40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಮೊಟ್ಟ ಮೊದಲ ತನಿಖೆ
ಮೈಸೂರಿನ ಮುಡಾ ಕೇಸ್ ದಾಖಲೆ ನೋಡಿ ಹೈಕೋರ್ಟ್ ಹೇಳಿದ್ದೇನು?
ದಾಖಲಾಗುತ್ತಾ ಎಫ್‌ಐಆರ್? ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್?
ಮುಡಾ ಸೈಟು ಹಗರಣ ಆರೋಪ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಮುಡಾದಲ್ಲಿ ಸಿದ್ದರಾಮಯ್ಯನವರು ಅಕ್ರಮವಾಗಿ ಸೈಟು ಕಬಳಿಸಿದ್ದಾರೆ ಎಂಬ ಆರೋಪದೊಂದಿಗೆ ಮೂವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಆ ದೂರನ್ನು ಪರಾಮರ್ಶಿಸಿದ್ದ ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು.
ಇದನ್ನೂ ಓದಿ: ನಾಳೆಯೇ FIR ಭವಿಷ್ಯ.. ದಿಢೀರ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ; ಕಾರಣವೇನು?
ಮುಯ್ಯಿಗೆ ಮುಯ್ಯಿ ಎಂಬಂತೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಆದೇಶದ ವಿರುದ್ಧವೇ ಕಾನೂನು ಸಮರ ಸಾರಿದ್ದರು. ರಾಜ್ಯಪಾಲರು ರಾಜಕೀಯ ದುರುದ್ದೇಶದಿಂದ ತನ್ನ ವಿರುದ್ಧ ತನಿಖೆಗೆ ಆದೇಶ ನೀಡಿದ್ದಾರೆಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ರು. ತನಿಖೆಗೆ ಅನುಮತಿ ನೀಡಿದ್ದ ಆದೇಶವನ್ನು ರದ್ದು ಗೊಳಿಸಿ ಅಂತಾ ಕೋರಿ ಕೊಂಡಿದ್ರು. ಆದರೆ ಸಿದ್ದರಾಮಯ್ಯಗೆ ಹೈಕೋರ್ಟ್ ಇವತ್ತು ದೊಡ್ಡ ಆಘಾತ ನೀಡಿದೆ. ರದ್ದುಗೊಳಿಸಬೇಕಿರೋದು ರಾಜ್ಯಪಾಲರು ನೀಡಿರೋ ಆದೇಶವನ್ನಲ್ಲ ನಿಮ್ಮ ಅರ್ಜಿಯನ್ನ ಅಂತಾ ಐತಿಹಾಸಿಕ ತೀರ್ಪು ನೀಡಿದೆ.
ಮುಡಾ ಹಗರಣ ಆರೋಪದಲ್ಲಿ ತನಗೆ ಕಾನೂನು ಜಯವಾಗುತ್ತೆ. ರಾಜ್ಯಪಾಲರಿಗೆ ಹಿನ್ನಡೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಹಾಗಂತ, ಸಿದ್ದರಾಮಯ್ಯರೇನು ಈಗಲೇ ಜೈಲಿಗೆ ಹೋಗಿಬಿಡ್ತಾರಾ? ಅಂಥಾದ್ದೊಂದು ಸನ್ನಿವೇಶ ಎದುರಾಗುತ್ತಾ ಅಂದ್ರೆ ಖಂಡಿತ ಇಲ್ಲ. ಆದ್ರೆ, ಸಿದ್ದುಗೆ ಕಾನೂನು ಕುಣಿಗೆ ಬಿಗಿಯಾಗುತ್ತಾ ಹೋಗುತ್ತೆ ಅನ್ನೋದಕ್ಕೆ ಈ ಹೈಕೋರ್ಟ್ ತೀರ್ಪು ದೊಡ್ಡ ಸುಳಿವು ಕೊಟ್ಟಿದೆ.
ಮುಖ್ಯಮಂತ್ರಿಗಳಿಗೆ ಕಂಟಕವಾದ ‘ಲಾ’ ಪಾಯಿಂಟ್ಗಳೇನು?

