/newsfirstlive-kannada/media/post_attachments/wp-content/uploads/2023/10/siddu-14-1.jpg)
ಬಿಪಿಎಲ್​​​ ಕಾರ್ಡ್​​​ ಜನರ ಬಿಪಿಯನ್ನೇ ಹೈ ಮಾಡ್ತಿದೆ.. ಕಾರ್ಡ್​​ ಕಿತ್ಕೋತಾರೆ ಅಂತ ಡಂಗೂರ ಸಾರ್ತಿರುವ ಬಿಜೆಪಿಗೆ ಟಕ್ಕರ್​ ಕೊಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ.. ನಿನ್ನೆ ಹಿರಿಯ ಸಚಿವರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸರ್ವರೋಗಕ್ಕೂ ಕೋವಿಡ್​​ ಹಗರಣದ ವ್ಯಾಕ್ಸಿನ್ನೇ ಮದ್ದು ಅಂತ ಸಂಶೋಧನೆ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಕಾಡ್ತಿರುವ ಸಮಸ್ಯೆಗಳು ಒಂದಾ ಎರಡಾ? ಸಾಲು ಸಾಲು ಹಗರಣಗಳು, ಅಕ್ರಮಗಳು ಮುಜುಗರಕ್ಕೆ ತಳ್ಳಿವೆ. ಇದೇ ಹೊತ್ತಲ್ಲೇ ಬಿಜೆಪಿ ವಿರುದ್ಧ ಕೋವಿಡ್ ಅಸ್ತ್ರ ಪ್ರಯೋಗಿಸಿ ಕಸಿವಿಸಿಯಿಂದ ಪಾರಾಗುವ ಪ್ಲಾನ್​ ರೂಪಿಸಿದೆ. ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದಾರೆ.
ಬಿಜೆಪಿಗೆ ಕೋವಿಡ್​​ ಶಾಕ್​ ನೀಡಲು ಕಾಂಗ್ರೆಸ್​​ ಪ್ಲಾನ್​​!
ಕಾಂಗ್ರೆಸ್​​ ವಿರುದ್ಧದ ಎಲ್ಲಾ ಆರೋಪಗಳಿಗೂ ಒಂದೇ ವ್ಯಾಕ್ಸಿನ್​​. ಅದು ಕೋವಿಡ್​ ಹಗರಣ. ಇದೇ ಹಗರಣ ಹಿಡಿದು ಬಿಜೆಪಿಯನ್ನ ಮಣಿಸಲು ಸಿಎಂ ಸಿದ್ದು ಪ್ಲಾನ್​​ ಮಾಡಿದ್ದಾರೆ.. ಹಿರಿಯ ಸಚಿವರ ಜೊತೆ ಸಭೆ ನಡೆಸಿ ಕೆಲ ಇನ್​ಸ್ಟ್ರಕ್ಷನ್​ ಕೊಟ್ಟಿದ್ದಾರೆ.
ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ಬಾಳಲ್ಲಿ ರಾಜಯೋಗ ಶುರು; ಡಾ. ಲಕ್ಷ್ಮೀಕಾಂತ್ ಆಚಾರ್ಯ ಭವಿಷ್ಯ
ಕೋವಿಡ್ ಹಗರಣ ವಿಚಾರವಾಗಿ ಇನ್ನಷ್ಟು ಪರಿಣಾಮಕಾರಿ ಹೋರಾಟ ನಡೆಸಬೇಕು. ನ್ಯಾ.ಕುನ್ನಾ ಮಧ್ಯಂತರ ವರದಿ ಆಧರಿಸಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕು.. ಬಿಜೆಪಿ ಅವಧಿಯಲ್ಲಿ ನಡೆದಿರುವ ಅಕ್ರಮ ಕುರಿತು ಜನರಿಗೆ ತಿಳಿಸಬೇಕು. ವಕ್ಫ್ ವಿಚಾರವಾಗಿ ಬಿಜೆಪಿ ನಾಯಕರು ಸರ್ಕಾರಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಹಾಗಾಗಿ ಕೋವಿಡ್ ಹಗರಣವನ್ನೇ ಮುಂದಿಟ್ಟು ಬಿಜೆಪಿ ನಾಯಕರನ್ನ ಕಟ್ಟಿ ಹಾಕಬೇಕು. ಇದೇ ವೇಳೆ, ಕೋವಿಡ್ ಭ್ರಷ್ಟಾಚಾರ ಸಂಬಂಧ ಎಸ್ಐಟಿ ಮುಖ್ಯಸ್ಥರ ನೇಮಕ ಕುರಿತು ಸಮಾಲೋಚನೆ ನಡೆದಿದೆ. ಯಾರನ್ನ ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂಬುದನ್ನ ಗೃಹ ಸಚಿವರ ತೀರ್ಮಾನಕ್ಕೆ ಸಿಎಂ ಬಿಟ್ಟಿದ್ದಾರೆ.
