹಲ ಸೃಷ್ಟಿಸಿರುವಾಗಲೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 16 ರಿಂದ 18 ಜನ ಕಾಂಗ್ರೆಸ್​​​​ಗೆ ಬರಬಹುದು; ಶಾಸಕ ಕೋನರೆಡ್ಡಿ ಅಚ್ಚರಿಯ ಹೇಳಿಕೆ

ರಾಜ್ಯದಲ್ಲಿ ಬಿಜೆಪಿ ಪಕ್ಷ ಎಲ್ಲಿದೆ, ದಿವಾಳಿಯಾಗಿಬಿಟ್ಟಿದೆ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟೋದವರಿಗಷ್ಟೇ ಅಲ್ಲ, ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆಲ್ಲರಿಗೂ ಸ್ವಾಗತವಿದೆ ಎಂದಿದ್ದಾರೆ. ನಮ್ಮ ಸರ್ಕಾರ ಬಂದು ನೂರು ದಿನ‌ಗಳೇ ಆಯ್ತು. ಇಷ್ಟಾದರೂ ವಿರೋಧ ಪಕ್ಷದ ನಾಯಕನೇ ಇಲ್ಲ. ಕರ್ನಾಟಕದ ಇತಿಹಾಸದಲ್ಲೇ ವಿರೋಧ ಪಕ್ಷಕ್ಕೆ ಇಂತಹ ಸ್ಥಿತಿ ಬಂದಿರಲಿಲ್ಲ. ಅವರಿಗೆ ಇದುವರೆಗೂ ವಿಪಕ್ಷ ನಾಯಕನನ್ನೇ ಮಾಡಲು ಸಾಧ್ಯವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಕಾಂಗ್ರೆಸ್ ಘರ್​ ವಾಪಸಿ ಪಕ್ಕಾ?; ಕೊನೆಗೂ ಸಿಎಂ ಸಿದ್ದರಾಮಯ್ಯ ಕೊಟ್ರು ಸ್ಫೋಟಕ ಸುಳಿವು

https://newsfirstlive.com/wp-content/uploads/2023/08/Siddaramaiah-Cm-1.jpg

Load More