ಕೇಸ್ ಗೆಲ್ಲಬೇಕು ಅಂತಾ ಸಿದ್ದು ಪರ ಕಾಂಗ್ರೆಸ್‌ನ ಕಾನೂನು ಚಾಣಕ್ಯ ಅಭಿಷೇಕ್ ಮನುಸಿಂಘ್ವಿ ಲಾ ಪಾಯಿಂಟ್ ಹಾಕಿದ್ರು. ಆದ್ರೆ, ಸರ್ಕಾರ ಪರ ವಕೀಲ ಅರ್ಥಾತ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಾನೂನು ಕತ್ತಿ ವರಸೆ ಎದುರು ಸಿಂಘ್ವಿ ಆಟವೇ ನಡೆಯಲಿಲ್ಲ. ಅಂತಿಮವಾಗಿ ಸಿದ್ದುಗೆ ಹೈಕೋರ್ಟ್‌ನಲ್ಲಿ ದೊಡ್ಡ ಶಾಕ್ ಎದುರಾಗಿದೆ.
ಇದನ್ನೂ ಓದಿ: ಮುಡಾ ಕೇಸ್ ಸಂಕಷ್ಟ.. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾ? ಬಿ.ವೈ ವಿಜಯೇಂದ್ರ ಹೇಳಿದ್ದೇನು?
ಹಾಗಾದ್ರೆ, ಸಿದ್ದರಾಮಯ್ಯರ ಮುಂದಿನ ದಾರಿಯೇನು? ಸಿದ್ದರಾಮಯ್ಯರ ಕಾನೂನು ಹೋರಾಟ ಹೇಗಿರುತ್ತೆ? ಸಿದ್ದು ಪಟ್ಟಕ್ಕೆ ಕುತ್ತು ಬರುತ್ತಾ? ಸಿದ್ದು ವಿರುದ್ಧ ದೂರು ಕೊಟ್ಟವರು ಬಳಸೋ ಅಸ್ತ್ರಗಳು ಯಾವುವು? ಈ ಪ್ರಶ್ನೆಗಳ ರೋಚಕ ಉತ್ತರ ನೋಡೋಕೂ ಮೊದ್ಲು, ನ್ಯಾಯಮೂರ್ತಿ ನಾಗಪ್ರಸನ್ನರ ಏಕಸದಸ್ಯ ಪೀಠ ನೀಡಿದ ಸಿದ್ದು ಪಾಲಿನ ಶಾಕಿಂಗ್ ತೀರ್ಪಿನ ಪುಟಗಳಲ್ಲಿ ಇರೋ ಲಾ ಪಾಯಿಂಟ್‌ಗಳು ಇಲ್ಲಿದೆ ನೋಡಿ.
40 ವರ್ಷದ ರಾಜಕಾರಣ..ಸಿದ್ದು ವಿರುದ್ಧ ಮೊಟ್ಟ ಮೊದಲ ತನಿಖೆ!
ಸಿಎಂ ಮುಂದಿನ ದಾರಿಗಳೇನು? ವಿರೋಧಿಗಳು ಏನ್ ಮಾಡ್ತಾರೆ?
40 ವರ್ಷ.. ಭರ್ತಿ 40 ವರ್ಷಗಳ ಸುದೀರ್ಘ ರಾಜಕೀಯ ಹಾದಿಯಲ್ಲಿ ಸಿದ್ದರಾಮಯ್ಯಗೆ ಇಂಥಾದ್ದೊಂದು ಕಾನೂನು ಸಂಕಷ್ಟ, ಸವಾಲು ಎದುರಾಗಿರಲೇ ಇಲ್ಲ. ಈಗ ಸಿಎಂ ಆಗಿರೋ ಹೊತ್ತಲ್ಲೇ ಸಿದ್ದುಗೆ ತನಿಖಾ ಸುಳಿ ಸುತ್ತಿಕೊಂಡಿದೆ. ಮುಡಾ ಸೈಟ್ ಹಗರಣ ಆರೋಪ ಸಿದ್ದರಾಮಯ್ಯ ಸಂಕಷ್ಟ ತಂದಿಟ್ಟಿದೆ. ಹಾಗಾದ್ರೆ, ಹೈಕೋರ್ಟ್‌ನಲ್ಲಿ ಹೊರಬಿದ್ದಿರೋ ಸಿದ್ದು ಪಾಲಿನ ಶಾಕಿಂಗ್ ತೀರ್ಪಿನ ಮೊದಲ ಲಾ ಪಾಯಿಂಟ್ ಅಂದ್ರೆ ರಾಜ್ಯಪಾಲರು ತೆಗೆದುಕೊಂಡಿರೋ ನಿರ್ಧಾರ ಸರಿಯಿದೆ ಅನ್ನೋದು.