ಆಹಾರ ಸಚಿವ ಕೆ.ಹೆಚ್. ಮುನಿಯಪ್ಪಗೆ ಸಿಎಂ ತಾಕೀತು!
ಇನ್ನು, ಬಿಪಿಎಲ್​​​ ಕಾರ್ಡ್​​ ವಿಚಾರದಲ್ಲಿ ಉಂಟಾದ ಗೊಂದಲಕ್ಕೆ ಕೆಂಡಾಮಂಡಲರಾದ ಸಿಎಂ ಸಿದ್ದು, ಸಂಜೆ ನಡೆದ ಸಚಿವರ ಸಭೆಯಲ್ಲಿ ಮುನಿಯಪ್ಪಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.. ಬಿಪಿಎಲ್ ಕಾರ್ಡ್ ರದ್ದತಿ ವಿಚಾರದಲ್ಲಿ ಅನಗತ್ಯ ಟೀಕೆಗಳು ಎದುರಾಗುತ್ತಿವೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಸೇರಿ ಕೆಲ ಅನರ್ಹರ ಕಾರ್ಡ್‌ಗಳನ್ನು ರದ್ದು ಮಾಡಲಾಗ್ತಿದೆ. ಇದರ ಹೊರತು ಬೇರಾವ ಬಡ ಕುಟುಂಬಗಳ ಬಿಪಿಎಲ್ ಕಾರ್ಡ್​ಗಳು ಕೂಡ ರದ್ದಾಗಿಲ್ಲ. ನಮ್ಮ ಸರ್ಕಾರ ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ. ಹೀಗಾಗಿ ಮೊದಲು ಗೊಂದಲಕ್ಕೆ ಅವಕಾಶ ಇಲ್ಲದಂತೆ ಜನರಿಗೆ ತಿಳಿಸಿ ಅಂತ ಸೂಚಿಸಿದ್ದಾರೆ.
ಇದನ್ನೂ ಓದಿ: 50 ಕೋಟಿ ಅಲ್ಲ, 100 ಕೋಟಿ ರೂ ಆಫರ್; ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ
ಇನ್ನು, ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಬೇಕಿರುವ ಮಸೂದೆಗಳ ಕುರಿತು ಚರ್ಚೆ ಆಗಿದೆ.. ರಾಜ್ಯಪಾಲರು ಅನುಮೋದನೆ ನೀಡದೆ ಬಾಕಿ ಉಳಿಸಿಕೊಂಡಿರುವ ವಿಧೇಯಕಗಳ ಬಗ್ಗೆಯೂ ಚರ್ಚೆ ಆಗಿದೆ. ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಸರ್ಕಾರದಿಂದ ತಜ್ಞರೊಬ್ಬರನ್ನು ನೇಮಿಸಿವ ಕುರಿತು ಸಮಾಲೋಚನೆ ನಡೆದಿದೆ. ಕಳೆದ ಅಧಿವೇಶನದಲ್ಲಿ ತಡೆಹಿಡಿದು ಜಂಟಿ ಸದನ ಸಮಿತಿ ಪರಾಮರ್ಶೆಗೆ ಒಪ್ಪಿಸಲಾಗಿದ್ದ ಗ್ರೇಟರ್ ಬೆಂಗಳೂರು ವಿಧೇಯಕ, ಶ್ರೀಗುರು ರಾಘವೇಂದ್ರ ಬ್ಯಾಂಕ್ ಹಗರಣದ ಹಿನ್ನೆಲೆ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿದಾರರ ಹಿತಾಸಕ್ತಿ ಕಾಪಾಡುವ ವಿಧೇಯಕ ಕುರಿತು ಚರ್ಚೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us