ಬಿಜೆಪಿಯವರು ಮಾತಾಡೋದು ಬಿಟ್ಟು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಅಕ್ಕಿ ಕೊಡಿಸಲಿ
ಬಡವರ ಬಗ್ಗೆ ನಿಜವಾಗಿಯೂ ಅವರಿಗೆ ಕಾಳಜಿ ಇದ್ರೆ ಅಕ್ಕಿ ಕೊಡಿಸಲಿ ಎಂದ ಸಿದ್ದರಾಮಯ್ಯ
ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢದಿಂದ ಹೆಚ್ಚುವರಿ ಅಕ್ಕಿ ತರಲು ಸರ್ಕಾರ ಪ್ರಯತ್ನ
ಬೆಂಗಳೂರು: 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಜಾರಿಗೆ ಮೊದಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಬಿಜೆಪಿ ನಾಯಕರು ಜನರಿಗೆ ಸರ್ಕಾರ ಭರವಸೆ ಕೊಟ್ಟಾಯ್ತು. 10 ಕೆಜಿ ಅಕ್ಕಿ ಕೊಡಲೇಬೇಕು. ಅಕ್ಕಿ ಕೊಡಲು ಆಗದಿದ್ದರೆ ರಾಜ್ಯ ಸರ್ಕಾರ ಹಣ ಕೊಡಲಿ ಎಂದಿದ್ದರು. ಬಿಜೆಪಿ ನಾಯಕರ ಈ ಮಾತಿಗೆ ಸಿಎಂ ಸಿದ್ದರಾಮಯ್ಯ ಇವತ್ತು ಫುಲ್ ಗರಂ ಆಗಿದ್ದಾರೆ.
ಅಕ್ಕಿ ಕೊಡೋದು ಅನ್ನ ತಿನ್ನಿ ಅಂತಾ. ಆದರೆ ದುಡ್ಡು ತಿನ್ನಲಿ ಅಂತಾನ..? ಬಿಜೆಪಿಯವರು ಇದನ್ನೆಲ್ಲ ಮಾತಾಡೋದು ಬಿಟ್ಟು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಅಕ್ಕಿ ಕೊಡಿಸಲಿ. ಬಡವರ ಬಗ್ಗೆ ನಿಜವಾಗಿಯೂ ಅವರಿಗೆ ಕಾಳಜಿ ಇದ್ರೆ ಅಕ್ಕಿ ಕೊಡಿಸಲಿ. ರಾಜಕೀಯ ಮಾಡೋದು ಬಿಡಿ, ಅಕ್ಕಿ ಕೊಡಿಸಲಿ ಎಂದು ಕೇಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ’10 ಕೆಜಿ ಅಕ್ಕಿಯಲ್ಲಿ 1 ಗ್ರಾಂ ಕಡಿಮೆಯಾದ್ರೂ ಒಪ್ಪೋದಿಲ್ಲ’- ಸಿದ್ದರಾಮಯ್ಯ ಸರ್ಕಾರಕ್ಕೆ ಬಿಎಸ್‌ವೈ ಖಡಕ್ ಸವಾಲು
ಇದೇ ವೇಳೆ ಕೇಂದ್ರ ಸರ್ಕಾರದ ಮೇಲೂ ಸಿಎಂ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಮಾಡ್ತಿದೆ. ನಾವು ಜೂನ್ 9ರಂದು ಅಕ್ಕಿ ಕೊಡಿ ಎಂದು ಪತ್ರ ಬರೆದಿದ್ವಿ. ಅವ್ರು ಒಪ್ಪಿಕೊಂಡು ಅಕ್ಕಿ ಸಪ್ಲೈ ಮಾಡೋದಾಗಿ ಪತ್ರ ಬರೆದಿದ್ರು. ನಮ್ಮ ಬಳಿ 7 ಲಕ್ಷ ಟನ್ ಇದೆ ಅಂತಾ ಒಪ್ಪಿಕೊಂಡು ಆ ಮೇಲೆ ಇಲ್ಲಾ ಅಂದರೆ ಏನಂತಾ ಅಂದ್ಕೊಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮಗೆ ಅಕ್ಕಿ ಕೊಡ್ತೀನಿ ಅಂದವರು FCI ನವ್ರು. ಅವ್ರು ಅಕ್ಕಿ ಕೊಡ್ತೀವಿ ಅಂತಾ ಜೂನ್ 12ನೇ ತಾರೀಖು ಪತ್ರನೂ ಬರೆದಿದ್ರು. ಒಂದು ವೇಳೆ ಇವ್ರು ಇಲ್ಲ ಅಂದಿದ್ರೆ ಕೇಂದ್ರ ಸರ್ಕಾರದ ಜೊತೆ ಮಾತಾಡ್ತಿದ್ವಿ. ಅವ್ರು ಮಿನಿಸ್ಟರ್ ಜೊತೆಗೆ ಮಾತಾಡಿ ಅಂದಿದ್ರೆ ಅವರ ಜೊತೆ ನಾವು ಮಾತಾಡ್ತಿದ್ವಿ. ಅವ್ರು ಕೊಡ್ತೀನಿ ಅಂದ ಮೇಲೆ ಕೇಂದ್ರದವರ ಜೊತೆ ಯಾಕೆ ಮಾತಾಡ್ತೀಯಾ.. ಈಗ ಬಿಜೆಪಿಯವರು ಏನೋ ಇವತ್ತು ನೆಪಕ್ಕೆ ಮಾತಾಡ್ತಿದ್ದಾರೆ. ಇದೊಂದು ಬಡವರ ಕಾರ್ಯಕ್ರಮ. ಬಡವರ ಕಾರ್ಯಕ್ರಮಕ್ಕೆ ಅವ್ರು ಅಡ್ಡಿ ಪಡಿಸೋದು ಯಾಕೆ? ದ್ವೇಷದ ರಾಜಕಾರಣ ಯಾಕೆ ಮಾಡ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಇನ್ನು ಹೆಚ್ಚುವರಿ ಅಕ್ಕಿಗಾಗಿ ಆಂಧ್ರಪ್ರದೇಶದವರ ಜೊತೆಗೂ ಮಾತಾಡ್ತಿದ್ದೇವೆ. ಆದರೆ ಅವ್ರು ಸಪ್ಲೈ ಮಾಡ್ತಿವಿ ಅಂತಾ ಹೇಳಿಲ್ಲ. ತೆಲಂಗಾಣ ಚೀಫ್ ಮಿನಿಸ್ಟರ್ ಜೊತೆಗೂ ಮಾತಾಡಿದ್ದೇವೆ ಅವ್ರು ಆಗಲ್ಲ ಅಂದ್ರು. ಛತ್ತೀಸ್‌ಗಢದವ್ರು ಮಾತ್ರ 1.5 ಲಕ್ಷ ಮೆಟ್ರಿಕ್ ಟನ್ ಕೊಡೋದಾಗಿ ಹೇಳಿದ್ದಾರೆ. ಆದರೆ ನೀವು ಕೇಳಿದ 2.28 ಲಕ್ಷ ಮೆಟ್ರಿಕ್ ಟನ್ ಕೊಡಲ್ಲ ಎಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