ಎಂದು ರಾಜ್ಯಪಾಲರು ಸಿದ್ದು ವಿರುದ್ಧ ತನಿಖೆಗೆ ಆದೇಶ ನೀಡಿದ್ರೋ ಅಂದಿನಿಂದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಮಾಡ್ತಿರೋ ಆರೋಪ ಇದೇ ಆಗಿತ್ತು. ರಾಜ್ಯಪಾಲರಿಗೆ ಸ್ವಇಚ್ಛೆಯಿಂದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೇ ಇಲ್ಲ ಅನ್ನೋದು. ಸಂಪುಟ ತೆಗೆದುಕೊಳ್ಳುವ ತೀರ್ಮಾನದ ಪ್ರಕಾರವೇ ರಾಜ್ಯಪಾಲರು ನಡೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ವಾದವಾಗಿತ್ತು. ಕೋರ್ಟ್‌ನಲ್ಲಿಯೂ ಸಿದ್ದು ಪರ ವಕೀಲರು ಇದೇ ಲಾ ಪಾಯಿಂಟ್ ಹಾಕಿದ್ದರು. ಈ ವಾದಕ್ಕೆ ಹೈಕೋರ್ಟ್ ಸೊಪ್ಪು ಹಾಕಿಲ್ಲ. ರಾಜ್ಯಪಾಲರು ಸಂಪುಟ ಹೇಳಿದಂತೆಯೇ ನಡೆದುಕೊಳ್ಳಬೇಕು ಎಂಬುದೆಲ್ಲ ಇಲ್ಲ. ಸ್ವಇಚ್ಛೆಯಿಂದಲೂ ನಿರ್ಧಾರ ತೆಗೆದುಕೊಳ್ಳಬಹುದು. ಅದೇ ರೀತಿಯಲ್ಲಿ ಅವರು ನಿರ್ಧಾರ ತಗೊಂಡಿದ್ದಾರೆ ಅಂತಾ ಆದೇಶ ನೀಡಿದೆ.
ರಾಜ್ಯಪಾಲರು ತಮ್ಮ ವಿರುದ್ಧ ಮಾಡಿದ್ದ ತನಿಖೆ ಆದೇಶವನ್ನ ರದ್ದುಗೊಳಿಸುವಂತೆ ಸಿದ್ದರಾಮಯ್ಯ ಅರ್ಜಿ ಹಾಕಿದ್ದರು. ಸಿದ್ದು ಪರ ವಕೀಲರು ಪ್ರಯೋಗಿಸಿದ್ದ ಮತ್ತೊಂದು ಸ್ಟ್ರಾಂಗ್ ಲಾ ಪಾಯಿಂಟ್ ಅಂದ್ರೆ ರಾಜಕೀಯ ಪ್ರೇರಿತ ನಿರ್ಧಾರ. ಈ ಆರೋಪ, ಲಾ ಪಾಯಿಂಟ್‌ಗೂ ಕೋರ್ಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ. ರಾಜ್ಯಪಾಲರು ತೆಗೆದುಕೊಂಡಿರೋ ನಿರ್ಧಾರದಲ್ಲಿ ಯಾವುದೇ ಯಾವುದೇ ಲೋಪದೋಷ, ದುರುದ್ದೇಶ ಇಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ.
