ಮಹತ್ವದ ನಿರ್ಣಯದೊಂದಿಗೆ ದೆಹಲಿಗೆ ತೆರಳಲು ಸಿದ್ದು ತಯಾರಿ!
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ
ಶುಕ್ರವಾರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ
ಬೆಂಗಳೂರು: ಮುಡಾ ಹಗರಣ.. ಶುದ್ಧ ಹಸ್ತದ ಶುದ್ದರಾಮಯ್ಯರನ್ನೇ ಅಲುಗಾಡಿಸಿರುವ ಪ್ರಕರಣ. ಸಿಎಂ ಸಿದ್ದರಾಮಯ್ಯ ಕುರ್ಚಿ ಮೇಲೆ ಭರ್ಚಿಯೊಂದು ನೇತಾಡ್ತಿದೆ. ಸಿಎಂ ತಲೆದಂಡಕ್ಕಾಗಿ ಆಗ್ರಹಿಸಿ ಕೇಸರಿ ನಾಯಕರು ರಚ್ಚೆ ಹಿಡಿದಿದ್ದಾರೆ. ಈ ರಚ್ಚೆಯನ್ನು ಇಂದಿನಿಂದ ಹೋರಾಟದ ರೂಪಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೇ ಹಸ್ತದ ಪಡಸಾಲೆಯಲ್ಲೇ ಜೋರಾಗಿದೆ. ಆದ್ರೆ ಇದಕ್ಕೆಲ್ಲ ಕಾಂಗ್ರೆಸ್ ನಾಯಕರು ನೋ ವೇ ಚಾನ್ಸೇ ಇಲ್ಲ ಅಂತಿದ್ದಾರೆ.
ಇದನ್ನೂ ಓದಿ: ಮುಡಾದಲ್ಲಿ ಮೂಡಿದ ವೈಟ್ನರ್ ಮೇಲೆ ಗುಮಾನಿ.. ಡಿಸಿ, ಮುಡಾ ಅಧ್ಯಕ್ಷರಿಗೆ ಸಿಎಂ ಪತ್ನಿ ಬರೆದ ಪತ್ರದಲ್ಲೇನಿದೆ?
‘ಆನೆ ಬೀಳೋದನ್ನು ನೋಡಲು ನರಿಗಳು ಕಾಯ್ತಾ ಇರಬೇಕಷ್ಟೇ’
ಸಿಎಂ ರಾಜೀನಾಮೆ ಬಗ್ಗೆ ವಿಪಕ್ಷಗಳಿಗೆ ಸಚಿವ ಮಹದೇವಪ್ಪ ಟಾಂಗ್
ಸಿಎಂ ಕುರ್ಚಿ ಹಾಗೂ ಕಾಂಗ್ರೆಸ್ ನಾಯಕರ ಸದ್ಯದ ಪರಿಸ್ಥಿತಿ ಹೊರಗೆ ಮರ ಗಟ್ಟಿಯಾಗಿದ್ರೂ ಆಳಕ್ಕಿಳಿದ್ರೆ ಬುಡ ಟೊಳ್ಳಾದಂತಿದೆ. ಸಿದ್ದರಾಮಯ್ಯ ರಾಜೀನಾಮೆ ಆಗ್ರಹ ಕೈಯೊಳಗೆ ಸಂಚಲನ ಸೃಷ್ಟಿಸಿದ್ದು ಪಕ್ಷದೊಳಗೆ ಗುಸುಗುಸು-ಪಿಸುಪಿಸು ನಡೆಯುತ್ತಲೇ ಇದೆ. ಆದ್ರೆ ಈ ಬಗ್ಗೆ ಯಾರೂ ಕೂಡ ಬಹಿರಂಗವಾಗಿ ಸೊಲ್ಲೆತ್ತುತ್ತಿಲ್ಲ. ಒಳಗೆ ಆತಂಕವಿದ್ರೂ ಹೊರಗೆ ಆರಾಮಾಗಿಯೇ ಇದ್ದಂತೆ ವರ್ತಿಸ್ತಿದ್ದಾರೆ. ಸಿಎಂ ಬದಲಾವಣೆಯ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ಸರ್ಕಾರ 5 ವರ್ಷ ಸುಭದ್ರವಾಗಿರುತ್ತೆ. ಅನುಮಾನ ಯಾಕೆ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಆನೆ ಹಾಗೂ ನರಿಯನ್ನು ಹೋಲಿಸಿ ಸರ್ಕಾರದ ಭದ್ರತೆ ಬಗ್ಗೆ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಇದೇ ವಿಚಾರದ ಬಗ್ಗೆ ಮಾತನಾಡಿರುವ ಸಚಿವರಾದ ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ನಮ್ಮಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚರ್ಚೆಯೇ ಆಗಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಹೈಕಮಾಂಡ್ ವಿಶ್ವಾಸ ಗಟ್ಟಿಗೊಳಿಸಲು ದೆಹಲಿಗೆ ತೆರಳಲಿರುವ ಸಿಎಂ
ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಈ ನಿರ್ಣಯದೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಂತೆ ಶಾಸಕಾಂಗ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಿದ್ದಾರೆ. ರಾಜ್ಯಪಾಲರ ನಡೆ ವಿರುದ್ಧ ಶಾಸಕರ ನಿರ್ಣಯದ ಜೊತೆಗೆ ದೆಹಲಿಗೆ ಸಿಎಂ ಪ್ರಯಾಣ ಬೆಳೆಸಲಿದ್ದಾರೆ. ಶುಕ್ರವಾರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ರಾಜ್ಯಪಾಲರ ನಡೆ, ಪ್ರಾಸಿಕ್ಯೂಷನ್, ಕಾನೂನು ಹೋರಾಟದ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ, ಪ್ರಶಾಂತ್ ಭೂಷಣ್ ಭೇಟಿ ಮಾಡುವ ಸಂಭವವಿದೆ. ಸದ್ಯ ಸಿದ್ದರಾಮಯ್ಯ ಬೆನ್ನಿಗೆ ಸಚಿವರು, ಶಾಸಕರಾದಿಯಾಗಿ ಇಡೀ ಕೈ ಪಡೆ ನಿಂತಿದ್ದು ಇದೇ ವಿಶ್ವಾಸವನ್ನು ಹೈಕಮಾಂಡ್ ಮತ್ತಷ್ಟು ಗಟ್ಟಿಗಳಿಸಿಕೊಳ್ಳಲು ದೆಹಲಿಗೆ ಸಿಎಂ ತೆರಳಲಿದ್ದಾರೆ.
ಇದನ್ನೂ ಓದಿ: ‘ನನ್ನ ಬಂಧಿಸಲು 100 ಸಿದ್ದು ಬರಬೇಕು’- ಕುಮಾರಸ್ವಾಮಿ ಸವಾಲಿಗೆ ಸಿದ್ದರಾಮಯ್ಯ ತಿರುಗೇಟು; ಏನಂದ್ರು? VIDEO
ಮುಡಾ ಹಗರಣ ಸಂಬಂಧ ಸಿಎಂ ಬದಲಾವಣೆ ಸುದ್ದಿ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ಹಸ್ತ ಮನೆಯೊಳಗೆ ಗುಲ್ಲೆಬ್ಬಿಸಿದೆ. ಈ ಸಂಬಂಧ ಹೈಕಮಾಂಡ್ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಸಿಎಂ ದೆಹಲಿ ಯಾತ್ರೆ ಕೈಗೊಂಡಿದ್ದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