ಹೈಕೋರ್ಟ್ ತೀರ್ಪಿನಲ್ಲಿ ಸಿದ್ದು ಪಾಲಿಗೆ ಅತಿದೊಡ್ಡ ಶಾಕ್ ಆಗಿರೋ ಲಾ ಪಾಯಿಂಟ್ ಏನ್ ಗೊತ್ತಾ? ಸಿದ್ದರಾಮಯ್ಯ ಕುಟುಂಬ ಮುಡಾ ಸೈಟು ಹಂಚಿಕೆಯಲ್ಲಿ ಫಲಾನುಭವಿಗಳು ಆಗಿದೆ. ಹಾಗಾಗಿ, ಅಕ್ರಮ ನಡೆದಿದ್ಯೋ ಇಲ್ವೋ ಅನ್ನೋದು ಗೊತ್ತಾಗಲಿಕ್ಕೆ ತನಿಖೆ ಆಗಲೇಬೇಕಿದೆ ಅಂತಾ ಹೈಕೋರ್ಟ್ ನೀಡಿರೋ ಆದೇಶ.
‘ಸಿದ್ದು ಕುಟುಂಬ ಫಲಾನುಭವಿ.. ತನಿಖೆ ಆಗಲಿ’!
ಮುಡಾ ಕೇಸ್ ದಾಖಲೆ ನೋಡಿ ಹೈಕೋರ್ಟ್ ಹೇಳಿದ್ದೇನು?
ಮುಡಾದಲ್ಲಿ ಸಿದ್ದರಾಮಯ್ಯ ಕುಟುಂಬ ಸೈಟುಗಳನ್ನು ಪಡೆದಿರೋದು ನಿಜ. ಜೊತೆಯಲ್ಲಿ, ಅದು ಅಕ್ರಮ ರೂಪದಲ್ಲಿ ಪಡೆದಿರೋ ಸೈಟುಗಳು ಎಂಬ ಆರೋಪವಿದೆ ಎಂಬುದು ಸ್ಪಷ್ಟ ಎಂದಿರೋ ಹೈಕೋರ್ಟ್ ಈ ಕೇಸ್‌ನಲ್ಲಿ ಕೂಲಂಕುಷ ತನಿಖೆ ಆಗಲೇಬೇಕು ಎಂದು ತೀರ್ಪು ನೀಡಿದೆ.
ಸಿದ್ದು ಪರ ವಕೀಲರು ನ್ಯಾಯಮೂರ್ತಿ ನಾಗಪ್ರಸನ್ನರ ಪೀಠದ ಎದುರು ಪ್ರಯೋಗಿಸಿದ್ದ ಕಾನೂನು ಅಸ್ತ್ರಗಳು ಒಂದೆರಡಲ್ಲ. ರಾಜ್ಯಪಾಲರು ತರಾತುರಿಯಲ್ಲಿ ತನಿಖೆಗೆ ಆದೇಶ ನೀಡೋ ನಿರ್ಧಾರ ಮಾಡಿದ್ದಾರೆ ಅನ್ನೋದು. ಈ ವಾದವನ್ನ ತುಂಬಾ ಸ್ಟ್ರಾಂಗ್ ಆಗಿ ಮಂಡಿಸಿದ್ದ ಸಿದ್ದು ಪರ ವಕೀಲರಿಗೆ ಕೋರ್ಟ್‌ನಲ್ಲಿ ಗೆಲುವು ಸಿಗೋ ನಿರೀಕ್ಷೆ ಹುಸಿಯಾಗಿದೆ. ಯಾಕಂದ್ರೆ, ತರಾತುರಿ ನಿರ್ಧಾರ ಎಂಬ ವಾದವನ್ನ ಕೋರ್ಟ್ ಸಾರಾಸಗಟಾಗಿ ತೆಗೆದು ಹಾಕಿದೆ. ಅಲ್ಲದೆ, ಈ ನಿರ್ಧಾರ ತೆಗೆದುಕೊಳ್ಳುವ ವೇಗ, ಸಮಯದ ವಿಚಾರವಾಗಿ ಕಡ್ಡಿ ತುಂಡು ಮಾಡಿದಂತೆ ಒಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೊಡ್ಡ ಹಿನ್ನಡೆ.. ಏನಿದು ಮುಡಾ ಹಗರಣ..?
ಬೇಗನೆ ಆದೇಶ ಮಾಡೋದು, ತಡವಾಗಿ ಆದೇಶ ಮಾಡೋದು ಎಂಬುದೇ ಸರಿಯಲ್ಲ ಅಂತಾ ಕೋರ್ಟ್ ಹೇಳಿದೆ. ಕೇಸ್‌ನ ಮೆರಿಟ್ಸ್ ಮೇಲೆ ಆದೇಶ ನೀಡಬೇಕಿತ್ತು ಅದನ್ನು ರಾಜ್ಯಪಾಲರು ಮಾಡಿದ್ದಾರೆ ಅನ್ನೋದು ತಿಳಿದುಬಂದಿರೋದಾಗಿ ಹೈಕೋರ್ಟ್ ತೀರ್ಪಿತ್ತಿದೆ. ಜೊತೆಯಲ್ಲಿ, ಸೆಕ್ಷನ್ 17 ಎ ನಲ್ಲಷ್ಟೇ ತನಿಖೆ ನಡೆಯುತ್ತೆ ಅಂತಾ ದೂರುದಾರರ ಪರ ವಕೀಲರು ಮಾಹಿತಿ ಕೊಟ್ಟಿದ್ದಾರೆ.
ಈ ಲಾ ಪಾಯಿಂಟ್‌ಗಳಿಗೆ ಬೆಲೆ ಬರೋದು ದಾಖಲೆಗಳ ಮೇಲೆ. ದಾಖಲೆಗಳಲ್ಲಿ ಏನಿದೆ? ಏನಿಲ್ಲ ಅನ್ನೋದರ ಮೇಲಷ್ಟೇ ನಾವು ಮಂಡಿಸೋ ವಾದಕ್ಕೆ ಶಕ್ತಿ ಬರೋದು. ಇಲ್ಲಿ, ಸಿದ್ದು ವಿರುದ್ಧದ ಮುಡಾ ಕೇಸ್‌ನಲ್ಲಿಯೂ ಡ್ಯಾಕ್ಯುಮೆಂಟ್ಸ್‌ಗಳನ್ನು ನೋಡಿದ ಮೇಲೆಯೇ ಕೋರ್ಟ್ ಈ ತೀರ್ಪು ನೀಡಿದೆ ಅನ್ನೋದು ದೂರುದಾರರ ಪರ ವಕೀಲರ ವಾದ.
ಯಾಕಂದ್ರೆ. ಸಿದ್ದರಾಮಯ್ಯ ಬಾಮೈದ, ಸಿದ್ದು ಪತ್ನಿಗೆ ಗಿಫ್ಟ್‌ಡೀಡ್ ಮಾಡಿಕೊಟ್ಟಿರೋ 14 ಸೈಟುಗಳನ್ನು ಖರೀದಿ ಮಾಡಿರೋದು ಕೇವಲ 4 ಲಕ್ಷಕ್ಕೆ. ಯಾರು ಓನರ್ ಅಂತ ತೋರಿಸಲಾಗಿತ್ತೋ ಅವರು ಆ ಸೈಟ್‌ನ ಮಾಲೀಕರೇ ಆಗಿಲ್ಲ. ಇದುವೇ ಅನುಮಾನ ಹುಟ್ಟುವಂತೆ ಮಾಡಿದೆ. ಇದುವೇ ಕೋರ್ಟ್‌ನಲ್ಲಿ ಸಿದ್ದು ವಿರುದ್ಧ ತೀರ್ಪು ಬರಲು ಕಾರಣ ಅನ್ನೋದು ಕಾನೂನು ಪಂಡಿತರ ವಾದ.
ರಾಜ್ಯಪಾಲರ ತನಿಖಾ ಆದೇಶವನ್ನು ರದ್ದು ಕೋರಿ ಸಿದ್ದು ಪರ ವಕೀಲರು ಯಾವ್ಯಾವ ಲಾ ಪಾಯಿಂಟ್ ಹಾಕಿದ್ರೋ ಆ ಎಲ್ಲವೂ ಡಮ್ಮಿಯಾಗಿವೆ. ಹಾಗಾಗಿ ರಾಜ್ಯಪಾಲರು ಮಾಡಿರೋ ಆದೇಶ ಸರಿಯಿದ್ದು ಸಿದ್ದರಾಮಯ್ಯ ವಿರುದ್ಧ ತನಿಖೆ ಆಗಲಿ ಅಂತಾ ಹೈಕೋರ್ಟ್ ತೀರ್ಪು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